ಎಚ್. ವಿಶ್ವನಾಥ್ ಯಾವ ಪಕ್ಷ ಎಂದು ಹೇಳಲಿ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದೆಂದು ಪ್ರೆಸ್ ಮೀಟ್ ಕರೆದು ಹೇಳಲಿ ಎಂದು ಸಚಿವರು ಹೇಳಿದರು.
ಶಿವಮೊಗ್ಗ (ಮಾ.21): ಮಹಾ ಪಂಚಾಯತ್ ಹೆಸರಿನಲ್ಲಿ ರೈತರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಈಗ ಹಳಸಿ ಹೋಗಿದೆ. ಯಾವ ವೇದಿಕೆ ಮೂಲಕ ಹೋದರೂ ಜನರು ಬರುವುದಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿಂದು ಮಾತನಾಡಿದ ಸಚಿವ ಕೆ ಎಸ್ ಈಶ್ವರಪ್ಪ ರೈತರ ಹೆಸರಿನಲ್ಲಿ ಕಾಂಗ್ರೆಸ್ ಸಮಾವೇಶ ನಡೆಸಿದೆ. ಈ ಸಮಾವೇಶಕ್ಕೆ ನಿರೀಕ್ಷೆ ಮಾಡಿದಷ್ಟು ಜನ ಬೆಂಬಲ ಸಿಕ್ಕಿಲ್ಲ ಫೆಲ್ಯೂರ್ ಆಗಿದೆ ಎಂದರು.
ಮೂರು ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಶತಸಿದ್ಧ. ಉಪ ಚುನಾವಣೆ ಬಳಿಕ ಸಿಎಂ ಬದಲಾವಣೆ ಕುರಿತು ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತೇವೆ. ಯಡಿಯೂರಪ್ಪ ಬದಲಾವಣೆ ಆಗುತ್ತಾರೋ ಬಿಡ್ತಾರೋ ನನಗಂತೂ ಗೋತ್ತಿಲ್ಲ. ಬಸನ ಗೌಡ ಯತ್ನಾಳ್ ಯಾವ ಮೂಲದಿಂದ ಹೇಳುತ್ತಾರೋ ಎಂದು ಈಶ್ವರಪ್ಪ ಹೇಳಿದರು.
'ಈ ಸುರಸುಂದರಿಗೆ ಮಾರು ಹೋಗದವರಿಲ್ಲ : ಎಷ್ಟೋ ಜನ ಮನೆ-ಮಠ ಕಳ್ಕೊಂಡಿದಾರೆ' .
ಇನ್ನು ಇದೇ ವೇಳೆ ಎಚ್. ವಿಶ್ವನಾಥ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಈಶ್ವರಪ್ಪ ಹಿರಿಯರು ನಾಲ್ಕು ಗೋಡೆಗಳ ಮಧ್ಯೆ ಹೇಳಲಿ ತಿದ್ದಿ ಕೊಳ್ಳುತ್ತೇವೆ. ವಿಶ್ವನಾಥ ರವರು ಮಂತ್ರಿಗಿರಿ ಸಿಕ್ಕಿಲ್ಲ ಎಂದು ಆರೋಪ ಮಾಡೋದು ಬೇಡ. ವಿಶ್ವನಾಥ್ ಪ್ರೆಸ್ ಮೀಟ್ ಕರೆದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದು ಒಳ್ಳೆಯದು ಎಂದು ಹೇಳಲಿ ಎಂದರು.
ಹುಣಸೋಡು ಸ್ಪೋಟ ವಿಚಾರ ಪ್ರಸ್ತಾಪ : ಹುಣಸೋಡು ಸ್ಪೋಟ ಘಟನೆ ಸಿಬಿಐ ತನಿಖೆ ನಡೆಸಲು ಮಾಜಿ ಶಾಸಕ ಪ್ರಸನ್ನ ಕುಮಾರ್ ಒತ್ತಾಯ ಮಾಡಿದ್ದಾರೆ. ಸಿಬಿಐ ತನಿಖೆ ನಡೆಸಲು ನನ್ನದೇನೂ ಆಭ್ಯಂತರವಿಲ್ಲ. ಆದರೆ ಯಾವುದೇ ಒಂದು ಘಟನೆ ಹಿಡಿದು ಹೀಗೆ ಆಗ್ರಹಿಸುವುದು ಸರಿಯಲ್ಲ ಎಂದು ಈಶ್ವರಪ್ಪ ಹೇಳಿದರು.