ಕುಮಾರಸ್ವಾಮಿ ಚನ್ನಪಟ್ಟಣ ಸೋಲಿನಿಂದ ಬೇಸತ್ತಿದ್ದಾರೆ: ಸಚಿವ ಕೃಷ್ಣ ಬೈರೇಗೌಡ

By Kannadaprabha News  |  First Published Jan 9, 2025, 10:33 AM IST

ಚನ್ನಪಟ್ಟಣದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ಮತಗಳಿಗಿಂತ ಕಾಂಗ್ರೆಸ್ ಹೆಚ್ಚು ಮತ ಪಡೆದುಕೊಂಡಿದೆ. ಜೆಡಿಎಸ್- ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡರೂ ಸಹ ಕಳೆದ ಬಾರಿ ಬಿಜೆಪಿ ಪಡೆದುಕೊಂಡಿದ್ದಕ್ಕಿಂತ 12 ಸಾವಿರ ಕಡಿಮೆ ಮತಗಳನ್ನು ಪಡೆದುಕೊಂಡಿದ್ದಾರೆ. ಕುಮಾರಸ್ವಾಮಿಯವರಿಗೆ ಮೂಲಕ ಬಿಜೆಪಿಯವರು ದೋಖಾ ಮಾಡಿದ್ದಾರೆ:  ಸಚಿವ ಕೃಷ್ಣ ಬೈರೇಗೌಡ


ಚಿಕ್ಕಬಳ್ಳಾಪುರ /ಗುಡಿಬಂಡೆ(ಜ.09): ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಎಚ್ .ಡಿ.ಕುಮಾರಸ್ವಾಮಿಯವರು ರಾಜ್ಯದಲ್ಲಿ 60 ಪರ್ಸೆಂಟ್ ಸರ್ಕಾರವಿದೆ ಎಂಬ ಆರೋಪ ಮಾಡಿದ್ದರು. ಈ ಆರೋಪಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕುಮಾರಸ್ವಾಮಿಯವರು ಚನ್ನಪಟ್ಟಣ ಉಪಚುನಾವಣೆಯ ಸೋಲಿನಿಂದ ಬೇಸತ್ತಿದ್ದಾರೆ ಎಂದು ಕೌಂಟರ್‌ ಕೊಟ್ಟರು. 

ಈ ಕುರಿತು ಗುಡಿಬಂಡೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ಮತಗಳಿಗಿಂತ ಕಾಂಗ್ರೆಸ್ ಹೆಚ್ಚು ಮತ ಪಡೆದುಕೊಂಡಿದೆ. ಜೆಡಿಎಸ್- ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡರೂ ಸಹ ಕಳೆದ ಬಾರಿ ಬಿಜೆಪಿ ಪಡೆದುಕೊಂಡಿದ್ದಕ್ಕಿಂತ 12 ಸಾವಿರ ಕಡಿಮೆ ಮತಗಳನ್ನು ಪಡೆದುಕೊಂಡಿದ್ದಾರೆ. ಕುಮಾರಸ್ವಾಮಿಯವರಿಗೆ ಮೂಲಕ ಬಿಜೆಪಿಯವರು ದೋಖಾ ಮಾಡಿದ್ದಾರೆ ಎಂದರು. 

