ಬಿಜೆಪಿಯಲ್ಲಿ ದೇಶ ಕಟ್ಟುವ ಜವಾಬ್ದಾರಿ ಹುದ್ದೆಗಳು: ಸಚಿವ ಕೋಟಾ

Published : Jul 06, 2022, 09:18 PM IST
ಬಿಜೆಪಿಯಲ್ಲಿ ದೇಶ ಕಟ್ಟುವ ಜವಾಬ್ದಾರಿ ಹುದ್ದೆಗಳು: ಸಚಿವ ಕೋಟಾ

ಸಾರಾಂಶ

*   ಇಂದು ದೇಶ ಬದಲಾಗಿದೆ, ಜಗತ್ತು ಭಾರತದತ್ತ ನೋಡುತ್ತಿದೆ *  ದೇಶ ಕಟ್ಟುವ ಅನೇಕರು ಉತ್ಸುಕರು ಬಿಜೆಪಿಯೆಡೆ ಧಾವಿಸುತ್ತಿದ್ದಾರೆ *  ಪ್ರತಿ ಹುದ್ದೆಗಳೂ ಮಹತ್ತರ ಜವಾಬ್ದಾರಿಯ ಸ್ಥಾನಗಳಾಗಿವೆ   

ಶಿರಸಿ(ಜು.06): ಬಿಜೆಪಿ ಪಕ್ಷದ ಸ್ಥಾನಗಳು ಎಂದಿಗೂ ಅಲಂಕಾರಕ್ಕಲ್ಲ.ದೇಶ ಕಟ್ಟುವ ಜವಾಬ್ದಾರಿ ಹುದ್ದೆಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿದ ಬಳಿಕ ಮಾತನಾಡಿದರು. ಇಂದು ದೇಶ ಬದಲಾಗಿದೆ, ಜಗತ್ತು ಭಾರತದತ್ತ ನೋಡುತ್ತಿದೆ. ದೇಶ ಕಟ್ಟುವ ಅನೇಕರು ಉತ್ಸುಕರು ಬಿಜೆಪಿಯೆಡೆ ಧಾವಿಸುತ್ತಿದ್ದಾರೆ.ಹೀಗಾಗಿ, ಇಲ್ಲಿಯ ಪ್ರತಿ ಹುದ್ದೆಗಳೂ ಮಹತ್ತರ ಜವಾಬ್ದಾರಿಯ ಸ್ಥಾನಗಳಾಗಿವೆ ಎಂದರು.

ವಿವಿಧ ಪಕ್ಷಗಳಲ್ಲಿ ವೈಚಾರಿಕವಾಗಿ ಭಿನ್ನರಾಗಿದ್ದ ಅನೇಕ ಗೆಳೆಯರು ಮೋದಿಯವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯ ಮುಖ್ಯ ಉದ್ದೇಶ ಸಮರ್ಥ ಭಾರತ ನಿರ್ಮಾಣ. ವ್ಯಕ್ತಿಗಿಂತ ದೇಶದ ಹಿತ ಮುಖ್ಯ ಎನ್ನುವ ನಿರ್ಧಾರದೊಂದಿಗೆ ಹಿಂದಿನವರು ಜನ ಸಂಘ ರಚಿಸಿದ್ದಾರೆ. ಬಿಜೆಪಿ ಜನಸಂಘದೊಂದಿಗೆ ಸೇರಿ ನಡೆದು ಬಂದ ದಾರಿ ದೇಶದ ಚಿತ್ರಣ ಬದಲಿಸಿದೆ. ಬಿಜೆಪಿ ದೊಡ್ಡ ಶಕ್ತಿಯಾಗಿ ಈಗ ಬದಲಾಗಿದೆ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ: ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ

ಹಲವು ವಿಷಯಗಳ ಬಗ್ಗೆ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿದೆ. ಆದರೆ, ಹೋರಾಟ ಏನಕ್ಕಾಗಿ ಮಾಡಬೇಕು ಎಂಬುದನ್ನು ತಿಳಿದುಕೊಂಡು ಮಾಡಲಿ.ದೇಶದ ಬದಲಾವಣೆಯ ದಾರಿಯಲ್ಲಿರುವ ಕೇಂದ್ರ ಸರ್ಕಾರ ತ್ರಿವಳಿ ತಲಾಕ್‌ ನಿಷೇಧದಿಂದ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಕೊಡಿಸಿದಂತಾಗಿದೆ. ಕಾಶ್ಮೀರದಲ್ಲಿ 370 ಕಾಯ್ದೆ ರದ್ದುಗೊಳಿಸುವ ಮೂಲಕ ಸ್ವಾಯತ್ತತೆ ಒದಗಿಸಿದೆ. ಕಿಸಾನ್‌ ಸಮ್ಮಾನ ಯೋಜನೆಯಲ್ಲಿ ಅರ್ಜಿ ಕೊಡದೇ ರೈತರಿಗೆ .10 ಸಾವಿರ ನೀಡಲಾಗುತ್ತಿದೆ. ಈ ಹಿಂದೆ ಯಾವ ಪಕ್ಷವೂ ಮಾಡಿರದ ಪ್ರಗತಿ ಬಿಜೆಪಿಯಿಂದ ಆಗುತ್ತಿದೆ ಎಂದರು.

ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ಕಾಂಗ್ರೆಸ್‌ 50 ವರ್ಷಗಳ ಕಾಲ ಆಡಳಿತ ನಡೆಸಿದೆ.ಬಿಜೆಪಿಯ ಶಕ್ತಿ ದಿನ ದಿನವೂ ಜಾಸ್ತಿ ಆಗುತ್ತಿದೆ ಎಂದರು.

ಪಕ್ಷದ ಪ್ರಮುಖರಾದ ಎನ್‌.ಎಸ್‌.ಹೆಗಡೆ, ಆರ್‌.ಡಿ.ಹೆಗಡೆ, ಗೋವಿಂದ ನಾಯ್ಕ, ಚಂದ್ರು ಎಸಳೆ,ಉಷಾ ಹೆಗಡೆ, ಶೋಭಾ ನಾಯ್ಕ,ಗುರು ಶಾನಭಾಗ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಂದನ ಸಾಗರ ಇತರರಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