ಉಪಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣ ಗರಿಗೆದರಿದ್ದು, ಪ್ರತಾಪ್‌ಗೌಡ ಪಾಟೀಲ್ ಸೋಲಿನಿಂದ ಹೊಸ ಲೆಕ್ಕಾಚಾರ ಶುರುವಾಗಿದೆ .
ಬೆಂಗಳೂರು, (ಮೇ.02): ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರು ಸೋಲುಕಂಡಿದ್ದಾರೆ.
ಮಸ್ಕಿಯಲ್ಲಿ ಪ್ರತಾಪ್ ಗೌಡ ಪಾಟೀಲ್ ಸೋಲಿನ ಬೆನ್ನಲ್ಲೇ ಮತ್ತೆ ಸಚಿವ ಸ್ಥಾನದ ಅಕಾಂಕ್ಷಿಗಳಲ್ಲಿ ಮಂತ್ರಿಗಿರ ಆಸೆ ಗರಿಗೆದರಿದ್ದು, ಹೊಸ ಲೆಕ್ಕಾಚಾರ ಶುರುವಾಗಿದೆ.
6 ಜಿಲ್ಲೆಗಳಿಗೆ ನೂತನ ಉಸ್ತುವಾರಿ : ಯಾರಿಗೆ ಯಾವ ಜಿಲ್ಲೆ..?
ಹೌದು...ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದು ಉಪಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ಸೋಲುಕಂಡಿದ್ದಾರೆ. ಇದರಿಂದ ಇವರಿಗೆ ಮೀಸಲಿಡಲಾಗಿದ್ದ ಸಚಿವ ಸ್ಥಾನವೂ ಖಾಲಿ ಉಳಿದಂತಾಗಿದೆ.
ಈ ಹಿನ್ನೆಲೆಯಲ್ಲಿ ಬಿಎಸ್ ವೈ ಕ್ಯಾಬಿನೆಟ್ ನಲ್ಲಿ ಸಧ್ಯ ಎರಡು ಸಚಿವ ಸ್ಥಾನ ಖಾಲಿ ಇವೆ. ಒಂದು ವೇಳೆ ಪ್ರತಾಪ್ ಗೌಡ ಪಾಟೀಲ್ ಗೆದಿದ್ದರೆ ಅವರಿಗೆ ಸಚಿವ ಸ್ಥಾನ ಫಿಕ್ಸ್ ಎನ್ನಲಾಗಿತ್ತು. ಆದ್ರೆ, ಅವರು ಸೋತಿರುವ ಕಾರಣ ಬೇರೆಯವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ.
ರಮೇಶ್ ಜಾರಕಿಹೊಳಿ ರಾಜೀನಾಮೆ ಬಳಿಕ ಆ ಸ್ಥಾನವನ್ನ ಯಾರಿಗೂ ನೀಡಿರಲಿಲ್ಲ. ಅದನ್ನ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ನೀಡ್ತಾರೆ ಎನ್ನಲಾಗಿದೆ.
ಇನ್ನೂ ಕಳೆದ ಬಾರಿ ಸಂಪುಟ ವಿಸ್ತರಣೆಯಲ್ಲಿ ಆರ್ ಆರ್ ನಗರ ಕ್ಷೇತ್ರದಿಂದ ಗೆದಿದ್ದ ಮುನಿರತ್ನ ಗೆ ಸಚಿವ ಸ್ಥಾನ ಕೈತಪ್ಪಿತ್ತು.
ಈ ಬಾರಿಯಾದ್ರೂ ಮುನಿರತ್ನಗೆ ಸಚಿವ ಸ್ಥಾನ ಸಿಗಲಿದೆಯೋ ಅಥವಾ ಮೂಲ ಬಿಜೆಪಿಗರಿಗೆ ಸಚಿವ ಸ್ಥಾನದ ಸಿಗಲಿದೆಯೋ ಎನ್ನುವ ಕುತೂಹಲ ಮೂಡಿಸಿದೆ.
ಅಂತಿಮವಾಗಿ ಸಿಎಂ ಹಾಗೂ ಹೈಕಮಾಂಡ್ ಯಾರಿಗೆ ಮಣೆ ಹಕಲಿದೆ ಅನ್ನೋದು ಕುತೂಹಲ. ಇನ್ನೊಂದೆಡೆ ಸದ್ಯದ ಕೊರೋನಾ ಪರಿಸ್ಥಿತಿಯಲ್ಲಿ ಸಂಪುಟ ವಿಸ್ತರಣೆ ಮಾಡೋದು ಡೌಟ್.