Tap to resize

Latest Videos

ಬಿ.ವೈ.ವಿಜಯೇಂದ್ರ ವಿರುದ್ಧ ಸಿಬಿಐ ತನಿಖೆಯಾಗಲಿ: ಸಚಿವ ಕೃಷ್ಣ ಬೈರೇಗೌಡ

ಸಂಸತ್ ಚುನಾವಣೆಯಲ್ಲಿ ಜೆಡಿಎಸ್ ನಿಂದ ಬಿಜೆಪಿಯವರು ಏನೆಲ್ಲಾ ಮತಗಳನ್ನು ಹಾಕಿಸಿ ಕೊಳ್ಳಬೇಕೋ ಹಾಕಿಸಿಕೊಂಡು ಗೆದ್ದರು. ಆದರೆ ಉಪಚುನಾವಣೆಯಲ್ಲಿ ಸ್ವತಃ ಕುಮಾರಸ್ವಾಮಿಯವರ ಮಗ ನಿಂತಾಗ. ಈ ಹಿಂದೆ ದಳ ಹಾಗೂ ಬಿಜೆಪಿ ಎದುರಾಳಿಯಾಗಿ ಸ್ಪರ್ಧಿಸಿದಾಗ ದಳಕ್ಕೆ ಎಷ್ಟು ಮತಗಳು ಬಂದಿದ್ದವೋ, ಹಿಂದಿನ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೂ ಅದಕ್ಕಿಂತ 12 ಸಾವಿರ ಮತ ಕಡಿಮೆಯಾಗಿದೆ. ಅಂದರೆ ಬಿಜೆಪಿಯ ಮತಗಳು ಎಲ್ಲಿ ಹೋದವು? ಇದರಿಂದ ಬಿಜೆಪಿಯವರ ಮೇಲೆ ಆರೋಪ ಮಾಡಲು ಆಗದೇ ಬೇರೆಯವರ ಮೇಲೆ ಹಿಟ್ ಆ್ಯಂಡ್ ರನ್ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಕೈಯಲ್ಲಿಯೇ ಇದೆಯಲ್ಲ ಇಡಿ, ಸಿಬಿಐ. ಅವರನ್ನು ಭೂ ಬಿಟ್ಟು ಏನೆಲ್ಲಾ ಮಾಡುತ್ತಾರೋ ಮಾಡಲಿ, ಎಲ್ಲವನ್ನೂ ನಾವು ಎದುರಿಸುತ್ತೇವೆ ಎಂದರು. 

ಡಿನ್ನರ್‌ ಪಾಲಿಟಿಕ್ಸ್ ಬಗ್ಗೆ ಮಾತನಾಡಿ, ಎಲ್ಲರಿಗೂ ಅಧಿಕಾರದ ಮೇಲೆ ಆಸೆಯಿರುತ್ತದೆ. ಡಿನ್ನರ್‌ಗಳು ಅವರವರ ವೈಯಕ್ತಿಕ ವಿಚಾರವಾಗಿದೆ. ಸಾರ್ವಜನಿಕ ಜೀವನದಲ್ಲಿದ್ದಾಗ ನಾವ್ಯಾರೂ ಸನ್ಯಾಸಿಗಳಲ್ಲ. ಒಂದು ಅಧಿಕಾರ ಸಿಕ್ಕಾಗ ಮತ್ತೊ ೦ದು ಅಧಿಕಾರದ ಮೇಲೆ ಆಸೆಯಾಗುವುದು ಸ್ವಾಭಾವಿಕ, ರಾಜಕೀಯದಲ್ಲಿ ಇದೆಲ್ಲ ನಿರಂತರ ನಡೆಯುವಂತಹದು. ಆದರೆ ಅದನ್ನೆಲ್ಲವನ್ನೂ ಬಿಟ್ಟು ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದು ಸೂಕ್ತ ಎಂದರು.

ಜಮೀನು ದಾಖಲೆ ರಕ್ಷಣೆಗೆ ಭೂ ಸುರಕ್ಷಾ ಯೋಜನೆ ಸಹಕಾರಿ

ಗುಡಿಬಂಡೆ: ಇಂದಿಗೂ ಅನೇಕ ರೈತರಿಗೆ ತಮ್ಮ ಜಮೀನುಗಳ ದಾಖಲೆಗಳು ಸರಿಯಾಗಿ ಸಿಗದೇ ಪರದಾಡುವಂತಾಗಿದೆ. ಈ ಕಾರಣದಿಂದ ಭೂ ಸುರಕ್ಷಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯಾದ್ಯಂತ ಭೂ ಸುರಕ್ಷಾ ಯೋಜನೆಯಡಿ ರೈತರ ಜಮೀನುಗಳಿಗೆ ಸಂಬಂಧಿಸಿದ ದಾಖಲೆ ಗಣೀಕರಣಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಂದಾಯ ಇಲಾಖೆ ಹಾಗೂ ಸರ್ವೇ ಇಲಾಖೆಯಲ್ಲಿ ಇರುವ ಹಳೆಯ ದಾಖಲೆಗಳನ್ನು ಗಣಕೀಕರಣಗೊಳಿಸುವುದು ಹಾಗೂ ಈ ದಾಖಲೆಗಳನ್ನು ನೇರವಾಗಿ ರೈತರೇ ಮನೆಯಲ್ಲಿಯೇ ಪಹಣಿಯ ಮಾದರಿಯಲ್ಲಿಯೇ ದಾಖಲೆಗಳನ್ನು ಪಡೆದುಕೊಳ್ಳುವ ಕಾರ್ಯಕ್ರಮವೇ ಭೂ ಸುರಕ್ಷಾ ಯೋಜನೆಯಾಗಿದೆ ಎಂದರು.

