ಜನರ ಸಮಸ್ಯೆಗೆ ಸ್ಪಂದಿಸೋದಕ್ಕೆ ಸರ್ಕಾರ ತಯಾರಿದೆ. ಈ ಭಾಗದ ಸಮಸ್ಯೆ ಕುರಿತು ಸಿಎಂ, ಕಾನೂನು ಸಚಿವರು ಸೇರಿ ಎಲ್ಲರೂ ಚರ್ಚೆಗೆ ಒತ್ತಾಯಿಸಿದ್ದರು. ಆದರೆ, ಬಿಜೆಪಿ-ಜೆಡಿಎಸ್‌ನವರಿಗೆ ಅದರ ಬಗ್ಗೆ ಆಸಕ್ತಿ ಇಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಜಮಖಂಡಿ (ಡಿ.15): ಜನರ ಸಮಸ್ಯೆಗೆ ಸ್ಪಂದಿಸೋದಕ್ಕೆ ಸರ್ಕಾರ ತಯಾರಿದೆ. ಈ ಭಾಗದ ಸಮಸ್ಯೆ ಕುರಿತು ಸಿಎಂ, ಕಾನೂನು ಸಚಿವರು ಸೇರಿ ಎಲ್ಲರೂ ಚರ್ಚೆಗೆ ಒತ್ತಾಯಿಸಿದ್ದರು. ಆದರೆ, ಬಿಜೆಪಿ-ಜೆಡಿಎಸ್‌ನವರಿಗೆ ಅದರ ಬಗ್ಗೆ ಆಸಕ್ತಿ ಇಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ನಗರದಲ್ಲಿ ಎ ಟು ಝೆಡ್ ಮಲ್ಟಿಬ್ರ್ಯಾಂಡ್ ಕೃಷಿ ಮಳಿಗೆ ಮತ್ತು ಕಾರ್ಪೋರೇಟ್ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿ, ಸದನದಲ್ಲಿ ಈ ಭಾಗದ ಸಮಸ್ಯೆ ಚರ್ಚೆ ಶುರು ಆಗಿದೆ. ಬೆಳಗಾವಿಯಲ್ಲಿ ನಡೆಯೋದು ವರ್ಷಕ್ಕೆ ಒಂದೇ ಸದನ. ಈ ಭಾಗದ 15 ಜಿಲ್ಲೆಯ ಸಮಸ್ಯೆ ಬಗ್ಗೆ ಚರ್ಚೆ ಮಾಡೋದು ಕಮಿಟ್ಮೆಂಟ್ ಇರಬೇಕು. ಆದರೆ, ಬಿಜೆಪಿ, ಜೆಡಿಎಸ್‌ನವರಿಗೆ ಅದು ಇಲ್ಲ ಎಂದರು.
ಭದ್ರತಾ ಲೋಪ, ತನಿಖೆಯಾಗಲಿ: ಲೋಕಸಭೆ ಸದನದಲ್ಲಿನ ಭದ್ರತಾ ಲೋಪ ಉಂಟಾಗಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಂಸದ ಪ್ರತಾಪ್ ಸಿಂಹ ಅವರ ಪಾಸ್ ಪಡೆದು ಒಳಗೆ ಹೋಗಿದರು ಅಂತಿದಾರೆ. ಅವರು ಯಾರು, ಅವರ ಹಿನ್ನೆಲೆ ಏನು, ಯಾಕ್ ಹೋದ್ರು ಎಲ್ಲವೂ ತನಿಖೆ ಆಗಬೇಕು. ತನಿಖೆ ಆದಮೇಲೆನೆ ಎಲ್ಲ ಸತ್ಯ ಗೊತ್ತಾಗಲಿದೆ. ಒಬ್ಬ ಸಂಸದನಾಗಿ ಹೇಗೆ ಪಾಸ್ ಕೊಟ್ರು? ಪ್ರತಾಪ್ ಸಿಂಹ ಮೂರನೇ ಬಾರಿ ಸಂಸದರಾದವರು. ಈ ದೇಶದ ಎಲ್ಲ ವಿಚಾರ ಗೊತ್ತು ಅಂತ ಹೇಳುವ ಪ್ರತಾಪ್ ಸಿಂಹ ಮೂಲಕವೇ ಪಾಸ್ ಹೋಗಿದೆ. ಅದೆಲ್ಲವೂ ತನಿಖೆ ಆಗಲಿ ಎಂದರು.
