ಬಿಜೆಪಿಯವರಿಗೆ ತಮ್ಮಲ್ಲೇ ನೆಲೆ ಇಲ್ಲ. ಬಿಜೆಪಿಯಲ್ಲಿ 20 ಗುಂಪುಗಳಿವೆ. ಮೊದಲು ತಮ್ಮ ಮನೆ ಸರಿ ಪಡೆಸಿಕೊಳ್ಳಲಿ ಬೇರೆಯವರದ್ದೇನು ನೋಡ್ತಾರೆ. 40% ಭ್ರಷ್ಟಾಚಾರದಿಂದ ಜನರು ಬಿಜೆಪಿಯನ್ನ ಕಿತ್ತೆಸೆದಿದ್ದಾರೆ. ಬಿಜೆಪಿಯಲ್ಲಿ ಹೊಂದಾಣಿಕೆ ಇಲ್ಲ ಎಂದು ಟೀಕಿಸಿದ ಸಚಿವ ಎಂ.ಬಿ. ಪಾಟೀಲ್
ವಿಜಯಪುರ(ಅ.13): ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು, ಮುಖ್ಯಮಂತ್ರಿಯಾಗಿದ್ದಾರೆ, ಮುಖ್ಯಮಂತ್ರಿ ಆಗಿಯೇ ಮುಂದುವರೆಯುತ್ತಾರೆ. 5 ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್ ಅವರು, ಕೆಲ ನಾಯಕರ ಅಭಿಮಾನಿಗಳು ಅವರ ನಾಯಕರು ಸಿಎಂ ಆಗಲಿ ಎಂದು ಘೋಷಣೆ ಕೂಗ್ತಾರೆ. ಹಾಗೇ ಘೋಷಣೆ ಕೂಗೋದ್ರಲ್ಲಿ ತಪ್ಪೆನಿಲ್ಲ ಎಂದು ತಿಳಿಸಿದ್ದಾರೆ.
undefined
ತೆವಲು ತೀರಿಸಿಕೊಳ್ಳಲು ಹೇಳಿಕೆ ಕೊಟ್ಟರೆ ನಾನು ಉತ್ತರ ಕೊಡಬೇಕಾ?: ಬಾಲಕೃಷ್ಣ ವಿರುದ್ಧ ಹರಿಹಾಯ್ದ ಎಚ್‌ಡಿಕೆ
ಬಿಜೆಪಿ ಪಕ್ಷದಿಂದ ಮತ್ತೊಂದು ಸುತ್ತಿನ ಹೋರಾಟ ವಿಚಾರದ ಬಗ್ಗೆ ಮಾತನಾಡಿದ ಎಂ.ಬಿ. ಪಾಟೀಲ್, ಬಿಜೆಪಿಯವರಿಗೆ ತಮ್ಮಲ್ಲೇ ನೆಲೆ ಇಲ್ಲ. ಬಿಜೆಪಿಯಲ್ಲಿ 20 ಗುಂಪುಗಳಿವೆ. ಮೊದಲು ತಮ್ಮ ಮನೆ ಸರಿ ಪಡೆಸಿಕೊಳ್ಳಲಿ ಬೇರೆಯವರದ್ದೇನು ನೋಡ್ತಾರೆ. 40% ಭ್ರಷ್ಟಾಚಾರದಿಂದ ಜನರು ಬಿಜೆಪಿಯನ್ನ ಕಿತ್ತೆಸೆದಿದ್ದಾರೆ. ಬಿಜೆಪಿಯಲ್ಲಿ ಹೊಂದಾಣಿಕೆ ಇಲ್ಲ ಎಂದು ಟೀಕಿಸಿದ್ದಾರೆ.
ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ವಿಚಾರದ ಬಗ್ಗೆ ಮಾತನಾಡಿದ ಎಂ.ಬಿ. ಪಾಟೀಲ್ ಅವರು, ಹೋರಾಟಗಳು ನಡೆದ ಸಂದರ್ಭದಲ್ಲಿ ನಡೆದ ಗಲಭೆ ಕೇಸ್ ಗಳನ್ನ ಕಾಲ ಕಾಲಕ್ಕೆ ಹಿಂಪಡೆದಿದ್ದಾರೆ. ಎಲ್ಲ ಸರ್ಕಾರಗಳು ಕೇಸ್‌ಗಳನ್ನ ಹಿಂಪಡೆದಿವೆ. ಸಿ.ಟಿ. ರವಿ ಕೇಸ್ ಹಿಂಪಡೆದಿದ್ದೇವೆ, ಅದನ್ನ ಹೇಳಲ್ವಾ ಬಿಜೆಪಿಯವರು? ಎಂದು ಪ್ರಶ್ನಿಸಿದ್ದಾರೆ.
ನೀವು ಮತಾಂಧ ಇಸ್ಲಾಂ ಭಯೋತ್ಪಾದಕರಿಗೆ ಬೆಂಬಲಿಗರಾಗ್ತೀರಿ: ಸಿದ್ದು ವಿರುದ್ಧ ಪ್ರಲ್ಹಾದ ಜೋಶಿ ಗರಂ
ಗಲಭೆಗಳಾದಾಗ ಅಮಾಯಕರ ಮೇಲೆ ಕೇಸ್ ದಾಖಲಾಗಿರುತ್ವೆ. ಗಲಭೆ ಮಾಡಿದವರು ಓಡಿ ಹೋಗಿರ್ತಾರೆ, ಸಿಕ್ಕಿ ಹಾಕಿಕೊಂಡಿರಲ್ಲ. ಗಲಭೆ ನೋಡುತ್ತ ನಿಂತವರು ಸಿಕ್ಕಿಹಾಕಿಕೊಂಡಿರ್ತಾರೆ. ರೈತ ಹೋರಾಟ, ವಿದ್ಯಾರ್ಥಿ ಹೋರಾಟ, ಜನರ ಹೋರಾಟಗಳ ಕೇಸನ್ನ ಎಲ್ಲ ಸರ್ಕಾರಗಳು ಹಿಂಪಡೆದಿರ್ತವೆ. ಅದೇ ರೀತಿ ಹುಬ್ಬಳ್ಳಿ ಗಲಭೆ ವಾಪಸ್ ಪಡೆದಿರಬಹುದು ಎಂದು ಹೇಳುವ ಮೂಲಕ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದುಕೊಂಡಿರುವುದನ್ನ ಸಚಿವರು ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದ್ರೆ ಮುಸ್ಲಿಂ ಭಯೋತ್ಪಾದಕರಿಗೆ ಹಬ್ಬ ಎಂಬ ವಿಪಕ್ಷ ನಾಯಕ ಆರ್. ಅಶೋಕ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್ ಅವರು, ಬಿಜೆಪಿಯವರು ಇದನ್ನೆ ಮಾಡಿದ್ದಾರೆ, ಆರ್ ಅಶೋಕ ಇದ್ನೆ ಮಾಡಿದ್ದಾರೆ. ಹಿಜಾಬ್, ಹಲಾಲ್, ಆಜಾನ್ ಇದನ್ನೆ ಮಾಡಿಕೊಂಡು ಬಂದಿದ್ದಾರೆ. ನಾವು ಎಲ್ಲ ಜನರನ್ನ ರಕ್ಷಣೆ ಮಾಡ್ತೇವೆ. ಹಿಂದೂ, ಮುಸ್ಲಿಂ, ಸಿಖ್, ಬೌದ್ಧರು ಎಲ್ಲರನ್ನೂ ರಕ್ಷಣೆ ಮಾಡ್ತೇವೆ, ಎಲ್ಲರಿಗೂ ಪ್ರೋತ್ಸಾಹ ಕೊಡ್ತೇವೆ ಎಂದು ತಿಳಿಸಿದ್ದಾರೆ.