ಕಾಂಗ್ರೆಸ್ ವಿರುದ್ಧ ಕ್ವಾರಂಟೈನ್ ಅಸ್ತ್ರ ಪ್ರಯೋಗಿಸಿದ ಸಚಿವ ಅಶೋಕ್

By Suvarna NewsFirst Published May 4, 2020, 3:36 PM IST
Highlights

ಕೋವಿಡ್‌ 19 ಹರಡದಂತೆ ತಡೆಯಲು ಕ್ವಾರಂಟೈನ್‌ ಒಳ್ಳೆಯ ಅಸ್ತ್ರ. ಇದೀಗ ಈ ಅಸ್ತ್ರವನ್ನು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಕಾಂಗ್ರೆಸ್‌ ವಿರುದ್ಧ ಪ್ರಯೋಗಿಸುವ ಮಾತುಗಳನ್ನಾಡಿದ್ದಾರೆ.

ಬೆಂಗಳೂರು, (ಮೇ.04): ಅಂಗನವಾಡಿ ಆಹಾರವನ್ನು  ದುರುಪಯೋಗ ಮಾಡಿಕೊಂಡ ಬಿಜೆಪಿ ನಾಯಕ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ರಾಜ್ಯ ಮಹಿಳಾ ಕಾಂಗ್ರೆಸ್ ಭಾನುವಾರ ಪ್ರತಿಭಟನೆ ಮಾಡಿತ್ತು.

ಮಾಜಿ ಸಚಿವರಾದ ಉಮಶ್ರೀ, ಜಯಮಾಲಾ ಮತ್ತು ಮೋಟಮ್ಮ ಅವರ ನೇತೃತ್ವದಲ್ಲಿ ಲಾಕ್‌ಡೌನ್ ಮಧ್ಯೆ ಏಕಾಏಕಿ ರಸ್ತೆಗಿಳಿದ ಮಹಿಳಾ ಕಾರ್ಯಕರ್ತರು ಸಿಎಂ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಆದ್ರೆ, ಇವರನ್ನು ಪೊಲೀಸರು ತಡೆಹಿಡಿದಿದ್ದರು.

ಲಾಕ್‌ಡೌನ್‌ ನಡುವೆ ಈ ಪ್ರತಿಭನೆ ಬೇಕಿತ್ತಾ? ಇದು ಎಷ್ಟು ಸರಿ ಎನ್ನುವ ಟೀಕೆಗಳು ಕೇಳಿಬಂದಿದ್ದವು. ಇನ್ನು ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ರಾಜಕೀಯ ವಾಗ್ಯುದ್ಧ: ಸಚಿವ ಸುರೇಶ್ ಕುಮಾರ್ ಅಪಹಾಸ್ಯಕ್ಕೆ ಡಿಕೆಶಿ ತಿರುಗೇಟು..!

ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅಶೋಕ್,ನೆನ್ನೆ (ಭಾನುವಾರ) ಪ್ರತಿಭಟನೆಯಲ್ಲಿ  ಕಾಂಗ್ರೆಸ್'ನ 5 ಸಾವಿರ ಜನ ಸೇರಿದ್ರು. ಸಾಮಾಜಿಕ ಅಂತರ ಕಾದುಕೊಂಡಿಲ್ಲ ಇವರನ್ನೆಲ್ಲಾ ಯಾಕೆ ಕ್ವಾರಂಟೈನ್ ಮಾಡಬಾರದು ಎಂದರು.

ಈ ಬಗ್ಗೆ ಸಿಎಂ ಮತ್ತು ಅಧಿಕಾರಿಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕಾಂಗ್ರೆಸ್ ವಿರುದ್ಧ ಕ್ವಾರಂಟೈನ್ ಅಸ್ತ್ರ ಪ್ರಯೋಗಿಸು ಮಾತುಗಳನ್ನಾಡಿದರು.

ಅಂಗನವಾಡಿ ಆಹಾರದಿಂದ ಬಿಜೆಪಿ ಬಿಟ್ಟಿ ಪ್ರಚಾರ, ಬೀದಿಗಿಳಿದ ಕಾಂಗ್ರೆಸ್ ಮಹಿಳೆಯರು..!

ಅಂಗನವಾಡಿ ಆಹಾರವನ್ನು ಬಿಜೆಪಿ ಮುಖಂಡರು ಬಳಸಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಈ ಬಗ್ಗೆ ಸಿಎಂ ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಶಿವಾನಂದಾ ಸರ್ಕಲ್ ಪ್ರತಿಭಟನೆ ಮಾಡಿದ್ದು, ಸಿಎಂ ಗೃಹ ಕಚೇರಿಯತ್ತ ಹೋಗಲು ಪ್ರಯತ್ನಿಸಿದ್ದರು. ಆದ್ರದ, ಇದನ್ನು ಪೊಲೀಸರು ತಡೆದಿದ್ದರು.

ಇನ್ನು ಪಾದರಾಯನಪುರ ಘಟನೆ ಬಳಿಕ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರನ್ನ ಸಹ ಕ್ವಾರಂಟೈನ್ ಮಾಡಬೇಕೆನ್ನುವ ಮಾತುಗಳು ಕೇಳಿಬಂದಿದ್ದವು. ಆದ್ರೆ, ಜಮೀರ್ ಖುದ್ದು ಹೋಗಿ ತಪಾಸಣೆ ಮಾಡಿಸಿಕೊಂಡಿದ್ದು, ವರದಿ ನೆಗೆಟಿವ್ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

click me!