ರಾಜ್ಯದ ಬಿಜೆಪಿ ನಾಯಕರ ಒಳಜಗಳ ವಿಧಾನಸೌಧದಲ್ಲೇ ಸ್ಪೋಟವಾಗಿದೆ. ಇಂದು (ಸೋಮವಾರ) ವಿಧಾನಸೌಧದಲ್ಲಿ ಸಚಿವ ಹಾಗೂ ಶಾಸಕರೊಬ್ಬರು ಕಿತ್ತಾಡಿಕೊಂಡಿದ್ದು, ಅದರಕ್ಕೆ ಅಸಲಿ ಕಾರಣ ಈ ಕೆಳಗನಂತಿದೆ ನೋಡಿ.
ಬೆಂಗಳೂರು, (ಸೆ.21): ರಾಜ್ಯದ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದಂತೆ ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಬಿಜೆಪಿ ಶಾಸಕ-ಸಚಿವರು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.
ರಾಜ್ಯದ ಬಿಜೆಪಿ ನಾಯಕರ ಒಳಜಗಳ ಇಂದು (ಸೋಮವಾರ) ವಿಧಾನಸೌಧದಲ್ಲೇ ಸ್ಪೋಟವಾಗಿದೆ. ವಿಧಾನಸಭೆ ಸೆಂಟ್ರಲ್ ಹಾಲ್ ಲಾಂಜ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಎದುರುಗಡೆಯೇ ಬಿಜೆಪಿ ನಾಯಕರ ಗಲಾಟೆ ಮಾಡಿಕೊಂಡ ಪ್ರಸಂಗ ನಡೆದಿದೆ.
ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಹಾಗೂ ಸಚಿವ ನಾರಾಯಣಗೌಡ ನಡುವೆ ಗಲಾಟೆ ನಡೆದಿದ್ದು, ಮಾತಿನ ಚಕಮಕಿ ತಾರಕಕ್ಕೇರಿ ನಂತರ ಕುರ್ಚಿಗಳನ್ನು ತಳ್ಳಾಡುವಷ್ಟು ಸ್ವರೂಪ ಪಡೆದಿದುಕೊಳ್ಳುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಜೆಡಿಎಸ್ ಶಾಸಕ ಅನ್ನದಾನಿ, ಸಚಿವ ಸಿ.ಟಿ. ರವಿ ಮತ್ತಿತರರು ಸಮಾಧಾನ ಮಾಡಿದರು.
ಹೊಡೆದಾಟಕ್ಕೆ ಮುಂದಾದ ಶಾಸಕ-ಸಚಿವ: ಬಿಜೆಪಿಯ ಒಳಜಗಳ ವಿಧಾನಸೌಧದಲ್ಲಿ ಬಹಿರಂಗ
undefined
ಜಗಳಕ್ಕೆ ಅಸಲಿ ಕಾರಣ
ಶಾಸಕ ಬೆಳ್ಳಿ ಪ್ರಕಾಶ್ ಮತ್ತು ಸಚಿವ ನಾರಾಯಣಗೌಡ ನಡುವಿನ ಜಗಳಕ್ಕೆ ಅಸಲಿ ಕಾರಣ ಟ್ರಾನ್ಸ್‌ಫರ್. ಹೌದು.. ತೋಟಗಾರಿಕಾ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಟ್ರಾನ್ಸ್‌ಫರ್ ಫೈಲ್ಗೆ ಸಿಎಂ ಬಳಿ ಸಹಿ ಮಾಡಿಸಿ ಬೆಳ್ಳಿ ಪ್ರಕಾಶ್ ಕೊಟ್ಟಿದ್ದರು.
ಆದರೆ ಯಾವುದೇ ಪ್ರಗತಿ ಕಂಡಿರಲಿಲ್ಲ. ಈ ಬಗ್ಗೆ ಇಂದು (ಸೋಮವಾರ) ವಿಧಾನಸೌಧ ಕ್ಯಾಂಟೀನ್ನಲ್ಲಿ ಕುಳಿತಿದ್ದ ನಾರಾಯಣ್ಗೌಡರನ್ನು ಬೆಳ್ಳಿ ಪ್ರಕಾಶ್ ಕೇಳಿದರು. ಇದಕ್ಕುತ್ತರಿಸಿದ್ದ ಸಚಿವರು 'ಈ ವಾರ' ಎಂದರು. 'ಈ ವಾರ ಅಂತಾ ಹೇಳಿಯೇ ನಾಲ್ಕೈದು ತಿಂಗಳಾಯ್ತು, ಬಹುಷಃ ಕರ್ನಾಟಕದಲ್ಲಿರುವ ನಾಲಾಯಕ್ ಶಾಸಕರು ನಾವೇ ಇರಬೇಕು. ಬೇರೆ ರಾಜ್ಯಗಳಲ್ಲಿ ಶಾಸಕರು ಹೇಳಿದ ಕೆಲಸ ಆಗುತ್ತದೆ. ನಮ್ಮಲ್ಲಿ ಆಗಲ್ಲ' ಎಂದು ಬೆಳ್ಳಿ ಪ್ರಕಾಶ್ ಖಾರವಾಗಿಯೇ ನುಡಿದರು.
ಆಗ ನಾಲಾಯಕ್ ಎಂದು ತನಗೆ ಹೇಳಿದ್ದೆಂದು ಭಾವಿಸಿದ ನಾರಾಯಣ್ ಗೌಡ ಸಿಡಿಮಿಡಿಗೊಂಡರು. 'ನನ್ನ ಕಚೇರಿಗೆ ಬಂದು ಮಾತನಾಡು' ಎಂದ ನಾರಾಯಣ್ ಗೌಡಗೆ 'ನಾನೇಕೆ ನಿನ್ನ ಕಚೇರಿಗೆ ಬರಲಿ. ಕ್ಷೇತ್ರದ ಕೆಲಸ ಮಾಡದ ನೀನು ಎಂತಹ ಸಚಿವ?' ಎನ್ನುತ್ತ ಬೆಳ್ಳಿ ಪ್ರಕಾಶ್ ಕಿಡಿಕಾರಿದರು. ಈ ವೇಳೆ ಏಕವಚನದಲ್ಲೇ ಕೂಗಾಡಿಕೊಂಡು ಕೈ-ಕೈ ಮಿಲಾಯಿಸುವ ಮಟ್ಟಕ್ಕೆ ಹೋದರು. ಅಷ್ಟರಲ್ಲಿ ಸ್ಥಳದಲ್ಲಿದ್ದವರು ಸಮಾಧಾನ ಪಡಿಸಿದರು.