ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾವ ಶಾಸಕರೂ ಅಸಮಾಧಾನ ತೋಡಿಕೊಂಡಿಲ್ಲ. ವರ್ಗಾವಣೆಯನ್ನು ನಿಯಮಗಳಂತೆ ಮಾಡಬೇಕು... ಮಾಡಲಾಗುತ್ತಿದೆ. ಅವಧಿ ಪೂರ್ವ ವರ್ಗಾವಣೆಗಳಿದ್ದರೆ ಅದು ಮುಖ್ಯಮಂತ್ರಿಗಳ ವಿವೇಚನೆಗೆ ಒಳಪಟ್ಟಿರುತ್ತದೆ.
ಬೆಂಗಳೂರು (ಜು.29): ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾವ ಶಾಸಕರೂ ಅಸಮಾಧಾನ ತೋಡಿಕೊಂಡಿಲ್ಲ. ವರ್ಗಾವಣೆಯನ್ನು ನಿಯಮಗಳಂತೆ ಮಾಡಬೇಕು... ಮಾಡಲಾಗುತ್ತಿದೆ. ಅವಧಿ ಪೂರ್ವ ವರ್ಗಾವಣೆಗಳಿದ್ದರೆ ಅದು ಮುಖ್ಯಮಂತ್ರಿಗಳ ವಿವೇಚನೆಗೆ ಒಳಪಟ್ಟಿರುತ್ತದೆ. ಇದರಲ್ಲಿ ಎಲ್ಲರನ್ನೂ ಸಮಾಧಾನಪಡಿಸಲು ಆಗುವುದಿಲ್ಲ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಸಭೆಯಲ್ಲಿ ಶಾಸಕರ ಪತ್ರದ ಬಗ್ಗೆಯೂ ಚರ್ಚೆಯಾಗಿದೆ. ನಕಲಿ, ಅಸಲಿ ಪತ್ರದ ಬಗ್ಗೆ ಚರ್ಚೆಯಾಗಿದೆ. ಅಸಲಿ ಪತ್ರದಲ್ಲಿ ಶಾಸಕಾಂಗ ಸಭೆ ಕರೆಯಿರಿ ಎಂದು ಮಾತ್ರ ಬರೆಯಲಾಗಿದೆ.
ಬಿಜೆಪಿಯವರು ನಕಲಿ ಪತ್ರಗಳನ್ನು ಸೃಷ್ಟಿ ಮಾಡಿದ್ದಾರೆ. ಸಮೀಕ್ಷೆಯಲ್ಲಿ ಸರ್ಕಾರಕ್ಕೆ ಬಂದಿರುವ ಜನಪ್ರಿಯತೆ ಸಹಿಸಲಾಗದೆ ಇಂತಹ ಕೃತ್ಯಗಳಿಗೆ ಇಳಿದಿದ್ದಾರೆ ಎಂದು ಟೀಕಿಸಿದರು. ಎಚ್.ಡಿ. ಕುಮಾರಸ್ವಾಮಿ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇನ್ನೂ ಐದು ವರ್ಷ ಏನು ಮಾಡುತ್ತಾರೆ. ಕರ್ನಾಟಕ ಪ್ರವಾಸೋದ್ಯಮ ಚೆನ್ನಾಗಿ ಮಾಡಿದ್ದೇವೆ. ವಿದೇಶವನ್ನೂ ನೋಡಲಿ, ಕರ್ನಾಟಕವೂ ಸುತ್ತಲಿ. ಅವರ ಪ್ರವಾಸಗಳಿಗೆ ನಮ್ಮ ತಕರಾರಿಲ್ಲ ಎಂದು ವ್ಯಂಗ್ಯವಾಡಿದರು.
ಕೊಡಗಿನ 44 ಪ್ರದೇಶಗಳಲ್ಲಿ ಭೂಕುಸಿತ ಸಾಧ್ಯತೆ: ಭಾರತೀಯ ಭೂವಿಜ್ಞಾನ ವರದಿಯಲ್ಲೇನಿದೆ?
