ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರಕ್ಕೆ ಬಿಜೆಪಿ ಮುಂದಾಗಿದೆ: ಸಚಿವ ಎಂ.ಬಿ.ಪಾಟೀಲ್

Published : Mar 03, 2024, 11:03 PM IST
ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರಕ್ಕೆ ಬಿಜೆಪಿ ಮುಂದಾಗಿದೆ: ಸಚಿವ ಎಂ.ಬಿ.ಪಾಟೀಲ್

ಸಾರಾಂಶ

ನಮ್ಮ ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರಕ್ಕೆ ಬಿಜೆಪಿ ಮುಂದಾಗಿದೆ. ಈ ಕುರಿತು ಸಿಎಂಗೆ ನಿಖರ ಮಾಹಿತಿ ಇದ್ದದ್ದರಿಂದಲೇ ಹೇಳಿರಬಹುದು. ಸಿಎಂ ಬಳಿ ಗುಪ್ತಚರ ಇಲಾಖೆ ಇದೆ, ಹಾಗಾಗಿ ಅವರಿಗೆ ಮಾಹಿತಿ ಇರಬಹುದು ಎಂದು ಎಂ.ಬಿ.ಪಾಟೀಲ್ ಹೇಳಿದರು.

ವಿಜಯಪುರ (ಮಾ.03): ಸಚಿವನಾಗಿ ಜವಾಬ್ದಾರಿ ಸ್ಥಾನದಲ್ಲಿರುವ ನಾನು ವರದಿಯಲ್ಲಿ ಏನಿದೆ ಎಂದು ತಿಳಿಯದೇ ಪ್ರತಿಕ್ರಿಯೆ ನೀಡಲ್ಲ. ಮೀಸಲಾತಿಯ ಕಾರಣಕ್ಕೆ ಲಿಂಗಾಯತರು, ಒಕ್ಕಲಿಗರು ಉಪಜಾತಿಯಲ್ಲಿ ಬೇರೆ ಬೇರೆ ಬರೆಸಿದ್ದಾರೆ. ಹಿಂದೂ, ಲಿಂಗಾಯತ ಅಂತೆಲ್ಲ ಬೇರೆ ಬೇರೆ ಜಾತಿ ಬರೆಸಿದ್ದಾರೆ. ಉಪ ಜಾತಿಯಲ್ಲಿ ಇರುವವರ ಮೀಸಲಾತಿಗೆ ಧಕ್ಕೆಯಾಗದಂತೆ ಎಲ್ಲ ಜಾತಿಗಳನ್ನು ಲಿಂಗಾಯತರಲ್ಲಿ ಒಂದೇ ಕಡೆ ತರಬೇಕಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಜಾತಿಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪಾಟೀಲ, ವರದಿಯಲ್ಲಿ ಏನಿದೆ ಎಂದು ತಿಳಿದುಕೊಳ್ಳದೇ ಈ ಕುರಿತು ಪ್ರತಿಕ್ರಿಯೆ ನೀಡಲ್ಲ ಎಂದರು.

135 ಶಾಸಕರ ಬಲ ಹೊಂದಿರುವ ನಮ್ಮ ಸರ್ಕಾರ ಸುಭದ್ರವಾಗಿದ್ದರೂ ಸರ್ಕಾರವನ್ನು ಅಸ್ಥಿರಗೊಳಿಸೋ ಪ್ರಯತ್ನ ನಡೆದಿದೆ. ನಮ್ಮ ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರಕ್ಕೆ ಬಿಜೆಪಿ ಮುಂದಾಗಿದೆ. ಈ ಕುರಿತು ಸಿಎಂಗೆ ನಿಖರ ಮಾಹಿತಿ ಇದ್ದದ್ದರಿಂದಲೇ ಹೇಳಿರಬಹುದು. ಸಿಎಂ ಬಳಿ ಗುಪ್ತಚರ ಇಲಾಖೆ ಇದೆ, ಹಾಗಾಗಿ ಅವರಿಗೆ ಮಾಹಿತಿ ಇರಬಹುದು ಎಂದು ಎಂ ಬಿ ಪಾಟೀಲ ಹೇಳಿದರು. ಸರ್ಕಾರ ಪತನಕ್ಕಾಗಿ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನ ನಡೆಸಿರುವ ನಿಖರ ಮಾಹಿತಿ ಇರುವುದರಿಂದಲೇ ಹೇಳಿದ್ದಾರೆ. 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರದ ಪತನ ಸುಲಭವಲ್ಲ. 

