
ಹಾಸನ: ಈ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮಕ್ಕೆ ಹಾಸನದಲ್ಲಿ ಕೃಷ್ಣಭೈರೇಗೌಡ ಅವರನ್ನು ನೇಮಿಸಿರುವ ಕುರಿತು ಉಸ್ತುವಾರಿ ಸಚಿವ ರಾಜಣ್ಣ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಾನು ಹಾಸನ ಉಸ್ತುವಾರಿ ಬೇಡ ಅಂತ 3 ತಿಂಗಳ ಹಿಂದೆ ಪತ್ರವನ್ನು ಬರೆದು ಕೊಟ್ಟಿದ್ದೇನೆ. ಈ ಹೊತ್ತಿಗೆ ನನಗೆ ಹಾಸನದ ಉಸ್ತುವಾರಿ ಬೇಡ ಎಂಬುದಾಗಿ ನಾನು ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೆನೆ ಎಂದು ಹೇಳಿದರು. ಈ ಹೇಳಿಕೆಗಳ ಮಧ್ಯೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿ ಆಗುತ್ತೆ, ನೋಡೋಣ ಎಂದು ಹೇಳುವ ತೀವ್ರ ಕುತೂಹಲ ಕೆರಳಿಸಿದ್ದಾರೆ.
ಹಾಸನಾಂಬೆ ಜಾತ್ರೆ ಇದೆ. ಅಲ್ಲಿಗೆ ಹೆಚ್ಚು ಗಮನ ಕೊಡಬೇಕು.ನನಗೆ ಗಮನ ಕೋಡೋಕೆ ಆಗಲ್ಲ. ಎಲ್ಲೂ ಕುಳಿತುಕೊಂಡು ನಾವು ಮಾಡಬೇಕು. ರಾಜಣ್ಣ ಅವರು ತಮ್ಮ ವೈಯಕ್ತಿಕ ಕಾರಣದಿಂದಾಗಿ ಈ ವರ್ಷ ಹಾಸನದ ಉಸ್ತುವಾರಿ ನಿರ್ವಹಿಸಲು ಸಮಯ ನೀಡಲಾಗದು ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ನಾನು ಹೇಳಿರುವುದು ಕೇವಲ ವೈಯಕ್ತಿಕ ಕಾರಣ. ಇದಕ್ಕೆ ಯಾವುದೇ ರಾಜಕೀಯ ಕಾರಣವಿಲ್ಲ. ಹಾಸನಾಂಬೆ ಉತ್ಸವದ ವೇಳೆ ವಾರಕ್ಕೂ 20-25 ಲಕ್ಷ ಜನರು ಭಾಗಿಯಾಗುತ್ತಾರೆ. ಅವರ ಅನುಕೂಲತೆಗಾಗಿ ಹೆಚ್ಚಿನ ಸಮಯ, ಜವಾಬ್ದಾರಿ ಬೇಕಾಗುತ್ತದೆ. ನನ್ನ ವೈಯಕ್ತಿಕ ಕಾರಣದಿಂದ ಅಲ್ಲಿಗೆ ಸಮಯ ಕೊಡೋಕೆ ಆಗುತ್ತಿಲ್ಲ. 3 ತಿಂಗಳ ಹಿಂದೆ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ನಾನು ಈ ವಿಚಾರ ತಿಳಿಸಿದ್ದೇನೆ.
ಇದು ರಾಜಕೀಯ ಕಾರಣವಲ್ಲ. ನನಗೆ ಕೆಲಸ ಮಾಡೋಕೆ ಆಗುತ್ತಿಲ್ಲ, ಅಷ್ಟೆ. ಹೀಗಾಗಿ ಸಿಎಂ ಅವರಿಗೆ ನನ್ನ ಬೇಡಿಕೆಯನ್ನು ತಿಳಿಸಿ, ಬೇರೆ ಯಾರಿಗಾದರೂ ಉಸ್ತುವಾರಿ ಕೊಡಿ ಎಂದು ನಾನು ಮನವಿ ಮಾಡಿದ್ದೆ. ಅದನ್ನು ಸಿಎಂ ಪರಿಗಣಿಸಿ ಕೃಷ್ಣಭೈರೇಗೌಡ ಅವರನ್ನು ನೇಮಿಸಿದ್ದಾರೆ ಎಂದರು. ಇದರಲ್ಲಿ ರಾಜಕಾರಣ ಗೊಂದಲ ಇಲ್ಲ. ಇನ್ನು ಕೊನೆಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿ ಆಗುತ್ತೆ, ನೋಡೋಣ," ಎಂದು ಹೇಳುವ ಮೂಲಕ ಸಾಕಷ್ಟು ಕುತೂಹಲ ಕೆರಳಿಸಿದ್ದಾರೆ.
ಹಾಸನ ಜಿಲ್ಲೆಗೆ ಹೊಸ ಉಸ್ತುವಾರಿ ಸಚಿವರಾಗಿ ಕೃಷ್ಣಬೈರೇಗೌಡ ಅವರನ್ನು ನೇಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನ ಮಾಡಿದ್ದಾರೆ. ಸಚಿವ ರಾಜಣ್ಣ ಅವರು ತಮ್ಮ ವೈಯಕ್ತಿಕ ಕಾರಣದಿಂದ ಹಾಸನ ಉಸ್ತುವಾರಿ ಸ್ಥಾನದಿಂದ ವಿಲೀನಗೊಳ್ಳಲು ಮನವಿ ಮಾಡಿರುವ ಹಿನ್ನೆಲೆ ಈ ಬದಲಾವಣೆ ನಡೆದಿದೆ.
ಸಚಿವ ರಾಜಣ್ಣ ಅವರು ಈಗಾಗಲೇ ಮೂರು ತಿಂಗಳ ಹಿಂದೆ ಹಾಸನ ಉಸ್ತುವಾರಿ ಬೇಕಾಗಿಲ್ಲವೆಂದು ತಮ್ಮ ಇಚ್ಛೆಯನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದರು.ಇದೇ ವೇಳೆ, ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಸಚಿವ ರಹೀಂಖಾನ್ ಅವರಿಗೆ ಅವಕಾಶ ನೀಡಲಾಗಿದ್ದು, ಈ ಸಂಬಂಧ ಮುಖ್ಯಮಂತ್ರಿಗಳ ಅನುಮೋದನೆ ದೊರೆತಿದೆ.
ಇದಕ್ಕೂ ಮುನ್ನ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿ ಜಮೀರ್ ಅಹಮದ್ ಖಾನ್ ಕಾರ್ಯನಿರ್ವಹಿಸುತ್ತಿದ್ದರು. ಹೊಸ ಬದಲಾವಣೆಯ ಪ್ರಕಾರ, ಜಮೀರ್ ಅಹಮದ್ ಖಾನ್ ಅವರನ್ನು ವಿಜಯನಗರ ಉಸ್ತುವಾರಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.