ಸಿದ್ದರಾಮೋತ್ಸವದಿಂದ ರಾಜಕೀಯ ತೀರ್ಮಾನ ಆಗಲ್ಲ: ಸಚಿವ ಕೋಟ

By Kannadaprabha NewsFirst Published Aug 7, 2022, 4:00 AM IST
Highlights

ಬಿಜೆಪಿ ಅನೇಕ ಹೋರಾಟ ಮಾಡಿಕೊಂಡು ಬಂದ ಪಕ್ಷ. ನಮ್ಮ ಸಂಘಟನೆಗೂ ಸಿದ್ದರಾಮಯ್ಯ ಸಮಾವೇಶಕ್ಕೂ ಸಂಬಂಧವೇ ಇಲ್ಲ: ಸಚಿವ ಕೋಟ

ಹಾವೇರಿ(ಆ.07):  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು 75 ವರ್ಷ ಆಗಿದ್ದಕ್ಕೆ ಸಿದ್ದರಾಮೋತ್ಸವ ಆಚರಿಸಿಕೊಂಡಿದ್ದಾರೆ. ಆ ಉತ್ಸವಕ್ಕೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ, 2023ರ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಯಡಿಯೂರಪ್ಪನವರ ನಾಯಕತ್ವ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ, ಸಂಘಟನಾತ್ಮಕ ಹೋರಾಟ, ಸೈದ್ಧಾಂತಿಕ ಹೋರಾಟದ ಮೂಲಕ ಅಧಿಕಾರಕ್ಕೆ ಬರುತ್ತೇವೆ ಎಂದರು. ಸಿದ್ದರಾಮೋತ್ಸವ ಬಿಜೆಪಿಗೆ ಎಚ್ಚರಿಕೆ ಗಂಟೆ ಆಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅನೇಕ ಹೋರಾಟ ಮಾಡಿಕೊಂಡು ಬಂದ ಪಕ್ಷ. ನಮ್ಮ ಸಂಘಟನೆಗೂ ಸಿದ್ದರಾಮಯ್ಯ ಸಮಾವೇಶಕ್ಕೂ ಸಂಬಂಧವೇ ಇಲ್ಲ. ಒಂದು ಸಮಾವೇಶದಿಂದ ರಾಜಕೀಯ ತೀರ್ಮಾನ ಆಗಲ್ಲ. ಕಾಲಕಾಲಕ್ಕೆ ನಾವೂ ಸಮಾವೇಶ ಮಾಡಿದ್ದೇವೆ. ಸಿದ್ದರಾಮಯ್ಯನವರು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಬಿಜೆಪಿ ಸಮಾವೇಶ ಮಾಡುತ್ತಿಲ್ಲ, ಸಿದ್ದರಾಮಯ್ಯನವರ ಖಾಸಗಿ ಉತ್ಸವಕ್ಕೂ ರಾಜಕೀಯ ಬದಲಾವಣೆಗೂ ಸಂಬಂಧವಿಲ್ಲ ಎಂದರು.

ಕಾಂಗ್ರೆಸ್‌ನಲ್ಲಿನ ಆಂತರಿಕ ಕಿತ್ತಾಟ ಇನ್ನೂ ದೊಡ್ಡ ಮಟ್ಟಕ್ಕೆ ಹೋಗಲಿದೆ: ಶೆಟ್ಟರ್‌

ಮುಖ್ಯಮಂತ್ರಿ ಸೇರಿ ಬಿಜೆಪಿ ಮುಖಂಡರಿಗೆ ಅಮಿತ್‌ ಶಾ ತರಾಟೆಗೆ ತೆಗೆದುಕೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪೂಜಾರಿ, ಅಮಿತ್‌ ಶಾ ನಮ್ಮ ಹಿರಿಯರು, ನಮ್ಮನ್ನು ಕರೆದು ರಾಜಕೀಯ ಮಾರ್ಗದರ್ಶನ ಮಾಡೋದು ರೂಢಿ. ಅಮಿತ್‌ ಶಾ ಅವರು ನಮ್ಮ ಪರಮೋಚ್ಛ ನಾಯಕರು ನಮಗೆ ಸಲಹೆ, ಸೂಚನೆ ಕೊಡೋ ಜವಾಬ್ದಾರಿ ಸ್ಥಾನದಲ್ಲಿ ಇರುವುದರಿಂದ ನಮಗೆ ಅವರು ತಿಳಿ ಹೇಳಿದ್ದಾರೆ ಎಂದರು.

ಯಡಿಯೂರಪ್ಪನವರು ಪ್ರಶ್ನಾತೀತ ನಾಯಕರಲ್ಲಿ ಒಬ್ಬರು. ರಾಜ್ಯದಲ್ಲಿ ಪಕ್ಷ ಕಟ್ಟಿದವರು ಈಗಲೂ ಮುನ್ನಡೆಸುವರು. ಯಾರು ಯಾರಿಗೂ ಉತ್ತರಾಧಿಕಾರಿಯಲ್ಲ, ವಿಜಯೇಂದ್ರ ಬಿಜೆಪಿ ಉಪಾಧ್ಯಕ್ಷರು. ವಿಜಯೇಂದ್ರ ಸೇರಿ ರಾಜ್ಯದ ಎಲ್ಲ ಬಿಜೆಪಿ ಕಾರ್ಯಕರ್ಯರು ಯಡಿಯೂರಪ್ಪನವರಿಗೆ ಕಾರ್ಯಕರ್ತರೇ. ಅವರು ವಿಜಯೇಂದ್ರ ಸೇರಿ ಎಲ್ಲಾ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡುತ್ತಾರೆ. ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ ಎಂದರು.
 

click me!