ದೇವರ ಸಮಾನರಾದ ಮಕ್ಕಳ ಮನಸ್ಸಿಗೆ ವಿಷ ತುಂಬದೇ ಸಂವಿಧಾನ ಪೀಠಿಕೆ ಓದುವಂತೆ ಮಾಡಿದ್ದು ನಮ್ಮ ಸರ್ಕಾರದ ಸಾಧನೆ. ಬಿಜೆಪಿಯವರಿಗೆ ಮಕ್ಕಳಲ್ಲಿ ಜಾತಿ, ಕೋಮುವಾದಿ ವಿಷವನ್ನು ತುಂಬುವ ಕೆಟ್ಟ ಚಾಳಿ. ನಮಗೇ ಗುಣಮಟ್ಟದ ಶಿಕ್ಷಣ ಕೊಡುವ ಚಾಳಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಮೈಸೂರು (ಫೆ.07): ದೇವರ ಸಮಾನರಾದ ಮಕ್ಕಳ ಮನಸ್ಸಿಗೆ ವಿಷ ತುಂಬದೇ ಸಂವಿಧಾನ ಪೀಠಿಕೆ ಓದುವಂತೆ ಮಾಡಿದ್ದು ನಮ್ಮ ಸರ್ಕಾರದ ಸಾಧನೆ. ಬಿಜೆಪಿಯವರಿಗೆ ಮಕ್ಕಳಲ್ಲಿ ಜಾತಿ, ಕೋಮುವಾದಿ ವಿಷವನ್ನು ತುಂಬುವ ಕೆಟ್ಟ ಚಾಳಿ. ನಮಗೇ ಗುಣಮಟ್ಟದ ಶಿಕ್ಷಣ ಕೊಡುವ ಚಾಳಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ನಗರ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಿಜೆಪಿಯವರು ಮೊದಲಿನಿಂದಲೂ ಸಂವಿಧಾನ ವಿರೋಧಿ ನಡವಳಿಕೆಗಳನ್ನು ಪ್ರಚೋದಿಸುತ್ತ ಕಾನೂನು ಉಲ್ಲಂಘನೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ಟೀಕಿಸಿದರು.
ಆದರೆ, ಈ ನೆಲದ ಕಾನೂನು ಎಂದಿಗೂ ಸಾರ್ವಭೌಮ ಅದೇ ಮೆರೆಯಬೇಕು ಎಂಬುದು ಕಾಂಗ್ರೆಸ್ ಸಿದ್ಧಾಂತ. ಡಾ. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ಗೌರವಿಸಿಕೊಂಡು ಹೋದರೆ ಮಾತ್ರ ದೇಶ ಪ್ರಗತಿಯ ಕಡೆಗೆ ಸಾಗುವುದು. ಹೀಗಾಗಿ ರಾಜ್ಯದ ಪ್ರತಿ ಶಾಲೆಗಳಲ್ಲೂ ಸಂವಿಧಾನ ಪೀಠಿಕೆಯನ್ನು ಓದಲೇಬೇಕು ಎಂಬ ಕಡ್ಡಾಯ ನಿಯಮವನ್ನು ಜಾರಿಗೆ ತಂದಿದ್ದೇವೆ ಎಂದರು. ಭಗವದಗೀತೆ, ಕುರಾನ್, ಬೈಬಲ್ ಗಿಂತ ಅಂಬೇಡ್ಕರ್ ಕೊಟ್ಟ ಸಂವಿಧಾನವೇ ಧರ್ಮ. ಇವತ್ತು ರಾಜ್ಯದ 1.20 ಕೋಟಿ ಮಕ್ಕಳು ಪೀಠಿಕೆ ಓದುತ್ತಿದ್ದಾರೆ. ಬಾಯಿ ಪಾಠ ಮಾಡಿ ಪೀಠೀಕೆ ಹೇಳುವುದನ್ನು ಕೇಳುವಾಗ ಹೆಮ್ಮೆ ಅನಿಸುತ್ತದೆ ಎಂದು ಅವರು ತಿಳಿಸಿದರು.
