
ವಿಜಯಪುರ(ನ.30): ಶಾಸಕ ಬಿ.ಆರ್.ಪಾಟೀಲರ ಬಳಿ ದಾಖಲೆಗಳಿದ್ದರೆ ಅವನ್ನು ಮುಖ್ಯಮಂತ್ರಿಗೆ ಕೊಡಲಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಬುಧವಾರ ಇಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಆರ್.ಪಾಟೀಲ ಅವರ ಬಳಿ ದಾಖಲೆ ಇವೆ ಎನ್ನುತ್ತಾರೆ. ಇದ್ದರೆ ಸಂಬಂಧಿಸಿದವರಿಗೆ ಕೊಡಲಿ. ನನ್ನ ಬಳಿಯೂ ದಾಖಲೆಗಳಿವೆ ಎಂದು ಮಾಧ್ಯಮದ ಮುಂದೆ ತೋರಿಸಿ ಬಿ.ಆರ್.ಪಾಟೀಲ ಹೇಳಿಕೆಗೆ ತಿರುಗೇಟು ನೀಡಿದರು.
ಸಚಿವರ ವಿರುದ್ಧ ಮತ್ತೆ ಶಾಸಕ ಲೆಟರ್‌ಬಾಂಬ್: ಸಿಎಂಗೆ ಕೈ ಶಾಸಕ ಬಿ.ಆರ್.ಪಾಟೀಲ್ ಪತ್ರ
ಸಿಎಂ ಕರೆಸಿ ಮಾತಾಡಲಿ:
ಶಾಸಕ ಯಶವಂತರಾಯಗೌಡ ಪಾಟೀಲರು ಕೂಡ ಈ ವಿಷಯಕ್ಕೆ ಸಂಬಂಧಿಸಿ ಮಾತನಾಡಿ, ನಾನು ಬಿ.ಆರ್.ಪಾಟೀಲರನ್ನು ಭೇಟಿಯಾಗಿಲ್ಲ. ಪತ್ರ ಮತ್ತು ಅವರ ರಾಜೀನಾಮೆ ವಿಷಯ ನನಗೆ ಗೊತ್ತಿಲ್ಲ. ನಾನು ಶಾಸಕಾಂಗ ಸಭೆಯಲ್ಲಿ ಅವರಿಗೆ ಬೆಂಬಲಿಸಿದ್ದೆ. ಅವರೊಬ್ಬ ಹಿರಿಯ ನಾಯಕ. ಅಂದು ಅವರು ಮಾತನಾಡಿದ್ದ ವಿಷಯಕ್ಕೆ ನನ್ನದೂ ಸೇರಿ ಅನೇಕರ ಬೆಂಬಲವಿದೆ. ಮುಖ್ಯಮಂತ್ರಿಗಳು ಅವರನ್ನು ಕರೆಸಿ ಮಾತನಾಡಬಹುದು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.