ಯತ್ನಾಳ್ ಮಾತಿಗೆ ಯಾರೂ ಬೆಲೆ ಕೊಡಲ್ಲ. ಬಿಜೆಪಿಯಲ್ಲಿ ಕೆಲವರನ್ನು ಒದರಲು ಇಟ್ಟುಕೊಂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಚಿವ ಆರ್‌ಬಿ ತಿಮ್ಮಾಪುರ ವಾಗ್ದಾಳಿ ನಡೆಸಿದರು.
ಕೊಪ್ಪಳ (ಸೆ.15): ಯತ್ನಾಳ್ ಮಾತಿಗೆ ಯಾರೂ ಬೆಲೆ ಕೊಡಲ್ಲ. ಬಿಜೆಪಿಯಲ್ಲಿ ಕೆಲವರನ್ನು ಒದರಲು ಇಟ್ಟುಕೊಂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಚಿವ ಆರ್‌ಬಿ ತಿಮ್ಮಾಪುರ ವಾಗ್ದಾಳಿ ನಡೆಸಿದರು.
ಮನೆಯಲ್ಲಿ ಚಾಕು ಇರೋದು ಈರಳ್ಳಿ ಹೆಚ್ಚಲು ಮಾತ್ರ ಅಲ್ಲ ಅನ್ನೋ ಯತ್ನಾಳ ಹೇಳಿಕೆ ವಿಚಾರವಾಗಿ ಇಂದು ಕೊಪ್ಪಳದಲ್ಲಿ ಮಾತನಾಡಿದ ಸಚಿವರು. ಬಿಜೆಪಿಯವರು ಕೆಲವರನ್ನು ನಾಯಿಗಳನ್ನು ಇಟ್ಟುಕೊಂಡಂತೆ ಒದರಲು ಇಟ್ಟು ಕೊಂಡಿರುತ್ತಾರೆ. ಹೀಗಾಗಿ ದಿನವಿಡೀ ಒದರುತ್ತಿರುತ್ತಾರೆ ಅದಕ್ಕೆ ಏನೂ ಮಾಡೋಕಾಗಲ್ಲ ಎಂದರು.
undefined
ಕಾಂಗ್ರೆಸ್ ಅಂದ್ರೇನೆ ಮುಸ್ಲಿಂ ಪಾರ್ಟಿ, ಉಚಿತ ಆಸೆಗೆ ಬಿದ್ದ ಹಿಂದೂಗಳಿಗೆ ಇದು ಅರ್ಥವಾಗ್ತಿಲ್ಲ: ಯತ್ನಾಳ್
ಸಿಎಂ ಆಗೋ ಅರ್ಹತೆ ಎಲ್ಲರಿಗೂ ಇದೆ, ಕುರ್ಚಿ ಖಾಲಿ ಇಲ್ಲ:
ಇನ್ನು ಸಿಎಂ ಸ್ಥಾನಕ್ಕಾಗಿ ಆಕಾಂಕ್ಷಿಗಳ ಪಟ್ಟಿ ದಿನೇದಿನೆ ಹೆಚ್ಚಳವಾಗ್ತಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುಖ್ಯಮಂತ್ರಿ ಕೊಡ್ತಾರೆ ಅಂದ್ರೆ ಯಾರಾದರೂ ಸುಮ್ಮನಿರ್ತಾರಾ? ಆದ್ರೆ ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಇಲ್ಲ. ಒಂದು ವೇಳೆ ಬದಲಾವಣೆ ಆದ್ರೆ ಅದು ಸಿಎಲ್‌ಪಿ ಸಭೆಯಲ್ಲಿ ನಿರ್ಧಾರವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗುಡಿಸಲಿನಲ್ಲಿ ಇದ್ದವನಿಗೂ ಸಿಎಂ ಆಗೋ ಅವಕಾಶ ಇರುತ್ತದೆ. ಸಿಎಂ ಆಗುವ ಯೋಗ್ಯತೆ ಎಲ್ಲರಿಗೂ ಇದೆ. ಆದ್ರೆ ಕುರ್ಚಿ ಖಾಲಿ ಇಲ್ಲಾ ಎಂದರು.
ಇನ್ನು ಮಿಸಲಾತಿ ವಿಚಾರವಾಗಿ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅವರ ಹೇಳಿಕೆಯನ್ನು ತಿರುಚುವ ಒಂದು ವರ್ಗವೇ ಇದೆ. ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದರು. ಇದೇ ವೇಳೆ ದಲಿತ ವ್ಯಕ್ತಿಗೆ ಬೆದರಿಕೆ, ಜಾತಿನಿಂದನೆ ಆರೋಪದಲ್ಲಿ ಬಿಜೆಪಿ ಶಾಸಕ ಮುನಿರತ್ನ ಬಂಧನ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕಾನೂನು ಎಲ್ಲರಿಗೂ ಒಂದೇ. ಅದು ಮುನಿರತ್ನಗೂ ಒಂದೇ ಸಿಎಂಗೂ ಒಂದೇ ಎಂದರು.
ರಾಹುಲ್ ಗಾಂಧಿ ಮೀಸಲಾತಿ ತೆಗೆಯುವ ಬಗ್ಗೆ ಮಾತನಾಡಿದ್ದಾರೆ, ದಲಿತರು ಯಾಕೆ ಸುಮ್ಮನಿದ್ದಾರೆ? ಯತ್ನಾಳ್ ಪ್ರಶ್ನೆ
ಪ್ರೀಮಿಯಂ ಬ್ರ್ಯಾಂಡ್ ಮದ್ಯದ ಮೇಲಿನ ದರ ಕಡಿಮೆ ಮಾಡಿದ್ದೇವೆ. ಬಿಯರ್ ಮೇಲೆ ಸ್ವಲ್ಪ ಹೆಚ್ಚು ಮಾಡಿದ್ದೇವೆ. ಇಡೀ ದೇಶದಲ್ಲಿ ನಮ್ಮ ರಾಜ್ಯದಲ್ಲಿ ಚೀಪ್ ಲಿಕ್ಕರ್ ಕಡಿಮೆಯಿದೆ. ಮದ್ಯ ಮಾರಾಟಕ್ಕೆ ಟಾರ್ಗೆಟ್ ರೀಚ್ ಆಗಿಲ್ಲ ಅಂತಾ ಯಾವುದೇ ಅಂಗಡಿ ಬಂದ್ ಮಾಡಿಲ್ಲ ಎಂದು ಸಚಿವ ತಿಮ್ಮಾಪುರ ಸ್ಪಷ್ಟನೆ ನೀಡಿದರು.