ಈಗಾಗಲೇ ಕುಮಾರಣ್ಣ ಕಾರ್ಯಕರ್ತರೊಂದಿಗೆ ಸಭೆ ಮಾಡಿದ್ದಾರೆ. ಅತ್ತ ಯೋಗೇಶ್ವರ್ ಕೂಡ ಸಭೆ ಮಾಡಿದ್ದಾರೆ. ನಾನೂ ಕಾರ್ಯಕರ್ತರನ್ನ ಹುರಿ ದುಂಬಿಸುವ ಕೆಲಸ ಮಾಡಿದ್ದೇನೆ. ಎರಡು ಮೂರು ತಿಂಗಳಿಂದ ನಾನೂ ಕಾರ್ಯಕರ್ತರ ಜೊತೆ ಸೇರಿ ಚನ್ನಪಟ್ಟಣದಲ್ಲಿ ಕೆಲಸ ಮಾಡಿದ್ದೇನೆ. ಚುನಾವಣೆ ಕೆಲಸ ಕೂಡ ಚನ್ನಪಟ್ಟಣದಲ್ಲಿ ನಿರಂತರವಾಗಿ ನಡೆಯುತ್ತಿದೆ: ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ
ಬಳ್ಳಾರಿ(ಅ.19): ಚನ್ನಪಟ್ಟಣದಲ್ಲಿ ನಮ್ಮ ಕಾರ್ಯಕರ್ತರ ರಕ್ಷಣೆ ಮಾಡಬೇಕಿದೆ. ನಾನು ಎಲ್ಲೂ ಆಕಾಂಕ್ಷಿ ಎಂದು ಹೇಳಿಲ್ಲ. 1994 ರಿಂದ ದೇವೇಗೌಡರಿಂದ ಕುಮಾರಸ್ವಾಮಿವರೆಗೂ ಚನ್ನಪಟ್ಟಣದಲ್ಲಿ ಗೆಲುವು ಸಾಧಿಸಿದ್ದೇವೆ. ನಾನು ಸ್ಪರ್ಧೆ ಮಾಡ್ತೇನೆ ಅಂದ್ರೂ ಒಂದು ರೀತಿ, ಸ್ಪರ್ಧೆ ಮಾಡಲ್ಲ ಅಂದ್ರೂ ಒಂದು ರೀತಿಯಲ್ಲಿ ಚರ್ಚೆಯಾಗ್ತದೆ. ಹೀಗಾಗಿ ಅಭ್ಯರ್ಥಿ ಆಯ್ಕೆ ಬಗ್ಗೆ ಎನ್‌ಡಿಎ ನಾಯಕರು ತೀರ್ಮಾನ ಮಾಡ್ತಾರೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಸಂಡೂರು ಉಪ ಚುನಾವಣೆ ಹಿನ್ನಲೆಯಲ್ಲಿ ಇಂದು(ಶನಿವಾರ) ಸಂಡೂರಿನ ವಂಡರ್ ವ್ಯಾಲ್ಯೂ ರೆಸಾರ್ಟ್ ನಲ್ಲಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯುತ್ತಿದೆ. ಸಭೆಯಲ್ಲಿ ಸಂಡೂರಿನಲ್ಲಿ ಎನ್‌ಡಿಎ ಅಭ್ಯರ್ಥಿ ಹಾಕುವ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.
undefined
ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ರಕ್ಷಣೆ ಮಾಡಬೇಕು, ಹೀಗಾಗಿ ಪರೋಕ್ಷವಾಗಿ ಚನ್ನಪಟ್ಟಣ ಟಿಕೆಟ್ ಜೆಡಿಎಸ್‌ಗೆ ಎನ್ನುತ್ತಲೇ ಬಿಜೆಪಿ ನಾಯಕರಿಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಈಗಾಗಲೇ ಕುಮಾರಣ್ಣ ಕಾರ್ಯಕರ್ತರೊಂದಿಗೆ ಸಭೆ ಮಾಡಿದ್ದಾರೆ. ಅತ್ತ ಯೋಗೇಶ್ವರ್ ಕೂಡ ಸಭೆ ಮಾಡಿದ್ದಾರೆ. ನಾನೂ ಕಾರ್ಯಕರ್ತರನ್ನ ಹುರಿ ದುಂಬಿಸುವ ಕೆಲಸ ಮಾಡಿದ್ದೇನೆ. ಎರಡು ಮೂರು ತಿಂಗಳಿಂದ ನಾನೂ ಕಾರ್ಯಕರ್ತರ ಜೊತೆ ಸೇರಿ ಚನ್ನಪಟ್ಟಣದಲ್ಲಿ ಕೆಲಸ ಮಾಡಿದ್ದೇನೆ. ಚುನಾವಣೆ ಕೆಲಸ ಕೂಡ ಚನ್ನಪಟ್ಟಣದಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಅಗ್ತೇನೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಸಿಎಂ ವಿಚಾರ ಸದ್ಯಕ್ಕೆ ಅಪ್ರಸ್ತುತ. ಸದ್ಯ ಇರೋ ಸರ್ಕಾರ ಮೂರುವರೆ ವರ್ಷ ಇರುತ್ತದೆಯೋ ಇಲ್ಲವೋ ನೋಡೋಣ ಎಂದಷ್ಟೇ ಹೇಳಿದ್ದಾರೆ.
ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಯನ್ನ ಕೇಳಿದ್ದೇನೆ ಯಾವುದೇ ರೀತಿಯಲ್ಲಿ ತಪ್ಪಾಗಿ ಮಾತನಾಡಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.