ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ ಯೋಜನೆಗೆ ಆಗಸ್ಟ 5 ರಂದು ಚಾಲನೆ ದೊರೆಯಲಿದ್ದು, ಜಿಲ್ಲೆಯ 3.10 ಲಕ್ಷ ವಿದ್ಯುತ್ ಫಲಾನುಭವಿಗಳು ಇದರ ಲಾಭ ಪಡೆಯಲಿದ್ದಾರೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದರು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಜು.31): ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ ಯೋಜನೆಗೆ ಆಗಸ್ಟ 5 ರಂದು ಚಾಲನೆ ದೊರೆಯಲಿದ್ದು, ಜಿಲ್ಲೆಯ 3.10 ಲಕ್ಷ ವಿದ್ಯುತ್ ಫಲಾನುಭವಿಗಳು ಇದರ ಲಾಭ ಪಡೆಯಲಿದ್ದಾರೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದರು. ಬಾಗಲಕೋಟೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಾದ ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು 200 ಯುನಿಟ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 437482 ವಿದ್ಯುತ್ ಗ್ರಾಹಕರ ಪೈಕಿ 310589 ಫಲಾನುಭವಿಗಳು ನೊಂದಾಯಿಸಿದ್ದು, ಶೇ.70.99 ರಷ್ಟು ಪ್ರಗತಿಯಾಗಿದೆ.
ನೊಂದಣಿಗೆ 1,26,893 ಬಾಕಿ ಉಳಿಸಿದ್ದು, ಕ್ರಮಕೈಗೊಳ್ಳಲು ಹೆಸ್ಕಾಂ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಪ್ರಭಾರಿ ಹೆಸ್ಕಾಂ ಅಧೀಕ್ಷಕ ಅಭಿಯಂತರ ಕಲೀಮ ಅಹಮ್ಮದ ಮಾತನಾಡಿ ಗೃಹಜ್ಯೋತಿ ಯೋಜನೆಯಡಿ ಜುಲೈ 27 ವರೆಗೆ ನೊಂದಣಿ ಮಾಡಿದ ಫಲಾನುಭವಿಗಳಿಗೆ ಆಗಸ್ಟ ಮಾಹೆಯಲ್ಲಿ ಬರುವ ವಿದ್ಯುತ್ ಬಿಲ್ಲಿಗೆ ಅನ್ವಯವಾಗಲಿದೆ. ಜುಲೈ 27ರ ನಂತರ ನೊಂದಣಿ ಮಾಡಿದ ಫಲಾನುಭವಿಗಳಿಗೆ ಸೆಪ್ಟೆಂಬರ ಮಾಹೆಯಲ್ಲಿ ಬರುವ ವಿದ್ಯುತ್ ಬಿಲ್ಲಿಗೆ ಅನ್ವಯವಾಗಲಿದೆ. ಯೋಜನೆಯನ್ನು ಪ್ರತಿಯೊಂದು ಗೃಹಜ್ಯೋತಿ ಹೊಂದಿದ ಮನೆಗಳ ನೊಂದಣಿಗೆ ಕ್ರಮವಹಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ NCC ಕೆಡೆಟ್‍ಗಳಿಗೆ ರಾಜ್ಯಪಾಲ ಅಭಿನಂದನೆ
ಅಲ್ಲದೇ ಆಗಸ್ಟ 5 ರಂದು ಯೋಜನೆಗೆ ಚಾಲನೆ ದೊರೆಯಲಿದ್ದು, ಜಿಲ್ಲಾ ಮಟ್ಟದಲ್ಲಿಯೂ ಸಹ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು. ಅನ್ನಭಾಗ್ಯ ಯೋಜನೆಯಡಿ ಪ್ರಗತಿ ಪರಿಶೀಲನೆ ಮಾಡಿದ ಸಚಿವರು. ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಅನ್ನ ಯೋಜನೆಯಡಿ 14,868 ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದಲ್ಲಿ 3 ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬಗಳಿಗೆ 35 ಕೆ.ಜಿ ಆಹಾರಧಾನ್ಯ ಪಡೆಯುತ್ತಿರುವದರಿಂದ ಅವರಿಗೆ ನಗದು ಸೌಲಭ್ಯ ನೀಡಲಾಗುತ್ತಿಲ್ಲ. ಈಗಾಗಲೇ ಎನ್.ಐ.ಸಿಯಿಂದ ಸ್ವೀಕೃತಗೊಂಡ 2,99,293 ಪಡಿತರ ಚೀಟಿದಾರರ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಒಟ್ಟು 17,78,08,440 ರೂ.ಗಳನ್ನು ಜಮೆ ಮಾಡಲಾಗಿದೆ.
