ಬಿಜೆಪಿಯವರೇನು ಸೂಟ್‌ಕೇಸ್‌ ಕೊಟ್ಟು ಕಳುಹಿಸುತ್ತಿದ್ರಾ?: ಸಚಿವ ಸಂತೋಷ್‌ ಲಾಡ್‌ ತಿರುಗೇಟು

Published : Dec 20, 2025, 10:31 PM IST
Santosh Lad

ಸಾರಾಂಶ

ಬಿಜೆಪಿಯವರು ತಮ್ಮ ಸರ್ಕಾರದ ಅವಧಿಯಲ್ಲಿ ಅಧಿವೇಶನ ಮುಗಿಯುತ್ತಿದ್ದಂತೆ ಶಾಸಕರಿಗೆಲ್ಲ ಸೂಟ್‌ ಕೇಸ್‌ ಕೊಟ್ಟು ಕಳುಹಿಸುತ್ತಿದ್ದರಾ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಪ್ರತಿಪಕ್ಷದವರ ಟೀಕೆಗೆ ತಿರುಗೇಟು ನೀಡಿದ್ದಾರೆ.

ಸುವರ್ಣ ವಿಧಾನಸೌಧ (ಡಿ.20): ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ, ಬರಿಗೈಲಿ ಹೋಗುವಂತಾಗಿದೆ ಎಂಬ ಪ್ರತಿಪಕ್ಷದವರ ಟೀಕೆಗೆ ತಿರುಗೇಟು ನೀಡಿರುವ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಬಿಜೆಪಿಯವರು ತಮ್ಮ ಸರ್ಕಾರದ ಅವಧಿಯಲ್ಲಿ ಅಧಿವೇಶನ ಮುಗಿಯುತ್ತಿದ್ದಂತೆ ಶಾಸಕರಿಗೆಲ್ಲ ಸೂಟ್‌ ಕೇಸ್‌ ಕೊಟ್ಟು ಕಳುಹಿಸುತ್ತಿದ್ದರಾ ಎಂದು ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಉಭಯ ಸದನಗಳಲ್ಲಿ ಸುದೀರ್ಘ ಚರ್ಚೆ ನಡೆದರೂ ಯಾವುದೇ ಪರಿಹಾರ ಸಿಕ್ಕಿಲ್ಲ.

ಈ ಭಾಗದ ಶಾಸಕರೆಲ್ಲ ಬರಿಗೈಲಿ ವಾಪಸ್‌ ಹೋಗುವಂತಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ರಲ್ವಾ ಎಂಬ ಪ್ರಶ್ನೆಗೆ, ಬರಿಗೈಲಿ ಹೋಗುವುದು ಅಂದ್ರೆ ಏನರ್ಥ? ಎಂದರು. ಬಿಜೆಪಿಯವರ ಅಧಿಕಾರಾವಧಿಯಲ್ಲಿ ಸದನ ಮುಗಿಯುತ್ತಿದ್ದಂತೆ ಶಾಸಕರಿಗೆ ಸೂಟ್‌ ಕೇಸ್‌ ಕೊಟ್ಟು ಕಳುಹಿಸುತ್ತಿದ್ದರಾ? ಇಲ್ಲಾ ಸದನದಲ್ಲೇ ಎಲ್ಲಾ ಸಮಸ್ಯೆ ಬಗೆಹರಿಸಿಬಿಡುತ್ತಿದ್ದರಾ? ಎರಡೂ ಸದನಗಳಲ್ಲಿ ಉತ್ತಕ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಸರ್ಕಾರ ಸಾಕಷ್ಟು ಅವಕಾಶ ನೀಡಿದೆ. ಉಭಯ ಪಕ್ಷಗಳ ಸದಸ್ಯರೂ ಅನೇಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ.

