ಜೆಡಿಎಸ್‌ ಸಮಾವೇಶ ನಿಖಿಲ್‌ ಸೋಲು ಸೆಲೆಬ್ರೇಟ್ ಮಾಡೋದಕ್ಕಾ?: ಸಚಿವ ಚಲುವರಾಯಸ್ವಾಮಿ

Published : Dec 07, 2024, 07:58 AM IST
ಜೆಡಿಎಸ್‌ ಸಮಾವೇಶ ನಿಖಿಲ್‌ ಸೋಲು ಸೆಲೆಬ್ರೇಟ್ ಮಾಡೋದಕ್ಕಾ?: ಸಚಿವ ಚಲುವರಾಯಸ್ವಾಮಿ

ಸಾರಾಂಶ

ಮಗನ ಸೋಲನ್ನ ಮುಂದಿಟ್ಟುಕೊಂಡು ಯಾವ ಸಮಾವೇಶ ಮಾಡ್ತಾರೆ? ಕುಮಾರಸ್ವಾಮಿಗೆ ಮಗ ಮೂರು ಬಾರಿ ಸೋತಿದ್ದರೂ ಸಾಕಾಗಿಲ್ಲ ಅನ್ನಿಸುತ್ತೆ. ನಿಖಿಲ್ ಸೋಲಿಗೆ ತಂದೆಯೇ ಕಾರಣ. ನಿಖಿಲ್ ಕುಮಾರಸ್ವಾಮಿ ಮೂರು ಸೋಲಿಗೆ ಯಾರು ಕಾರಣ? ನಿಖಿಲ್ ಸೋಲನ್ನು ಈಗ ಸೆಲೆಬ್ರೇಟ್ ಮಾಡ್ತಾರಾ?: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ 

ಮೈಸೂರು(ಡಿ.07):  ಮಗನ ಸೋಲನ್ನ ಮುಂದಿಟ್ಟುಕೊಂಡು ಯಾವ ಸಮಾವೇಶ ಮಾಡ್ತಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವ್ಯಂಗ್ಯವಾಡಿದರು. 

ಮಂಡ್ಯದಲ್ಲಿ ಜೆಡಿಎಸ್ ಸಮಾವೇಶ ಆಯೋಜನೆ ವಿಚಾರ ಕುರಿತು ಮೈಸೂರಿನಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ನಮ್ಮ ವಿರುದ್ಧ ಒಂದೂವರೆ ವರ್ಷದಿಂದ ಕೌಂಟರ್‌ ಮಾಡಿ ಸಾಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪು ಅಂತಿಮ ಎಂದು ಒಪ್ಪಿಕೊಳ್ಳಲಾಗಿದೆ ಎಂದರು. 

ಮೋದಿಯ ರೈತ ವಿರೋಧಿ ನಿಲುವಿಗೆ ದೇವೇಗೌಡರ ಮೌನವೇಕೆ?: ಸಚಿವ ಚಲುವರಾಯಸ್ವಾಮಿ

ಬಿಜೆಪಿ, ಜೆಡಿಎಸ್ ನವರಿಗೆ ತಾಳ್ಮೆಯೇ ಇಲ್ಲ. ಆರಂಭದಿಂದ ಇಲ್ಲಿಯವರೆಗೂ ಅವರು ಮಲಗಿಯೇ ಇಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾ‌ರ್, ಗ್ಯಾರಂಟಿ ಬಗ್ಗೆ ಮಾತನಾಡೋದು, ಸರ್ಕಾರ ತೆಗಿತೀವಿ ಅನ್ನೋದು ಆಗಿದೆ. ದೇವೇಗೌಡರ ಬಾಯಲ್ಲಿ ಸರ್ಕಾರ ತೆಗಿತೀವಿ ಅನ್ನೋ ಮಾತು ಬಂತಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ತಪ್ಪು ಅಲ್ವ? ಸಿದ್ದರಾಮಯ್ಯ ಗರ್ವ ಮುರೀತೀನಿ ಅನ್ನೋದು ತಪ್ಪಲ್ವ?. ನಾವು ಚನ್ನಪಟ್ಟಣದಲ್ಲಿ 5 ಸಾವಿರ ಅಂತರದಿಂದ ಗೆಲ್ಲುತ್ತಿದ್ವಿ, ಆದರೆ, ದೇವೇಗೌಡರು, ಕುಮಾರಸ್ವಾಮಿ ಬೈದು 25 ಸಾವಿರ ಅಂತರದಿಂದ ಗೆದ್ದಿದ್ದೇವೆ ಎಂದು ಅವರು ತಿಳಿಸಿದರು. 

ನಿಖಿಲ್ ಸೋಲಿಗೆ ತಂದೆಯೇ ಕಾರಣ: 

ಮಗನ ಸೋಲನ್ನ ಮುಂದಿಟ್ಟುಕೊಂಡು ಯಾವ ಸಮಾವೇಶ ಮಾಡ್ತಾರೆ? ಕುಮಾರಸ್ವಾಮಿಗೆ ಮಗ ಮೂರು ಬಾರಿ ಸೋತಿದ್ದರೂ ಸಾಕಾಗಿಲ್ಲ ಅನ್ನಿಸುತ್ತೆ. ನಿಖಿಲ್ ಸೋಲಿಗೆ ತಂದೆಯೇ ಕಾರಣ. ನಿಖಿಲ್ ಕುಮಾರಸ್ವಾಮಿ ಮೂರು ಸೋಲಿಗೆ ಯಾರು ಕಾರಣ? ನಿಖಿಲ್ ಸೋಲನ್ನು ಈಗ ಸೆಲೆಬ್ರೇಟ್ ಮಾಡ್ತಾರಾ? ನಿಖಿಲ್ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇದೆ. ಮಂಡ್ಯದಲ್ಲಿ ಎಲ್ಲಿ ಬೇಕಾದರು ಸಮಾವೇಶ ಮಾಡಲಿ ನಮಗೇನು ಎಂದು ಅವರು ಪ್ರಶ್ನಿಸಿದರು. 

