ಸಿದ್ದು ಅವಧಿಯಲ್ಲಿ ಹಾಡಹಗಲೇ ಕೊಲೆ ಆಗಿತ್ತು: ಅಶೋಕ್‌ ವಾಗ್ದಾಳಿ

Published : Jul 30, 2022, 05:00 AM IST
ಸಿದ್ದು ಅವಧಿಯಲ್ಲಿ ಹಾಡಹಗಲೇ ಕೊಲೆ ಆಗಿತ್ತು: ಅಶೋಕ್‌ ವಾಗ್ದಾಳಿ

ಸಾರಾಂಶ

ರಾಜ್ಯದಲ್ಲಿ ಬಿಜೆಪಿ ಆಡಳಿತ ಇರುವುದರಿಂದಲೇ ಕೋಮುಶಕ್ತಿಗಳು ನಿಯಂತ್ರಣದಲ್ಲಿವೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಶಿವಾಜಿನಗರದಲ್ಲಿ ಹಾಡಹಗಲೇ ಹತ್ಯೆಯಾಯಿತು. ಪಿಎಫ್‌ಐ, ಎಸ್‌ಡಿಪಿಐ ಸೇರಿದಂತೆ ಹಲವರ ಮೇಲಿನ ಪ್ರಕರಣಗಳನ್ನು ಸಿದ್ದರಾಮಯ್ಯ ವಾಪಸು ತೆಗೆದುಕೊಂಡರು.

ಬೆಂಗಳೂರು (ಜು.30): ರಾಜ್ಯದಲ್ಲಿ ಬಿಜೆಪಿ ಆಡಳಿತ ಇರುವುದರಿಂದಲೇ ಕೋಮುಶಕ್ತಿಗಳು ನಿಯಂತ್ರಣದಲ್ಲಿವೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಶಿವಾಜಿನಗರದಲ್ಲಿ ಹಾಡಹಗಲೇ ಹತ್ಯೆಯಾಯಿತು. ಪಿಎಫ್‌ಐ, ಎಸ್‌ಡಿಪಿಐ ಸೇರಿದಂತೆ ಹಲವರ ಮೇಲಿನ ಪ್ರಕರಣಗಳನ್ನು ಸಿದ್ದರಾಮಯ್ಯ ವಾಪಸು ತೆಗೆದುಕೊಂಡರು. ಇಂತವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳ ನಾಯಕರು ತಮ್ಮ ಅವಧಿಯಲ್ಲಿ ಏನಾಯಿತು ಎಂಬುದನ್ನು ಮುಚ್ಚಿಟ್ಟು ಈಗ ನಡೆಯುತ್ತಿರುವುದರ ಬಗ್ಗೆ ಮಾತ್ರ ಹೇಳಿಕೆ ನೀಡುತ್ತಿದ್ದಾರೆ. ಆ ರೀತಿ ಪ್ರತಿಕ್ರಿಯೆ ನೀಡುವ ಮೊದಲು ತಮ್ಮ ಸರ್ಕಾರದಲ್ಲಿ ನಡೆದ ಘಟನೆಗಳ ಬಗ್ಗೆ ಯೋಚನೆ ಮಾಡಲಿ ಎಂದು ಕಿಡಿ ಕಾರಿದರು.

ಹಾನಿಗೀಡಾದ ಮನೆಗಳ ನಿರ್ಮಾಣಕ್ಕೆ ತುರ್ತು ಕ್ರಮ: ಸಿಎಂ ಸೂಚನೆ

ಸಿದ್ದರಾಮಯ್ಯ ಸರ್ಕಾರದಲ್ಲಿ ಶಿವಾಜಿನಗರದಲ್ಲಿ ಹಾಡಹಗಲೇ ಕೊಲೆಯಾಗಿತ್ತು. ಆಗ ಈ ರೀತಿಯ ಆರೋಪ ಹೊಂದಿದ್ದ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘನೆಯವರ ಮೇಲಿನ ಪ್ರಕರಣಗಳನ್ನು ಸಿದ್ದರಾಮಯ್ಯ ವಾಪಸು ಪಡೆದರು. ತನ್ಮೂಲಕ ಅವರಿಗೆ ಬಿರಿಯಾನಿ ತಿನ್ನಲು ಬಿಟ್ಟು ಕಳುಹಿಸಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಾಗ ದಲಿತರನ್ನು ಸುಟ್ಟು ಹಾಕಿದರೂ ಯಾರೂ ಮಾತನಾಡಿರಲಿಲ್ಲ. ನಾವು ಘಟನೆಯಾದ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದೇವೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಎಲ್ಲಾ ಕ್ರಮವನ್ನೂ ಕೈಗೊಳ್ಳುತ್ತಿದ್ದೇವೆ ಎಂದರು.

ಹಿಂದೂ ಕೊಲೆಯಾಗಿರಬಹುದು, ಮುಸ್ಲಿಂ ಕೊಲೆಯಾಗಿರಬಹುದು. ಯಾರೇ ತಪ್ಪು ಮಾಡಿದ್ದರೂ ಯಾವುದೇ ಕನಿಕರ ತೋರಿಸುವುದಿಲ್ಲ. ಕೋಮುಗಲಭೆಗೆ ನಾವು ಎಂದೂ ಅವಕಾಶ ನೀಡಲ್ಲ. ಕರಾವಳಿ ಪ್ರದೇಶದಲ್ಲಿ ಹಿಂದಿನಿಂದಲೂ ಈ ರೀತಿ ನಡೆಯುತ್ತಿದೆ. ನಮ್ಮ ಸರ್ಕಾರ ಬಂದ ಮೇಲಷ್ಟೇ ಒಂದಷ್ಟುನಿಯಂತ್ರಣಕ್ಕೆ ಬಂದಿದೆ ಎಂದು ಸಮರ್ಥಿಸಿಕೊಂಡರು.

ಸಚಿವ ಅಶ್ವತ್ಥ ನಾರಾಯಣ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಉದ್ವೇಗದಲ್ಲಿ ಯಾರು ಬೇಕಾದ್ರೂ ಎನ್‌ಕೌಂಟರ್‌ ವಿಚಾರ ಹೇಳಬಹುದು. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಇದ್ದಾಗಲೇ ಈ ರೀತಿ ಆಗಿರೋದು ನೋವಿನ ಸಂಗತಿ. ಎಲ್ಲವೂ ಪೊಲೀಸ್‌ ತನಿಖೆಯಿಂದಲೇ ಹೊರಬರಬೇಕು. ನಾನು ಕೂಡ ನಿರಂತರ ಸಂಪರ್ಕದಲ್ಲಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.

ಬಗರ್‌ ಹುಕುಂ ಜಮೀನಿನವರಿಗೆ ಇನ್ನು ಮಾಲಿಕತ್ವ ಇಲ್ಲ: ಅಶೋಕ್‌

ಕಾರ್ಯಕರ್ತರ ಆಕ್ರೋಶದ ಬಗ್ಗೆ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರು ಕಾಂಗ್ರೆಸ್‌ ಕಾರ್ಯಕರ್ತರ ಥರ ಅಲ್ಲ. ನೋವಾದಾಗ ನೇರವಾಗಿ ಹೇಳೋದು ನಮ್ಮ ಕಾರ್ಯಕರ್ತರು. ಬಿಜೆಪಿ ಇರುವುದಕ್ಕಾಗಿಯೇ ಕೋಮುಶಕ್ತಿಗಳು ನಿಯಂತ್ರಣದಲ್ಲಿವೆ. ಇನ್ನಷ್ಟುನಿಯಂತ್ರಣ ಆಗಬೇಕು ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