ಕಾಂಗ್ರೆಸ್‌ ಶಕ್ತಿ ಯೋಜನೆಯಿಂದ ಪ್ರಯಾಣಿಕರ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

ಸರ್ಕಾರ ಪತನ ಮಾಡಲು ಕಾಂಗ್ರೆಸ್ ಪಕ್ಷದ ಕನಿಷ್ಟ 50 ಶಾಸಕರು ಬೆಂಬಲ ನೀಡಬೇಕು. ಯಾವ ಶಾಸಕರು ಅನರ್ಹರಾಗಲು ಬಯಸುವುದಿಲ್ಲ. ಸರ್ಕಾರದ ಪತನ ಅಸಾಧ್ಯ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಬೆಂಗಳೂರು ರಾಮೇಶ್ವರ ಹೊಟೇಲ್ ನಲ್ಲಿನ ಬಾಂಬ್ ಸ್ಪೋಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಎಂ ಬಿ ಪಾಟೀಲ, ನಾವು ನಮ್ಮ ಸರ್ಕಾರ ಕೃತ್ಯ ಎಸಗಿದವರ ರಕ್ಷಣೆ ಮಾಡಲ್ಲ. ರಕ್ಷಣೆ ಮಾಡುವ ಪ್ರಶ್ನೇಯೆ ಇಲ್ಲ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇಂಥ ಘಟನೆ ಆಗದಂತೆ ಎಚ್ಚರಿಕೆ ವಹಿಸುತ್ತೇವೆ. NIA ತನಿಖೆ ನಡೆಸುತ್ತಿದ್ದು, ರಾಜ್ಯ ಶಾಂತಿಗೆ ಹೆಸರಾಗಿದೆ. ಅದು ಯಾರೇ ಇರಲಿ, ಎಂಥವರೆ ಇರಲಿ, ಯಾವುದೇ ಜಾತಿಯವರೇ ಇರಲಿ ಕಠಿಣ ಕ್ರಮ ಪಕ್ಕಾ ಎಂದಿದ್ದಾರೆ.

ಜನರಿಗೆ ಭಾರತದ ನೈಜ ಇತಿಹಾಸ ತಿಳಿಸಬೇಕಿದೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಮುಸ್ಲಿಂ ಓಲೈಕೆಯಿಂದ ಕೃತ್ಯ ಎಂದು ಸಿಟಿ ರವಿ ಹೇಳಿರುವ ವಿಚಾರಕ್ಕೆ ತಿರುಗೇಟು ನೀಡಿದ ಎಂ ಬಿ ಪಾಟೀಲ್ ಇಂಥ ವಿಚಾರದಲ್ಲಿ ರಾಜಕೀಯ ಮಾಡೋದು ತಪ್ಪು. ಪುಲ್ವಾಮಾ ಆದಾಗ ನಿಮ್ಮ ಇಂಟಲಿಜೆನ್ಸ್ ಎಲ್ಲಿ ಹೋಗಿತ್ತು? ಇದರಲ್ಲಿ ರಾಜಕಾರಣ ಸರಿಯಲ್ಲ ಎಂದು ಟಾಂಗ್ ನೀಡಿದರು. ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದು ನಿಜ ಎಂದು FSL ವರದಿ ಬಂದಿರುವ ವಿಚಾರದ ಕುರಿತು ಮಾತನಾಡಿದ ಎಂಬಿಪಿ ಪಾಕಿಸ್ತಾನ್ ಪರ ಘೋಷಣೆ ಕುಗಿದ್ದು ಸಹಿಸಿಕೊಳ್ಳುವಂತದ್ದಲ್ಲ. FSL ವರದಿ ಬಳಿಕ ಕಠಿಣ ಕ್ರಮ ಆಗಲಿದೆ, ಯಾರೂ ಇದನ್ನ ಸಹಿಸುವುದಿಲ್ಲ. ನಮ್ಮಲ್ಲಿ ನಿಂತು ಪಾಕ್ ಪರ ಘೋಷಣೆ ಕೂಗಿದ್ರೆ ಸಹಿಸಿಕೊಳ್ಳಲ್ಲ ಎಂದು ಎಚ್ಚರಿಕೆ ನೀಡಿದರು. ಬ್ರ್ಯಾಂಡ್ ಬೆಂಗಳೂರು ಬಾಂಬ್ ಬೆಂಗಳೂರು ಮಾಡಬೇಡಿ ಎಂದು ಆರ್.ಅಶೋಕ ಹೇಳಿಕೆ ವಿಚಾರಕ್ಕೆ ಆರ್.ಅಶೋಕ ವಿರುದ್ಧ ಹರಿಹಾಯ್ದ ಎಂ.ಬಿ.ಪಾಟೀಲ್, ಬ್ರ್ಯಾಂಡ್ ಬೆಂಗಳೂರನ್ನ ಬಾಂಬ್ ಬೆಂಗಳೂರು ಎಂದಿದ್ದೆ ತಪ್ಪು ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