ಡಾ. ಅಶ್ವತ್ಥ ಈಗ ಎಲ್ಲಿ?: ಮಣಿಪುರ ಘಟನೆ ಬಗ್ಗೆ ತುಟಿ ಬಿಚ್ಚದ ಬಿಜೆಪಿಯವರು ಉಡುಪಿ ವಿಚಾರದಲ್ಲಿ ಕ್ರಾಂತಿಕಾರಿಗಳಂತೆ ಹೋರಾಟಕ್ಕೆ ಹೋಗಿದ್ದರು. ಅವರ ಪಕ್ಷದವರೇ ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಈಗ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ಎಲ್ಲಿ ಹೋದರು? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಪಿಡಿಒಗಳು ಶೀಘ್ರ ಮಾತೃ ಇಲಾಖೆಗೆ ವಾಪಸ್: ಬೇರೆ ಇಲಾಖೆ ಹಾಗೂ ಸ್ಥಳಗಳಿಗೆ ನಿಯೋಜನೆ ಮೇಲೆ ನೇಮಕವಾಗಿರುವ ಗ್ರಾಮ ಪಂಚಾಯತಿ ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿ, ಅಧಿಕಾರಿಗಳನ್ನು ವಾಪಸು ಮಾತೃ ಇಲಾಖೆಗೆ ಕರೆಸಿಕೊಳ್ಳಲು ಆದೇಶಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಶಶಿಲ್ ಜಿ.ನಮೋಶಿ ಪರವಾಗಿ ಜೆಡಿಎಸ್‌ನ ಮರಿತಿಬ್ಬೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ 660 ಪಿಡಿಒ, 604 ಗ್ರೇಡ್ 1 ಕಾರ್ಯದರ್ಶಿ ಹಾಊ 719 ಗ್ರೇಡ್ 2 ಕಾರ್ಯದರ್ಶಿ ಹುದ್ದೆಗಳು ಖಾಲಿಯಿವೆ. ಅವುಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ 150 ಪಿಡಿಒಗಳ ನೇಮಕಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಉಳಿದ 510 ಪಿಡಿಒಗಳ ನೇಮಕಕ್ಕೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದೇ ರೀತಿ ಗ್ರಾ.ಪಂ. ಕಾರ್ಯದರ್ಶಿ ಹುದ್ದೆ ಸೇರಿ ಆರ್‌ಡಿಪಿಆರ್ ಇಲಾಖೆಗೆ ಮಂಜೂರಾಗಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ವಿವರಿಸಿದರು.
ಅಧಿಕ ಭಾರದ ಕಲ್ಲು ಸಾಗಾಣಿಕೆ ವಿರುದ್ಧ ಕ್ರಮಕ್ಕೆ ಶಾಸಕ ಸುಬ್ಬಾರೆಡ್ಡಿ ಸೂಚನೆ
ನನ್ನ ವಿರುದ್ಧ ಹಕ್ಕು ಚ್ಯುತಿ ಮಂಡನೆ: ಶಾಸಕರೊಬ್ಬರ ಬಳಿ ಆಪ್ತ ಸಹಾಯಕರಾಗಿ ನಿಯೋನೆಗೊಂಡಿರುವ ಪಿಡಿಒ ಒಬ್ಬರು ಮಾತೃ ಇಲಾಖೆಗೆ ವಾಪಸಾಗದೆ ಶಾಸಕರ ಮೂಲಕ ಒತ್ತಡ ಹೇರುತ್ತಿದ್ದಾರೆ. ಅಲ್ಲದೆ, ನಮ್ಮದೇ ಪಕ್ಷದ ಶಾಸಕರು ಆ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ವಿಧಾನಸಭೆಯಲ್ಲಿ ಹಕ್ಕು ಚ್ಯುತಿಯನ್ನೂ ಮಂಡಿಸಿದ್ದಾರೆ. ಹೀಗಾದರೆ ಇಲಾಖೆಯಲ್ಲಿ ಕೆಲಸ ಮಾಡುವುದು ಕಷ್ಟಎಂದು ಪ್ರಿಯಾಂಕ್ ಖರ್ಗೆ ಅಳಲು ತೋಡಿಕೊಂಡರು.