ಶೆಟ್ಟರ್‌ ಬಗ್ಗೆ ಅಪಪ್ರಚಾರ ಮಾಡ್ತಿಲ್ಲ, ಮುಖಕ್ಕೆ ಕನ್ನಡಿ ಹಿಡಿದಿರುವೆ: ಹೆಬ್ಬಾಳ್ಕರ್‌

ಜಗದೀಶ್‌ ಶೆಟ್ಟರ್ ಜೀವನದಲ್ಲಿ ಏನು ಮಾಡಿದ್ದಾರೆ? ನಾವು ಬೆಳಗಾವಿಯವರು. ಬೆಳಗಾವಿಯ ಜನ ಅವರನ್ನು ಹೊರಗೆ ಕಳುಹಿಸಲು ಈಗಾಗಲೇ ನಿರ್ಧಾರ ಮಾಡಿಯಾಗಿದೆ ಎಂದು ಗುಡುಗಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ 


ಬೆಳಗಾವಿ(ಏ.25):  ತಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ಹೇಳಿಕೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕಿಡಿಕಾರಿದ್ದಾರೆ. 

ನಾನೇನು ಅವರ ಬಗ್ಗೆ ಅಪಪ್ರಚಾರ ಮಾಡುತ್ತಿಲ್ಲ. ನಾನು ಅವರ ಮುಖಕ್ಕೆ ಕನ್ನಡಿ ತೋರಿಸುತ್ತಿದ್ದೇನೆ ಅಷ್ಟೇ ಎಂದು ತಿರುಗೇಟು ನೀಡಿದರು. ನನ್ನ ಜೀವನದಲ್ಲಿ ಇಂಥದ್ದನ್ನೆಲ್ಲ ನೋಡಿಲ್ಲ ಎಂದು ಶೆಟ್ಟರ್ ಹೇಳಿದ್ದಾರಲ್ವ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು ಜೀವನದಲ್ಲಿ ಏನು ಮಾಡಿದ್ದಾರೆ? ನಾವು ಬೆಳಗಾವಿಯವರು. ಬೆಳಗಾವಿಯ ಜನ ಅವರನ್ನು ಹೊರಗೆ ಕಳುಹಿಸಲು ಈಗಾಗಲೇ ನಿರ್ಧಾರ ಮಾಡಿಯಾಗಿದೆ ಎಂದು ಗುಡುಗಿದರು. 

Latest Videos

ಲೋಕಸಭಾ ಚುನಾವಣೆ 2024: 9 ತಿಂಗಳ ಹಿಂದೆ ಶೆಟ್ಟರ್‌ ದಂಪತಿ ಅಳ್ತಾ ಬಂದಿದ್ರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌

ಸೋಲಿನ ಹತಾಶೆಯಿಂದ ಈ ರೀತಿ ಸುಳ್ಳು ಹೇಳುತ್ತಿದ್ದಾರೆನ್ನುವ ಶೆಟ್ಟರ್ ಮಾತಿಗೆ, ಅದು ಜೂ.4 ರಂದು ಗೊತ್ತಾಗುತ್ತದೆ ಎಂದು ಸಚಿವೆ ಹೇಳಿದರು.

click me!