ಎರಡೂ ಕ್ಷೇತ್ರಗಳನ್ನ ನಾವೇ ಗೆಲ್ತೀವಿ, ,ಯತ್ನಾಳ್ ವಿರುದ್ಧ ಎನ್‌ಎಸ್ ಬೋಸರಾಜು ಕಿಡಿ

Published : Apr 05, 2026, 10:28 AM IST
Minister NS Bosaraju battle against congress rav

ಸಾರಾಂಶ

ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಸಚಿವ ಎನ್‌ಎಸ್ ಬೋಸರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಮತ್ತು ಗ್ಯಾರಂಟಿ ಯೋಜನೆಗಳು ಪಕ್ಷದ ಗೆಲುವಿಗೆ ಪ್ರಮುಖ ಕಾರಣವಾಗಲಿದ್ದು, ಬಿಜೆಪಿಯ ಅಪಪ್ರಚಾರದಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು

ರಾಯಚೂರು (ಏ.5): ದಾವಣಗೆರೆ, ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ. ನಮ್ಮ ಮೇನ್ ಇಂಪ್ಯಾಕ್ಟ್ ಮಹಿಳೆಯರು ಇದ್ದಾರೆ ಎಂದು ಸಚಿವ ಎನ್‌ಎಸ್ ಬೋಸರಾಜು ವಿಶ್ವಾಸ ವ್ಯಕ್ತಪಡಿಸಿದರು.

ಇಂದು ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು, ಹಿಂದೆ ಮಂಡ್ಯ, ಶಿಗ್ಗಾಂವಿ ಉಪಚುನಾವಣೆಯಲ್ಲಿ ನಮಗೇ ಗೆಲುವು ಸಿಕ್ತು. ಮಹಿಳೆಯರ ಗ್ಯಾರಂಟಿ ಯೋಜನೆ ನಮಗೆ ರಿಜಲ್ಟ್ ಕೊಟ್ಟಿತ್ತು. ಈಗಲೂ ನಾವು ನೋಡಿದಂತೆ ದಾವಣಗೆರೆ, ಬಾಗಲಕೋಟೆ ಎರಡೂ ಕ್ಷೇತ್ರವನ್ನೂ ನಾವು ಗೆಲ್ಲಲಿದ್ದೇವೆ ಎಂದರು.

ಮಹಿಳೆಯರು ಬಹಳ ಉತ್ಸಾಹದಲ್ಲಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ನಮಗೆ ಬಹಳ ಅನುಕೂಲ ಆಗಿದೆ ಎಂದು ಮಾತನಾಡುತ್ತಿದ್ದಾರೆ.ಗ್ಯಾರೆಂಟಿ ಯೋಜನೆಗಳು ನಮಗೆ ಶ್ರೀರಕ್ಷವಲ್ಲ; ಮಹಿಳೆಯರ ಹೆಚ್ಚಿನ ಓಟು ಕಾಂಗ್ರೆಸ್ ಬರಲು ಗ್ಯಾರೆಂಟಿಗಳು ಅನುಕೂಲವಾಗಿವೆ. ನಮ್ಮ ಪಾರ್ಟಿ ಕಾರ್ಯಕರ್ತರು, ಅಲ್ಲದೇ ‌ನಾವು ಮೂರು ವರ್ಷಗಳ ಕಾಲ ಕೊಟ್ಟ ಗ್ಯಾರೆಂಟಿ ಯೋಜನೆಗಳು ನಮಗೆ ಲಾಭವಾಗಲಿದೆ ಎಂದರು.

ಗ್ಯಾರಂಟಿ ಬಗ್ಗೆ ಬಿಜೆಪಿಯವ್ರು ಅಪಪ್ರಚಾರ

ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಅಪಪ್ರಚಾರ ಮಾಡುತ್ತ ಬಂದಿದೆ. ಇದು ಈ ಎಲೆಕ್ಷನ್‌ನಲ್ಲೂ ಅಪಪ್ರಚಾರ ಮಾಡಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಸರಕಾರಿ ಖಜಾನೆ ಖಾಲಿ ಆಗುತ್ತೆ ಆಮೇಲೆ ಗ್ಯಾರಂಟಿ ಇರಲ್ಲ, ಗೌರಮೆಂಟ್ ಖಜಾನೆ ಲೂಟಿ ಆಗುತ್ತೆ ಅಂತ ಬಿಜೆಪಿಯವರು ಅಪಪ್ರಚಾರ ಮಾಡಿದ್ರು ಆದ್ರೆ ಸರ್ಕಾರ ಬಂದು ಇಷ್ಟು ವರ್ಶದಲ್ಲಿ ಏನಾಯ್ತ? ಏನೂ ಆಗಿಲ್ಲ. ನಾವು ಮೂರು ವರ್ಷದಲ್ಲಿ 1ಲಕ್ಷ 23 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ಇಲ್ಲಿ ಭ್ರಷ್ಟಾಚಾರ ಇಲ್ಲ ಏನು ಇಲ್ಲ. ನೇರವಾಗಿ ಫಲಾನುಭವಿಗಳ ಖಾತೆಗೆ ಹೋಗುತ್ತೆ. ಗೃಹ ಜ್ಯೋತಿ ಯೋಜನೆದ್ದು

200 ಯೂನಿಟ್ ಜಿಯೋ ಬಿಲ್ ಕೊಡುತ್ತಿದ್ದೇವೆ. 2 ಸಾವಿರ ರೂ. ಅವರ ಅಕೌಂಟ್ ಗೆ ಹೋಗುತ್ತೆ. ಅಕ್ಕಿ ಅವರ ಕೈಗೆ ಬರುತ್ತಿದೆ. ಮಹಿಳೆಯರುಬಸ್ ನಲ್ಲಿ ಆರಾಮ ಆಗಿ ಓಡಾಟ ಮಾಡುತ್ತಿದ್ದಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೆಡಿಎಸ್‌ಗೆ ಪೂರ್ಣ ಬಹುಮತ ದಕ್ಕುತ್ತಿಲ್ಲ; ನನ್ನನ್ನು ಹೊಗಳುವ ಜನರು ಚುನಾವಣೇಲಿ ಮತ ಹಾಕೋಲ್ಲ: ಎಚ್‌ಡಿಕೆ ಬೇಸರ
ಘಾಯಲ್‌ ಹೂಂ, ಇಸೀಲಿಯೇ ಘಾತಕ್‌ ಹೂಂ: ಧುರಂಧರ್‌ ಸ್ಟೈಲ್‌ನಲ್ಲಿ AAP ವಿರುದ್ಧ ಛಡ್ಡಾ ಗುಡುಗು