undefined
ಸಂಸತ್ ಭವನದಲ್ಲಿನ ಭಯೋತ್ಪಾದಕ ರೀತಿಯ ಕೃತ್ಯ ಆಘಾತಕಾರಿ: ಪ್ರಮೋದ್ ಮುತಾಲಿಕ್
ಸೆಕ್ಯೂಲರ್ ಎನ್ನುವ ಹೆಚ್‌ಡಿಕೆ, ಬಿಜೆಪಿ ಜೊತೆ ಕೈಜೋಡಿಸಿರುವ ವಿಚಾರವಾಗಿ ಮಾತನಾಡಿದ ಅವರು, ಸೆಕ್ಯೂಲರ್ ಅಂತ ಯಾರು ಹೇಳಿದ್ರು? ಅದು ಅವರು ಹೇಳಿದ್ದು. ನಿಮ್ಮವರು (ಮಾಧ್ಯಮದವರು) ನಂಬಿದರು.ಮಾಧ್ಯಮದವರು ಫೋಕಸ್ ಮಾಡುತ್ತಿದ್ದೀರಿ. ಕಲ್ಲಡ್ಕ ಪ್ರಭಾಕರ್ ಭಟ್‌ರನ್ನು ತೆಗುಳಿದ್ದ ಹೆಚ್‌ಡಿಕೆ ಈಗ ಹಾಡಿ ಹೊಗುಳುತ್ತಿದ್ದಾರೆ. ಈ ದೇಶದಲ್ಲಿ ಎಚ್‌ಡಿಕೆ ಸೆಕ್ಯೂಲರ್ ಅಂತ ಹೇಳಿ ಹೇಳಿ ಬಂದವರು. ಜೈಶ್ರೀರಾಮ ಅಂತಿದ್ದಾರೆ, ಇನ್ನೂ ಅನೇಕು ವಿಚಾರಗಳನ್ನ ಮೈಗೂಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಒಂದೇ ಅರ್ಥ ಇವತ್ತಿನ ಪರಿಸ್ಥಿತಿಯಲ್ಲಿ ಬಿಜೆಪಿ ಜೊತೆಗೆ ಅನಿವಾರ್ಯವಾಗಿ ಹೋಗಿದ್ದಾರೆ. ಬಿಜೆಪಿ ಜೊತೆ ಎಷ್ಟರ ಮಟ್ಟಿಗೆ ಸಂಬಂಧ ಮಾಡುತ್ತಾರೆ ಅಂತ ಕಾದು ನೋಡೋಣ ಎಂದರು.
ಈಶ್ವರಪ್ಪಗೆ ಟಾಂಗ್: ಕರ್ನಾಟಕದಲ್ಲಿ ಈಗ ಬಹಳ ಜನ ಅಂಬೇಡ್ಕರ್ ಆಗಿದ್ದಾರೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾವ್ಯಾರು ಅಂಬೇಡ್ಕರ್ ಅವರಿಗೆ ಕಂಪೇರ್ ಮಾಡಿಕೊಂಡು ಹೇಳಿಲ್ಲ. ಅಂಬೇಡ್ಕರ್ ಈ ದೇಶದ ಮಹಾನ್ ನಾಯಕ. ಈ ದೇಶಕ್ಕೆ ಸಂವಿಧಾನ ತಂದು ಕೊಟ್ಟವರು ನೆಹರು, ಶಾಸ್ತ್ರಿ, ಪಟೇಲರ ಜೊತೆಗೆ ಸಮಕಾಲಿನವರು. ಯಾರೂ ಸಹ ಅಂಬೇಡ್ಕರ್ ನಾನೇ ಅಂಬೇಡ್ಕರ್ ಅಂತಾ ಹೇಳಲ್ಲ. ಈಗ ಚುನಾವಣೆ ಹತ್ತಿರ ಬರುತ್ತಿದೆ. ಸರ್ಕಾರದ ವಿರುದ್ಧ ಮಾತನಾಡೋಕೆ ಯಾವುದೇ ವಿಚಾರ ಸಿಗುತ್ತಿಲ್ಲ.