ಸರ್ಕಾರದ ಗಮನಕ್ಕೆ ಬಂದಿರುವ ಸಮಸ್ಯೆಗಳನ್ನು ಪರಿಹರಿಸಲು ಮುಂದೆ ಮುಖ್ಯಮಂತ್ರಿ ಅವರು, ಸಂಬಂಧಪಟ್ಟ ಸಚಿವರು ಅಗತ್ಯ ಕೆಲಸ ಮಾಡುತ್ತಾರೆ ಎಂದರು. ದ್ವೇಷ ಭಾಷಣಕ್ಕೆ ಬಿಜೆಪಿಯವರ ವಿರೋಧ ಕುರಿತ ಪ್ರಶ್ನೆಗೆ, ಯಾರು ಯಾರನ್ನಾದರೂ ದ್ವೇಷಿಸಿ ಭಾಷಣ ಮಾಡಬಹುದಾ? ಅದು ಸರಿನಾ? ನಮಗೆ ಅಧಿಕಾರವಿದೆ ಇಂಥದ್ದನ್ನು ತಡೆಯಲು. ಅದಕ್ಕಾಗಿಯೇ ಕಾನೂನು ತಂದಿದ್ದೇವೆ. ಬಿಜೆಪಿಯವರಿಗೆ ಸಮಸ್ಯೆ ಏನು ಎಂದು ಪ್ರಶ್ನಿಸಿದರು.

ಗ್ರಾಪಂ. ಗ್ರಂಥಪಾಲಕರಿಗೆ ಡಿಬಿಟಿ ಮೂಲಕ ವೇತನಕ್ಕೆ ಕ್ರಮ

‘ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿರುವ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ವೇತನವನ್ನು ಡಿಬಿಟಿ ಮೂಲಕ ಪಾವತಿಸಲು ಕ್ರಮ ವಹಿಸಲಾಗುವುದು’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಭರವಸೆ ನೀಡಿದರು. ಬಿಜೆಪಿಯ ಡಿ.ಎಸ್‌.ಅರುಣ್‌ ಅವರ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಪರವಾಗಿ ಉತ್ತರಿಸಿದ ಸಚಿವರು. ಗ್ರಂಥಾಲಯ ಮೇಲ್ವಿಚಾರಕರಿಗೆ ಮಾಸಿಕ ಕನಿಷ್ಟ ವೇತನ 16,382 ರು. ಮತ್ತು ವಾರ್ಷಿಕವಾಗಿ ವ್ಯತ್ಯಾಸವಾಗುವ ತುಟ್ಟಿಭತ್ಯೆಯನ್ನು ಪಾವತಿಸಲು ಆದೇಶಿಲಾಗಿದೆ.

ಕನಿಷ್ಟ ವೇತನದಲ್ಲಿ ವ್ಯತ್ಯಾಸವಾಗುವ ಮೊತ್ತವನ್ನು ಗ್ರಾ.ಪಂ.ಗಳಲ್ಲಿ ಸಂಗ್ರಹವಾಗುವ ಶೇ.6 ಗ್ರಂಥಾಲಯ ಉಪಕರದ ಮೂಲಕ ನೀಡಲು ಆದೇಶ ಮಾಡಲಾಗಿದೆ. ಆದರೆ ಅನ್ಯ ಕಾರಣಗಳಿಂದ ವ್ಯತ್ಯಾಸವಾದ ಹಣವನ್ನು ಮುಂದೆ ಕೊಡಲಾಗುವುದು. ವಿಶೇಷವಾಗಿ 5436 ಗ್ರಂಥಾಲಯ ಮೇಲ್ವಿಚಾರಕರಿಗೆ ಡಿಬಿಟಿ ಮೂಲಕ ವೇತನವನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು. ಇದಕ್ಕೂ ಮುನ್ನ ಮಾತನಾಡಿದ ಡಿ.ಎಸ್‌. ಅರುಣ್‌, ಗ್ರಂಥಾಲಯ ಮೇಲ್ವಿಚಾರಕರಿಗೆ ನೀಡುತ್ತಿರುವ ಮಾಸಿಕ ವೇತನ ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತ ಕಡಿಮೆಯಾಗಿದೆ. ಐಟಿ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದರೂ ಸಹ ಇವರಿಗೆ ಡಿಬಿಟಿ ಮೂಲಕ ವೇತನ ನೀಡದೇ ಇರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನ್ನ ಕೆಲಸ ಸಹಿಸದೆ ಭೂಕಬಳಿಕೆ ಆರೋಪ, ಯಾವುದೇ ತನಿಖೆಗೂ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಸಿಎಂ ರಾಂಗ್‌ ಫ್ಲೈಟ್‌ ಹತ್ತಿದ್ದಾರೆ: ಸಿದ್ಧರಾಮಯ್ಯ ವಿರುದ್ಧ ಆರ್‌.ಅಶೋಕ್‌ ಗರಂ!