ಈಗಾಗಲೇ ಈ ಕಾರ್ಯಕ್ರಮವನ್ನು ಕಳೆದ ಮಾರ್ಚ್ 1, 2024 ರಂದೇ ರಾಜ್ಯಾದ್ಯಂತ ಆರಂಭಿಸಲಾಗಿತ್ತು. ಮೊದಲ ಹಂತದಲ್ಲಿ ಪೈಲೆಟ್ ಕಾರ್ಯಕ್ರಮವಾಗಿ ರಾಜ್ಯದ 31 ತಾಲೂಕುಗಳನ್ನು ಆಯ್ಕೆ ಮಾಡಲಾಗಿತ್ತು. ಕಳೆದ 8 ತಿಂಗಳಲ್ಲಿ ಈ ಕಾರ್ಯ ನಡೆದಿದೆ. ಉಳಿದ 209 ತಾಲೂಕುಗಳಿಗೆ ಇಂದಿನಿಂದ ಭೂ ಸುರಕ್ಷಾ ಯೋಜನೆ ಅನುಷ್ಠಾನಗೊಳ್ಳಲಿದೆ. ಸುಮಾರು ವರ್ಷಗಳ ದಾಖಲೆಗಳು ನಾಶವಾಗದಂತೆ 200 ವರ್ಷಗಳ ಕಾಲ ಸಂರಕ್ಷಣೆ ಮಾಡುವ ಉದ್ದೇಶದಿಂದ ಈ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಇದೀಗ 31 ತಾಲೂಕುಗಳಲ್ಲಿ 14,870 ಫೈಲ್ ಸ್ಕ್ಯಾನ್ ಮಾಡಲಾಗಿದ್ದು, 7 ಕೋಟಿ 95 ಲಕ್ಷ ಪೇಜ್ ಸ್ಕ್ಯಾನ್ ಮಾಡಲಾಗಿದೆ. ಉಳಿತ ಎಲ್ಲಾ ತಾಲೂಕುಗಳಲ್ಲಿ ಈ ಕಾರ್ಯ ನಡೆದರೆ 150 ಕೋಟಿ ಪೇಜ್ ಸ್ಕ್ಯಾನ್ ಮಾಡಿದಂತಾಗುತ್ತದೆ ಎಂದರು.

ಇನ್ನೂ ಈ ಕ್ಷೇತ್ರದ ಶಾಸಕರು ಕಂದಾಯ ಇಲಾಖೆಯ ನಕಲಿ ದಾಖಲೆಗಳ ಸೃಷ್ಟಿಯ ಬಗ್ಗೆ ಸದನದಲ್ಲಿಯೇ ಪ್ರಶ್ನೆ ಮಾಡಿದ್ದರು. ನಕಲಿ ದಾಖಲೆಗಳು ಸೃಷ್ಟಿಸಿ ಜಮೀನು ಕಬಳಿಸಿದರೆ ಅಗತ್ಯ ಕ್ರಮ ತೆಗೆದುಕೊಂಡು ಶಿಕ್ಷೆ ಕೊಡಿಸುತ್ತೇನೆ ಎಂದು ಹೇಳಿದ್ದೆ. ಸದ್ಯ ಭೂ ಸುರಕ್ಷಾ ಯೋಜನೆ ಪೂರ್ಣಗೊಂಡರೆ ಯಾರೂ ನಕಲಿ ದಾಖಲೆ ಸೃಷ್ಟಿಸಲು ಆಗಲ್ಲ. ಈ ಮೂಲಕ ಜಮೀನು ಮಾಲೀಕತ್ವಕ್ಕೆ ನಮ್ಮ ಸರ್ಕಾರ ಕೊಡುತ್ತಿರುವ ಗ್ಯಾರಂಟಿಯಾಗಿದೆ. ನಮ್ಮ ಸರ್ಕಾರದಿಂದ ಪಂಚ ಗ್ಯಾರಂಟಿಗಳನ್ನು ಈಗಾಗಲೇ ಕೊಟ್ಟಿದ್ದು, ಇದೀಗ ಜಮೀನು ಮಾಲೀಕತ್ವದ ಗ್ಯಾರಂಟಿ ಕೊಡುತ್ತಿದ್ದೇವೆ ಎಂದರು.