ಪಾಪ ಇಂತವೆಲ್ಲ ಚುನಾವಣೆಗಾಗಿ ಹೇಳುತ್ತಿದ್ದಾರೆ. ಹೇಳಲಿ ಪಾಪ ಈಶ್ವರಪ್ಪ ಯಾವತ್ತಾದ್ರೂ ಗೌರವಯುತವಾಗಿ ಮಾತನಾಡಿರುವ ಇತಿಹಾಸ ಇದ್ರೆ ಹೇಳಿ ಎಂದು ಟಾಂಗ್ ನೀಡಿದರು. ಯುಕೆಪಿ ಯೋಜನೆ ಅನುಷ್ಠಾನ ವಿಳಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಘೋಷಣೆ ಮಾಡುತ್ತೇವೆ ಅಂತಾ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಬಿಜೆಪಿಗರು ಮಾತಿಗೆ ನಿಲ್ಲಲ್ಲ ಅನ್ನೋ ಕಾರಣಕ್ಕೆ ಈ ಸಾರಿ 60 ಸೀಟ್‌ಗೆ ಹೋಗಿದ್ದಾರೆ. ನಮ್ಮ ಭರವಸೆಗಳನ್ನು ಜನರು ನಂಬಿದ್ದಾರೆ. ಬಿಜೆಪಿಗರ ಭರವಸೆಯನ್ನು ಜನರು ನಂಬಿಲ್ಲ ಎಂದರು.
ಆರಂಭಿಕ ಪರಿಹಾರ: ಬರ ಪರಿಹಾರ ಹೆಕ್ಟೇರ್‌ಗೆ 2 ಸಾವಿರ ಸಾಲಲ್ಲ ಎಂಬ ವಿಪಕ್ಷ ಟೀಕೆ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬರವನ್ನು ಎನ್‌ಡಿಆರ್‌ಎಫ್‌ನಲ್ಲಿ ತೀರ್ಮಾನ ಮಾಡಬೇಕು. ದೇಶದಲ್ಲಿ ಅನೇಕ ರಾಜ್ಯಗಳಿ ಬರಗಾಲ ಎದುರಿಸುತ್ತಿವೆ. ಅದರಲ್ಲಿ ನಮ್ಮ ರಾಜ್ಯ ಮಾತ್ರ ಸೆಪ್ಟೆಂಬರ್‌ನಲ್ಲಿ ಮೆಮೊರೆಂಡಮ್ ಕೊಟ್ಟಿದ್ದಿವಿ. ಮೂರು ಬಾರಿ ಪತ್ರ ಬರೆದಿದ್ದಿನಿ. ಪ್ರಿಯಾಂಕ ಖರ್ಗೆ, ಕಂದಾಯ ಸಚಿವರು, ನಾನು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಿನಿ. ಸಿಎಂ 10ಕ್ಕೂ ಹೆಚ್ಚು ಪತ್ರ ಬರೆದಿದ್ದಾರೆ. ಇಲ್ಲಿವರೆಗೆ ಕೇಂದ್ರ ಯಾವುದೇ ತೀರ್ಮಾನ ಘೋಷಣೆ ಮಾಡಿಲ್ಲ.
ನನಗೆ ಈಶ್ವರಪ್ಪ ಭೇಟಿ ಆಗುವ ಅವಶ್ಯಕತೆ ಇಲ್ಲ: ಜಗದೀಶ್ ಶೆಟ್ಟರ್
ನಾಳೆ ನಾಡಿದ್ದು ಮಾಡುವವರಿದ್ದಾರೆ. ಮಾಡಲಿ. ಅದಕ್ಕಿಂತ ಮುಂಚೆ ಆರಂಭಿಕವಾಗಿ 2 ಸಾವಿರ ಕೊಟ್ಟಿದ್ದೇವೆ ವಿನಃ, ಅದು ಸಂಪೂರ್ಣ ಪರಿಹಾರ ಅಲ್ಲ. ಪರಿಹಾರ ಘೋಷಣೆ ಆದ ತಕ್ಷಣ ಕೊಡ್ತೇವೆ ಎಂದು ತಿಳಿಸಿದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶ್ರೀಗಳು ಸಾನ್ನಿಧ್ಯವಹಿಸಿದ್ದರು. ಈ ಸಂದರ್ಭದಲ್ಲಿ ವಿಧಾನ ಪರಿಷತ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಉಪಕುಲಪತಿ ಪಿ.ಎಲ್.ಪಾಟೀಲ್, ಉದ್ಯಮಿ ಸಂಗಮೇಶ ನಿರಾಣಿ ಇತರರು ಇದ್ದರು.