ನೀವು ಒಬ್ಬ ದೇಶದ ಮಾರಕ ಪ್ರಧಾನಿ ಆಗ್ತೀರಿ: ಮೋದಿ ವಿರುದ್ಧ ಹರಿಹಾಯ್ದ ತಿಮ್ಮಾಪುರ

By Girish Goudar  |  First Published Nov 2, 2024, 6:55 PM IST

 ನಾವು ಪಂಚ ಗ್ಯಾರಂಟಿ ಯೋಜನೆಗಳನ್ನ ಕೊಟ್ಟಿದ್ದೇವೆ. ಕಟ್ಟ ಕಡೆ ವ್ಯಕ್ತಿ ಗುಡಿಸಲಿನಲ್ಲಿದ್ರೂ ಬೆಳಕು ಚೆಲ್ಲುವಂತ ಕೆಲಸ ಮಾಡಿದ್ದೇವೆ. ಮನೆ ಯಜಮಾನಿ ಖಾತೆಯಲ್ಲಿ ಹಣ ಇಲ್ಲ ಅಂತ ನೋವಾಗಬಾರದು ಅಂತ 2000 ರೂ. ಹಣ ನೀಡಿದ್ದೇವೆ. ಇಷ್ಟೆಲ್ಲ ನಾವು ಕೊಡುವಾಗ, ಈ ದೇಶದ ಪ್ರಧಾನಿ ಸಣ್ಣತನದ ಮಾತುಗಳನ್ನು ಮಾತನಾಡುವುದು ಸರಿನಾ?: ಸಚಿವ ಆರ್. ಬಿ. ತಿಮ್ಮಾಪುರ 
 


ಬಾಗಲಕೋಟೆ(ನ.02):  ನೀವು ಒಬ್ಬ ದೇಶದ ಮಾರಕ ಪ್ರಧಾನಿ ಆಗ್ತೀರಿ, ಅದು ಆಗಬಾರದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಸಚಿವ ಆರ್. ಬಿ. ತಿಮ್ಮಾಪುರ ಲೇವಡಿ ಮಾಡಿದ್ದಾರೆ. 

ನಮೋ ಗ್ಯಾರಂಟಿ ಸರ್ಕಾರದ ಬಗ್ಗೆ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಆರ್. ಬಿ. ತಿಮ್ಮಾಪುರ ಅವರು, ನಾವು ಪಂಚ ಗ್ಯಾರಂಟಿ ಯೋಜನೆಗಳನ್ನ ಕೊಟ್ಟಿದ್ದೇವೆ. ಕಟ್ಟ ಕಡೆ ವ್ಯಕ್ತಿ ಗುಡಿಸಲಿನಲ್ಲಿದ್ರೂ ಬೆಳಕು ಚೆಲ್ಲುವಂತ ಕೆಲಸ ಮಾಡಿದ್ದೇವೆ. ಮನೆ ಯಜಮಾನಿ ಖಾತೆಯಲ್ಲಿ ಹಣ ಇಲ್ಲ ಅಂತ ನೋವಾಗಬಾರದು ಅಂತ 2000 ರೂ. ಹಣ ನೀಡಿದ್ದೇವೆ. ಇಷ್ಟೆಲ್ಲ ನಾವು ಕೊಡುವಾಗ, ಈ ದೇಶದ ಪ್ರಧಾನಿ ಸಣ್ಣತನದ ಮಾತುಗಳನ್ನು ಮಾತನಾಡುವುದು ಸರಿನಾ?. ನಾವೇನ್ ಇವತ್ತು ಬಂದ್ ಮಾಡಲು ಹೊರಟಿದ್ದೇವಾ? ಎಂದು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. 

Tap to resize

Latest Videos

undefined

ಕಾಂಗ್ರೆಸ್ ಸರ್ಕಾರ ಗ್ಯಾರಂಟಿಯೊಂದಿಗೆ ಅಭಿವೃದ್ಧಿಗೂ ಒತ್ತು: ಸಚಿವ ಆರ್.ಬಿ.ತಿಮ್ಮಾಪೂರ

ಸಿಲೆಂಡರ್ ರೇಟು ಯಾರಾದ್ರೂ ಸಬ್ಸಿಡಿ ಬ್ಯಾಡ ಅಂದ್ರೆ ಬಿಟ್ಟುಕೊಡಿ ಅಂತ ಹೇಳಬಹುದು. ನಾವ್ಯಾರಾದ್ರೂ ನೀವು ಶಸಕ್ತರಾಗಿದ್ದರೆ ಬಿಟ್ಟು ಕೊಡಿ ಅಂತ ಹೇಳೋದು ತಪ್ಪಾ?. ಈ ದೇಶದ ಪ್ರಧಾನಿಗಳು ಗಡಿ ರೇಖೆಗಳ ಬಗ್ಗೆ ಚರ್ಚೆ ಮಾಡೋದು ಬಿಟ್ಟು, ಯಾವಾಗಲೂ ಅವರು ಸಣ್ಣ ಸಣ್ಣ ವಿಚಾರದ ಬಗ್ಗೆ ಮಾತನಾಡಿರೋದು ನಮಗೆ ಬೇಸರ ತಂದಿದೆ ಎಂದು ತಿಳಿಸಿದ್ದಾರೆ. 

ಗ್ಯಾರಂಟಿ ಯೋಜನೆ ಬಗ್ಗೆ ನಮ್ಮ ಅಧ್ಯಕ್ಷರು ಮಾತನಾಡಿದ್ದಾರೆ. ಕೆಲವು ಜನ ಹೆಣ್ಣು ಮಕ್ಕಳು ನಾವು ಶಸಕ್ತರಾಗಿದ್ದೇವೆ ಅಂತ ಹೇಳಿದ್ದಾರೆ. ನೀವು ಏನ್ ಮಾಡಿದ್ದೀರಿ ಹೇಳಿ ದೇಶದ ಜನತೆಗೆ ಏನು ಕೊಡುಗೆ ಕೊಟ್ಟಿದ್ದೀರಿ?. ನಿಮ್ಮ ಕೊಡುಗೆ ಅಂದರೆ ಈ ದೇಶದ ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಿಗೆ ಮಾಡಿದ್ದೀರಿ. ನೀವು ಒಬ್ಬ ದೇಶದ ಮಾರಕ ಪ್ರಧಾನಿ ಆಗ್ತೀರಿ ಅದು ಆಗಬಾರದು ಎಂದು ಆರ್. ಬಿ. ತಿಮ್ಮಾಪುರ್ ಲೇವಡಿ ಮಾಡಿದ್ದಾರೆ. 

click me!