ಇನ್ನೂ ಕಂದಾಯ ಇಲಾಖೆಯ ವತಿಯಿಂದ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಜೋಡಿ ಗ್ರಾಮಗಳಲ್ಲಿ ರೈತರಿಗೆ ಪಹಣಿ ಸಿಗದೇ ಪರದಾಡುವಂತಾಗಿತ್ತು. ಈ ಬಗ್ಗೆ ಕ್ರಮ ತೆಗೆದುಕೊಂಡು ಇತ್ತೀಚೆಗಷ್ಟೇ ಜೋಡಿ ಗ್ರಾಮಗಳ ರೈತರಿಗೆ ಪಹಣಿ ನೀಡಲಾಗಿದೆ. ಜೊತೆಗೆ ಸುಮಾರು ವರ್ಷಗಳ ಹಿಂದೆ ದರಖಾಸ್ತು ಸಮಿತಿಯಲ್ಲಿ ಮಂಜೂರಾದ ಸಾವಿರಾರು ಎಕರೆ ಜಮೀನು ಇನ್ನೂ ದುರಸ್ತಿಯಾಗಿಲ್ಲ ಎಂದು ಹೇಳಿದರು.
ದುರಸ್ತಿ ಮಾಡಲು ಸಾವಿರಾರು ರು. ಖರ್ಚಾಗುತ್ತದೆ ಎಂದು ಹೇಳಲಾಗಿತ್ತು. ಇದೀಗ ಅದನ್ನೂ ಸಹ ಕಂದಾಯ ಇಲಾಖೆಯಿಂದಲೇ ಮಾಡುತ್ತೇವೆ ಎಂದರು.

ಬಿವೈವಿಯಿಂದ 150 ಕೋಟಿ ಆಮಿಷ: ಸಿಬಿಐಗೆ ಜವಾಬ್ದಾರಿ ಇದ್ದರೆ ತನಿಖೆ ನಡೆಸಲಿ, ಕೃಷ್ಣಬೈರೇಗೌಡ

ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಮಾತನಾಡಿ, ಕೃಷ್ಣಬೈರೇಗೌಡ ರೈತ ಪರ ಕೆಲಸ ಮಾಡಿದ್ದಾರೆ. ಜೋಡಿ ಗ್ರಾಮಗಳ ರೈತರಿಗೆ ಪಹಣಿ ಸಿಗದ ಸಮಸ್ಯೆಯ ಬಗ್ಗೆ ಸಚಿವರಿಗೆ ತಿಳಿಸಲಾಗಿತ್ತು. ಅದಕ್ಕೆ ಸ್ಪಂದಿಸಿ ಸಮಸ್ಯೆ ಬಗೆಹರಿಸಿದ್ದಾರೆ. ಭೂ ಸುರಕ್ಷಾ ಯೋಜನೆ ಜಾರಿ ಮಾಡಿದ್ದು, ಈ ಮೂಲಕ ರೈತರಿಗೆ ಸಹಕಾರಿಯಾಗಲಿದೆ. ಅಮೃತ್ -2 ಯೋಜನೆಯಡಿ ಅಮಾನಿಬೈರಸಾಗರ ಕೆರೆಯ ಅಭಿವೃದ್ಧಿಗೆ ₹18 ಕೋಟಿ ಬಿಡುಗಡೆಯಾಗಿ ಟೆಂಡರ್ ಆಗಿದ್ದು, ಈ ಕಾರ್ಯಕ್ರಮಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುತ್ತದೆ. ಈ ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗಾಗಿ 600 ಎಕರೆ ಜಮೀನು ಭೂ ಪರಿವರ್ತನೆ ಹಾಗೂ ರೈತರಿಗೆ ಪರಿಹಾರ ನೀಡುವ ಸಭೆ ನಡೆದಿದೆ ಎಂದರು. ಶಾಸಕ ಸುಬ್ಬಾರೆಡ್ಡಿ ಮಾತನಾಡಿದರು.

ಕಂದಾಯ ಆಯುಕ್ತ ಸುನಿಲ್ ಕುಮಾರ್, ಡೀಸಿ ಡಾ.ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್ ನಿಟ್ಟಾಲಿ, ಎಸ್ಪಿ ಕುಶಾಲ್ ಚೌಕ್ಸೆ, ಎಡಿಸಿ ಭಾಸ್ಕರ್, ಎಸಿ ಅಶ್ವಿನ್ , ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾಪಂ ಇಒ ನಾಗಮಣಿ ಇದ್ದರು.

click me!