ಚನ್ನಪಟ್ಟಣ ಬೈಎಲೆಕ್ಷನ್‌ಗೆ ಹಣಕ್ಕೆ ಬೇಡಿಕೆ: ಗೊತ್ತಿಲ್ಲದೆ ಮಾತನಾಡಲು ನಾನು ಕುಮಾರಸ್ವಾಮಿ ಅಲ್ಲ, ಚಲುವರಾಯಸ್ವಾಮಿ

By Girish GoudarFirst Published Oct 4, 2024, 4:21 PM IST
Highlights

FIR ಆಗಿದೆ, ತನಿಖೆ ಆಗಲಿ. ಗೊತ್ತಿಲ್ಲದೆ ಮಾತನಾಡಲು ನಾನು ಕುಮಾರಸ್ವಾಮಿ ಅಲ್ಲ. ಕುಮಾರಸ್ವಾಮಿ ಕಥೆ ನಿಮಗೂ ಗೊತ್ತಿದೆ, ನಮಗೂ ಗೊತ್ತಿದೆ. ಜನ ಕೊಟ್ಟಿರುವ ಜವಾಬ್ದಾರಿ ಕುಮಾರಸ್ವಾಮಿ ನಿಭಾಯಿಸಲಿ. ಉಡಾಫೆ ಮಾತುಗಳನ್ನ ಕುಮಾರಸ್ವಾಮಿ ಬಿಡಲಿ ಎಂದು ವ್ಯಂಗ್ಯವಾಡಿದ ಸಚಿವ ಚಲುವರಾಯಸ್ವಾಮಿ 

ಮಂಡ್ಯ(ಅ.04): ಯಾವುದೇ ತಡವಾಗಿಲ್ಲ, ಕುಂಭಲಗ್ನದಲ್ಲಿ ದಸರಾ ಉದ್ಘಾಟಿಸಿದ್ದೇವೆ. ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯಗಳು. ಮೈಸೂರಿಗಿಂತ ಮೊದಲು ಶ್ರೀರಂಗಪಟ್ಟಣದಲ್ಲಿ ದಸರಾ ಮೊದಲು ಆರಂಭವಾಯಿತು. ಈ ಬಾರಿ ಹೆಚ್ಚು ಆಕರ್ಷಣೀಯವಾಗಿ 4 ದಿನಗಳ ಕಾಲ ಆಚರಣೆ ನಡೆಯಲಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ. 

ಇಂದು(ಶುಕ್ರವಾರ) ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು, 136 ಜನ ಶಾಸಕರು, ಸಚಿವರು, ಹೈಕಮಾಂಡ್, ಸಿದ್ದರಾಮಯ್ಯ ಪರವಿದೆ‌. ಕೆಲ ವಿರೋಧ ಪಕ್ಷದ ನಾಯಕರೇ ಸಿದ್ದರಾಮಯ್ಯ ಪರ ಮಾತನಾಡ್ತಾರೆ. ರಾಜೀನಾಮೆ ಸುಮ್ಮನೆ ಕೇಳಲಾಗಲ್ಲ, ಇವರು ರಾಜೀನಾಮೆ ಕೊಡ್ತಾರ ಎಂದು ಜಿಟಿ ದೇವೇಗೌಡ ಹೇಳಿದ್ರು. ಈಗಲಾದರೂ ವಿಜಯೇಂದ್ರ, ಅಶೋಕ್, ಕುಮಾರಸ್ವಾಮಿಗೆ ಅರ್ಥ ಆಗಿರುತ್ತದೆ. ಕೇಸು, FIR ಯಾರ್ಯಾರ ಮೇಲೆ ಇದೆ ಅರ್ಥ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ. 