ಬಾಕಿ 1,19,222 ಉಳಿದಿದ್ದು, ಕ್ರಮವಹಿಸಲು ಆಹಾರ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಪುರುಷರು 59.89 ಲಕ್ಷ ಪ್ರಯಾಣಿಕರಿದ್ದರೆ, ಮಹಿಳೆಯರು ಪ್ರಯಾಣಿಕರು 30,73,966 ಇದ್ದಾರೆ. ಪುರುಷರಿಂದ 10.53 ಕೋಟಿ ರೂ.ಗಳ ಆದಾಯವಿದ್ದರೆ, ಮಹಿಳಾ ಪ್ರಯಾಣಿಕರಿಂದ 9.93 ಕೋಟಿ ರೂ.ಗಳ ಆದಾಯ ಬರುತ್ತಿದೆ. ಒಟ್ಟು ಆದಾಯ 20.25 ಕೋಟಿ ರೂ.ಗಳಷ್ಟಾಗಿದೆ ಎಂದು ವಾ.ಕ.ರ.ಸಾ.ಸಂಸ್ಥೆಯ ಡಿಟಿಓ ಮೈತ್ರಿ ಅವರು ಸಭೆಗೆ ತಿಳಿಸಿದರು. ಅಂತರರಾಜ್ಯ ಬಸ್‍ಗಳಲ್ಲಿ ರಾಜ್ಯದ ಬಾರ್ಡರ ವರೆಗೆ ಪ್ರಯಾಣಕ್ಕೆ ಅವಕಾಶ ಕೊಟ್ಟಲ್ಲಿ ಇನ್ನು ಮಹಿಳೆಯರಿಗೆ ಇನ್ನಷ್ಟು ಅನುಕೂಲವಾಗುವ ಜೊತೆಗೆ ಸಂಸ್ಥೆಗೆ ಆದಾಯ ಕೂಡಾ ಹೆಚ್ಚಾಗಲಿದೆ ಎಂದು ಮೈತ್ರಿ ತಿಳಿಸಿದರು.
ಗೃಹಲಕ್ಷ್ಮೀ ಯೋಜನೆಯಲ್ಲಿ ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, 428100 ಫಲಾನುಭವಿಗಳ ಪೈಕಿ 2,78,458 ನೊಂದಣಿಯಾಗಿ ಶೇ.65 ರಷ್ಟು ಪ್ರಗತಿಯಾಗಿದೆ. ನೊಂದಣಿಗೆ ಮೇಲುಸ್ತುವಾರಿಯಾಗಿ ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದ್ದು, ಜಿಲ್ಲೆಯ195 ಬಾಪೂಜಿ ಸೇವಾ ಕೇಂದ್ರ, 54 ನಗರಸಭೆಯ ಸೇವಾ ಕೇಂದ್ರಗಳು, 160 ಗ್ರಾಮ ಒನ್ ಹಾಗೂ 22 ಕರ್ನಾಟಕ ಒನ್ ಕೇಂದ್ರಗಳ ಮೂಲಕ ನೊಂದಣಿ ಮಾಡಲಾಗುತ್ತಿದೆ. ಅಲ್ಲದೇ ನೊಂದಣಿಗೆ ಪ್ರಜಾಪ್ರತಿನಿಧಿಗಳನ್ನು ಸಹ ನೇಮಿಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿದೆ.
Chikkamagaluru: ಸಾಂಪ್ರಾದಾಯಿಕ ಶೈಲಿಯಲ್ಲಿ ಗದ್ದೆ ನಾಟಿ ಮಾಡಿದ ಮಲೆನಾಡಿಗರು
ಸಾವಿರಕ್ಕೆ ಇಬ್ಬರಂತೆ ಒಟ್ಟು 4189 ಜನ ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಿಕೊಳ್ಳಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್ ಸಭೆಗೆ ತಿಳಿಸಿದರು. ಸಭೆಯಲ್ಲಿ ಶಾಸಕರಾದ ಎಚ್.ವಾಯ್.ಮೇಟಿ, ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ಜಗದೀಶ ದುಡಗುಂಟಿ, ಭೀನಸೇನ ಚಿಮ್ಮನಕಟ್ಟಿ, ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿ.ಪಂ ಸಿಇಓ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಉಪ ವಿಭಾಗಾಧಿಕಾರಿಗಳಾದ ಶ್ವೇತಾ ಬೀಡಿಕರ, ಸಂತೋಷ ಕಾಮಗೌಡ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.