ಅಜ್ಜಿಯನ್ನು ಸುಟ್ಟಿದ್ದು ರಜಾಕಾರರು, ಮುಸ್ಲಿಮರಲ್ಲ: ಯುಪಿ ಸಿಎಂ ಯೋಗಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

By Kannadaprabha News  |  First Published Nov 14, 2024, 7:07 AM IST

ಕೆಲವರಿಂದ ಇಡೀ ಸಮುದಾಯ ದೂಷಿಸಲು ಆಗುತ್ತದೆಯೇ? ಇಷ್ಟೆಲ್ಲ ಮಾತಾಡುವ ಇವರು ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಕೊಡ್ತಾರಾ? ಎಂದು ಪ್ರಶ್ನಿಸಿದ ಸಚಿವ ಪ್ರಿಯಾಂಕ್ ಖರ್ಗೆ 


ಬೆಂಗಳೂರು(ನ.14):  ನನ್ನ ಅಜ್ಜಿಯನ್ನು ಸುಟ್ಟಿದ್ದು ರಜಾಕಾರರೇ ಹೊರತು ಮುಸ್ಲಿಮರು ಅಥವಾ ಮುಸ್ಲಿಮ್ ಸಮುದಾಯ ಅಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳುವ ಮೂಲಕ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತಿರುಗೇಟು ನೀಡಿದ್ದಾರೆ.  'ರಜಾಕಾರರಿಂದ ತಾಯಿ, ಸಹೋದರಿ ಸುಟ್ಟು ಹೋದರೂ ಮಲ್ಲಿಕಾರ್ಜುನ ಖರ್ಗೆ ಮೌನ ವಹಿಸಿದ್ದಾರೆ' ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಹೇಳಿಕೆ ನೀಡಿದ್ದರು. 

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕೆಲವರಿಂದ ಇಡೀ ಸಮುದಾಯ ದೂಷಿಸಲು ಆಗುತ್ತದೆಯೇ? ಇಷ್ಟೆಲ್ಲ ಮಾತಾಡುವ ಇವರು ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಕೊಡ್ತಾರಾ? ಎಂದು ಪ್ರಶ್ನಿಸಿದರು. 'ಎಲ್ಲದಕ್ಕೂ ಜಾತಿ-ಧರ್ಮ ಎಳೆದು ತರುವ ನೀವು ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಕೊಡುತ್ತೀರಾ?' ಎಂದು ಪ್ರಶ್ನಿಸಿದರು. 

Latest Videos

ಮುಸ್ಲಿಂಗೆ ತಾಯಿ ಬಲಿ ಆದ್ರೂ ಮತಕ್ಕೆ ಖರ್ಗೆ ಮೌನ: ಯುಪಿ ಸಿಎಂ ಯೋಗಿ ಆದಿತ್ಯನಾಥ್

ಹೆಣದ ಮೇಲೆ ಬಿಜೆಪಿ ಹಣ: 

ನಿವೃತ್ತ ನ್ಯಾ. ಮೈಕಲ್ ಡಿ. ಕುನ್ಹಾ ಆಯೋಗದ ಮಧ್ಯಂತರ ವರದಿ ಪ್ರಕಾರ ಬಿಜೆಪಿ ಸರ್ಕಾರ ಹೆಣದ ಮೇಲೆ ಹಣ ಮಾಡಿರುವುದು ಸ್ಪಷ್ಟವಾಗಿದ್ದು, ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವರಾಗಿದ್ದ ಶ್ರೀರಾಮುಲು ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್‌ಗೆ ಆಯೋಗ ಶಿಫಾರಸು ಮಾಡಿದೆ. ಬಲವಾದ ಸಾಕ್ಷ್ಯಗಳಿದ್ದರೆ ಯಾವುದೇ ಕ್ರಮಕ್ಕೂ ಸರ್ಕಾರ ಹಿಂಜರಿಯಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

click me!