ನಾನು ಯಾವತ್ತೂ ಕುಮಾರಸ್ವಾಮಿ ಬಗ್ಗೆ ಮಾತನಾಡಿಲ್ಲ. ಕುಮಾರಸ್ವಾಮಿ ವೈರಿ ಎಂದು ಹೇಳಿಲ್ಲ. ಹಲವು ರಾಜಕೀಯ ವಿಚಾರ ಹೇಳಿಕೆಗಳಿಗೆ ಉತ್ತರ ಕೊಟ್ಟಿದ್ದೇವೆ. ಜನರಿಂದ ನಮಗೆ ಉತ್ತಮ ಬಹುಮತ ಬಂದಿದೆ. ಜನರಿಗೆ ಉತ್ತಮ ಆಡಳಿತ ನೀಡೋದೇ ನಮ್ಮ ಗುರಿ. 2028ಕ್ಕೂ ನಮ್ಮ ಪಕ್ಷವನ್ನ ಅಧಿಕಾರಕ್ಕೆ ತರೋದು ನಮ್ಮ ಗುರಿ ಎಂದರು. ಮಂಡ್ಯ ಏಳರಲ್ಲಿ ಆರು ಕ್ಷೇತ್ರ ಗೆದ್ದಿದ್ದೇವೆ. ಮುಂದಿನ ದಿನಗಳಲ್ಲಿ ಏಳಕ್ಕೆ ಏಳು ಕ್ಷೇತ್ರ ಗೆಲ್ಲುತ್ತೇವೆ. ಕುಮಾರಸ್ವಾಮಿ ತಮ್ಮ ವರ್ಚಸ್ಸಿನಿಂದ ಲೋಕಸಭೆಯಲ್ಲಿ ಗೆದ್ದಿಲ್ಲ. ಮೋದಿ ವರ್ಚಸ್ಸಿನಿಂದ ಗೆದ್ದಿರೋದು. ಒಂದು ಸೋಲಿನಿಂದ ವರ್ಚಸ್ಸಿನ ಬಗ್ಗೆ ಅಳೆಯಲಿಕ್ಕೆ ಆಗಲ್ಲ ಎಂದು ಅವರು ಹೇಳಿದರು. 

ಮಗನ ಚುನಾವಣೆಗೆ ಕಂಪನಿಗಳಿಂದ ಎಚ್‌ಡಿಕೆ ರೋಲ್ ಕಾಲ್ ಮಾಡಿ ಸಾವಿರಾರು ಕೋಟಿ ಹಣ ಪಡೆದಿದ್ದಾರೆ: ಚಲುವರಾಯಸ್ವಾಮಿ

ಪುಟ್ಟರಾಜು ಹೇಳಿಕೆಗೆ ತಿರುಗೇಟು: 

ಸರ್ಕಾರ ಬೀಳುತ್ತೆ ಎಂಬ ಪುಟ್ಟರಾಜು ಹೇಳಿಕೆಗೆ ಪ್ರತಿಕ್ರಿಯಿಸಿದ ಎನ್. ಚಲುವರಾಯಸ್ವಾಮಿ ಅವರು, ಇದೇನು ಕಡ್ಲೆಪುರಿ ನಾ? ಪಾನಿಪುರಿ ವ್ಯಾಪಾರನಾ? ಅವರ ಮಾತಿಗೆಲ್ಲ ಉತ್ತರ ಕೊಡೋದು ಸರಿ ಇಲ್ಲ. ನಮ್ಮಲ್ಲಿ ಯಾವುದೇ ಕಿತ್ತಾಟ ಇಲ್ಲ ಎಂದು ತಿರುಗೇಟು ನೀಡಿದರು. 

ಕಾಂಗ್ರೆಸ್ ನವರಿಂದ ಒಗ್ಗಟ್ಟು ಏನು ಎಂಬುದನ್ನ ಬಿಜೆಪಿ, ಜೆಡಿಎಸ್ ನಾಯಕರು ಕಲಿಯಲಿ. ಜೆಡಿಎಸ್ ಜಿ.ಟಿ. ದೇವೇಗೌಡರನ್ನು ಸರಿಪಡಿಸಿಕೊಳ್ಳಲಿ. ಬಿಜೆಪಿಯಲ್ಲಿ ಯತ್ನಾಳ್ ಮೇಲೆ ಕ್ರಮ ತೆಗೆದು ಕೊಳ್ಳಲಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮಧ್ಯೆ ಯಾವುದೇ ಬಣ ಇಲ್ಲ, ಸಿಎಂ ಆಯ್ಕೆ ಮಾಡೋದು ಹೈಕಮಾಂಡ್. ಜನ ನಮ್ಮನ್ನ ಆಯ್ಕೆ ಮಾಡಿರೋದು ಉತ್ತಮ ಕೆಲಸ ಮಾಡಲಿ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ಅಗತ್ಯ: ಛಲವಾದಿ ನಾರಾಯಣಸ್ವಾಮಿ