Latest Videos

ಇಬ್ಭಾಗವಾಗಿರುವ ರೈತ ಸಂಘಟನೆ ಒಗ್ಗೂಡಿಸುವೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

ಸಿದ್ದರಾಮಯ್ಯ ಪರೋಕ್ಷ ಪ್ರಭಾವವಿದೆ ಎಂದು ದೂರು ಕೊಟ್ಟಿದ್ದಾರೆ. ನೇರವಾಗಿ ಅದರ ಹೊಣೆ ಹೊತ್ತ ಅಶೋಕ್, ವಿಜಯೇಂದ್ರ, ಕುಮಾರಸ್ವಾಮಿ ಇದರಲ್ಲಿದ್ದಾರೆ. ಅವರ ಹೆಸರಗಳು ತಳುಕು ಹಾಕಿಕೊಳ್ತಿಲ್ಲ. ಕೇವಲ ಸಿದ್ದರಾಮಯ್ಯ ಹೆಸರು ಮಾತ್ರ ಕೇಳಿ ಬರ್ತಿದೆ. ವಿರೋಧ ಪಕ್ಷದ ನಾಯಕರೇ ಹೇಳಿದ ಮೇಲೆ ಅವರ ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಲಿ ಎಂದು ತಿಳಿಸಿದ್ದಾರೆ. 

ಮುಂದಿನ ವರ್ಷ ದಸರಾ ನಿರ್ವಿಘ್ನವಾಗಿ ಮಾಡಲು ಅವಕಾಶ ಕೊಡವ್ವ ಎಂದು ಕೇಳಿಕೊಂಡಿದ್ದಾರೆ. ಅಧಿಕಾರ ಹಂಚಿಕೆ ವಿಚಾರ ನಮ್ಮಲ್ಲಿ ಚರ್ಚೆ ಇಲ್ಲ. ನಾನು ಮುಂದುವರೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈಗ ಸಿಎಂ ಬದಲಾವಣೆ ಚರ್ಚೆ ಇಲ್ಲ. ಆರ್. ಅಶೋಕ್ ಮೊದಲು ರಾಜೀನಾಮೆ ಕೊಡಲಿ. ಅವರ ವಿಚಾರಕ್ಕೂ ಸಿದ್ದರಾಮಯ್ಯ ವಿಚಾರಕ್ಕೂ ವ್ಯತ್ಯಾಸವಿದೆ. ವಿರೋಧ ಪಕ್ಷ ನಾಯಕತ್ವಕ್ಕೆ ಮೊದಲು ರಾಜೀನಾಮೆ ಕೊಡಲಿ. ಕಾನೂನು ಏನಿದೆ ಅದರ ಪ್ರಕಾರ ನಮ್ಮ ನಾಯಕರು ನಡೆದುಕೊಳ್ತಾರೆ. ಅಶೋಕ್‌ದು ಏನಿದೆ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದು ಟೀಕಿಸಿದ್ದಾರೆ. 

ಚನ್ನಪಟ್ಟಣ ಉಪಚುನಾವಣೆಗೆ ಹಣಕ್ಕೆ ಬೇಡಿಕೆ ವಿಚಾರದ ಬಗ್ಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು, FIR ಆಗಿದೆ, ತನಿಖೆ ಆಗಲಿ. ಗೊತ್ತಿಲ್ಲದೆ ಮಾತನಾಡಲು ನಾನು ಕುಮಾರಸ್ವಾಮಿ ಅಲ್ಲ. ಕುಮಾರಸ್ವಾಮಿ ಕಥೆ ನಿಮಗೂ ಗೊತ್ತಿದೆ, ನಮಗೂ ಗೊತ್ತಿದೆ. ಜನ ಕೊಟ್ಟಿರುವ ಜವಾಬ್ದಾರಿ ಕುಮಾರಸ್ವಾಮಿ ನಿಭಾಯಿಸಲಿ. ಉಡಾಫೆ ಮಾತುಗಳನ್ನ ಕುಮಾರಸ್ವಾಮಿ ಬಿಡಲಿ ಎಂದು ವ್ಯಂಗ್ಯವಾಡಿದ್ದಾರೆ. 

click me!