undefined
ಪ್ರತಿಭಟನೆಗೆ ಬರಲು ಬಿಜೆಪಿ ಸಂಸದರಿಗೆ ತಾಕತ್ತಿದೆಯಾ?: ಸಚಿವ ಚಲುವರಾಯಸ್ವಾಮಿ
ಅಧಿಕಾರಕ್ಕೆ ಬಂದ 7 ತಿಂಗಳ ಒಳಗೆ 5 ಗ್ಯಾರಂಟಿಗಳನ್ನು ಜಾರಿ ಮಾಡಿ ರಾಜ್ಯದ ಮತದಾರರ ವಿಶ್ವಾಸವನ್ನು ಉಳಿಸಿಕೊಂಡಿದ್ದೇವೆ. ರಾಜ್ಯದ ಶೇ.99 ಹೆಣ್ಣು ಮಕ್ಕಳು ಗೃಹಲಕ್ಷ್ಮೀ ಹಣ ಪಡೆದಿದ್ದಾರೆ. ಶೇ.99 ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದರು. ಬಿಜೆಪಿ ಸುಳ್ಳಿಗೆ ಬೆಲೆ ಇಲ್ಲ. ಅವರಿಗೆ ಮಾನ ಮರ್ಯದೆಯೂ ಇಲ್ಲ. ಮೋದಿ ಅವರು ಮಕ್ಕಳಿಗೆ ಕೊಡುವ ಪಾಲನ್ನು ಕಡಿತ ಮಾಡಿದ್ದಾರೆ. ಬಿಜೆಪಿಯವರಿಗೆ ಉತ್ತರ ಕೊಡುವುದು ಬೇಡ. ನಮ್ಮ ಸಾಧನೆಯನ್ನು ಮನೆ ಮನೆಗೆ ತಲುಪಿಸಿ ಎಂದು ಅವರು ಕರೆ ನೀಡಿದರು. ಪಕ್ಷ ಸಂಘಟನೆ ಮಾಡುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಪಕ್ಷದ ಜೀವಾಳ ನಮ್ಮ ಕಾರ್ಯಕರ್ತರು. ಅವರ ಕುಂದುಕೊರತೆ ಮತ್ತು ಅಹವಾಲುಗಳನ್ನು ನಾವು ನೋಡಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ ವಿಜಯ್ ಕುಮಾರ್ ಮಾತನಾಡಿ, ಮಧು ಬಂಗಾರಪ್ಪ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕವೇ ಪಠ್ಯಪುಸ್ತಕ ಬದಲಾವಣೆಗೆ ಸಹಿ ಮಾಡಿದರು. ಶಿಕ್ಷಕರ ಕೊರತೆಯನ್ನು ಅರಿತು 20 ಸಾವಿರ ಶಿಕ್ಷಕರ ನೇಮಕಕ್ಕೆ ಮುಂದಾಗಿದ್ದಾರೆ ಎಂದರು. ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಮುಖಂಡರಾದ ಎನ್.ಆರ್. ನಾಗೇಶ್, ಮಾರುತಿ, ಲತಾ ಸಿದಶೆಟ್ಟಿ, ಪುಷ್ಪಲತಾ ಚಿಕ್ಕಣ್ಣ, ಮೋದಮಣಿ, ಶಾಮ ಯೋಗೀಶ್, ಅನಂತು, ಎಂ. ಶಿವಣ್ಣ, ಶಿವಪ್ರಸಾದ್, ಈಶ್ವರ್ ಚಕ್ಕಡಿ, ಗಿರೀಶ್, ಬಸವಣ್ಣ, ನಟರಾಜ್, ಅನಿಲ್ ನಾರಾಯಣ್, ಜೆ.ಜೆ. ಆನಂದ್, ಗುರುಮಲ್ಲೇಶ್, ಸಿದ್ದರಾಜು, ರೇವಣ್ಣ , ಜಮೀರ್, ರವಿ, ಅನಿಲ್ ನಾರಾಯಣ್, ಕಾಂತರಾಜ್ ಮೊದಲಾದವರು ಇದ್ದರು.
ಗೋಹತ್ಯೆ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲ: ಶಾಸಕ ಪ್ರಭು ಚವ್ಹಾಣ್
ಶಿವಮೊಗ್ಗ, ಕಾರವಾರದಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ. ಮಂಗಳೂರು ಗೆಲ್ಲಲು ಪ್ರಯತ್ನ ಮಾಡುತ್ತಿದ್ದೇವೆ. ಮೈಸೂರಿನಲ್ಲೂ ಮಾರಿಹಬ್ಬ ಮಾಡಲು ಕಾರ್ಯಕರ್ತರು ಸಿದ್ಧರಾಗಿದ್ದಾರೆ. ಹಾಗಂತ ನಾವು ಎಡುವುದು ಬೇಡ. ಒಮ್ಮೆ ಎಡವಿದರೆ ಆ ತಪ್ಪು ಸರಿ ಮಾಡಲು 5 ವರ್ಷ ಕಾಯಬೇಕಾಗುತ್ತದೆ.
- ಮಧು ಬಂಗಾರಪ್ಪ, ಶಿಕ್ಷಣ ಸಚಿವರು