
ಬೆಂಗಳೂರು, [ಜ.27]: ಮೈತ್ರಿ ಸರ್ಕಾರ ಬಿಟ್ಟು ಬಿಜೆಪಿ ಸೇರಿದ ಶಾಸಕರಿಗೆ ಸಚಿವ ಸ್ಥಾನ ಅನ್ನೋದು ಇನ್ನು ಕೈಗೆಟುಕದ ಮರೀಚಿಕೆಯಾಗಿಯೇ ಇದೆ. ಈ ನಡುವೆ ಮೂಲ ಬಿಜೆಪಿಗರು ಕೂಡಾ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವುದು ಬಿಎಸ್ವೈ ಗೆ ತಲೆನೋವು ತಂದಿದೆ.
ಎಲ್ಲವನ್ನೂ ಸರಿತೂಗಿಸಬೇಕಾದ್ರೆ ಈವರೆಗೆ ಅಧಿಕಾರ ಅನುಭವಿಸಿದ ಹಲವು ಹಿರಿಯರು ಸಚಿವವರು ತಮ್ಮ ಸ್ಥಾನ ತ್ಯಾಗ ಮಾಡಬೇಕೆಂಬ ಕೂಗು ಪ್ರಬಲವಾಗಿ ಕೇಳಿ ಬರುತ್ತಿದೆ. ಹೊರಗಿನಿಂದ ಬಂದವರಿಗೆ ಅವಕಾಶ ನೀಡಬೇಕಾದ್ರೆ ಸ್ಥಾನ ಬಿಟ್ಟು ಕೊಡಿ ಅಂದ್ರೆ ಸಂತೋಷವಾಗಿ ಬಿಟ್ಟು ಕೊಡ್ತೇನೆ ಎಂದು ಭಾನುವಾರ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಹೇಳಿದ್ದರು.
ಹೊಸಬರಿಗಾಗಿ ಮಂತ್ರಿಗಿರಿ ತ್ಯಾಗ ಮಾಡಲು ಸಿದ್ಧರಾದ ಸಚಿವ!
ಆದ್ರೆ, ಇದೀಗ ದಿಢೀರ್ ಯೂಟರ್ನ್ ಹೊಡೆದಿದ್ದಾರೆ. ವಿಧಾನಸೌಧದಲ್ಲಿ ಮಾತಾನಾಡಿದ ಸಚಿವ ಮಾಧುಸ್ವಾಮಿ, ಪತ್ರಕರ್ತರ ಪ್ರಶ್ನೆಯೊಂದಕ್ಕೆ ನಾನು ನಿನ್ನೆ ಉತ್ತರಿಸಿದ್ದೆ. ಪತ್ರಕರ್ತರು ಕೇಳಿದ ಪ್ರಶ್ನೆಯಿಂದ ಹೆಚ್ಚು ಕಿರಿಕಿರಿ ಆಗುತ್ತಿತ್ತು. ಹೀಗಾಗಿ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೆ. ಆದರೆ ನನಗೆ ರಾಜೀನಾಮೆ ನೀಡುವ ಬಗ್ಗೆ ಯೋಚನೆ ಇಲ್ಲ. ಹೈಕಮಾಂಡ್ ಕೂಡ ಅಂತಹ ಪ್ರಸ್ತಾವ ಇಟ್ಟಿಲ್ಲ ಎಂದು ಹೇಳಿ, ಸಚಿವ ಸಂಪುಟ ವಿಸ್ತರಣೆಯೇ ಹೊರತು ಪುನರಚನೆ ಅಲ್ಲಾ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಉಳಿವಿಗಾಗಿ ತ್ಯಾಗಕ್ಕೆ ಸಿದ್ಧ ಎಂದು ಮಾಧುಸ್ವಾಮಿ ಹಾಗಂತ ಹೇಳುದ್ದೇ ತಡ,ಇನ್ನಷ್ಟು ಸಚಿವರೂ ಕೂಡಾ ಸ್ಥಾನ ಬಿಟ್ಟುಕೊಡುವ ಬಗ್ಗೆ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರೆ.
ಸರ್ಕಾರ ಉಳಿದರೆ ತಾನೇ ಸಚಿವ ಸ್ಥಾನದ ಅಸೆ ಇಟ್ಟುಕೊಳ್ಳೋಕೆ ಸಾದ್ಯ, ಸರ್ಕಾರವೇ ಇಲ್ಲವಾದರೆ ಸಚಿವರಾಗಲು ಹೇಗೆ ಸಾದ್ಯ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದ್ರೆ, ಆದರೆ ಮಾಧುಸ್ವಾಮಿ ಮಾತ್ರಾ ದಿನ ಬೆಳಗಾಗೋದ್ರಲ್ಲಿ ವರಸೆ ಬದಲಿಸಿರುವುದು ಭಾರೀ ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.