ಬಲವಂತದಿಂದ ಮತಾಂತರ ಮಾಡೋದು ತಪ್ಪು, ಹಳೇ ಕಾಯ್ದೆಯಲ್ಲಿಯೇ ಇದೆ: ಜಾರ್ಜ್

By Suvarna News  |  First Published Jun 16, 2023, 7:55 PM IST

ಕಾಂಗ್ರೆಸ್ಸಿನ ಅಭಿವೃದ್ಧಿ ಹೆಜ್ಜೆಗೆ ವಿರೋಧವೇ ಬಿಜೆಪಿಯವರ ಕೆಲಸವೇ ಅವರ ಕೆಲಸ. ಮತಾಂತರ ನಿಷೇಧ ಕಾಯ್ದೆ ಮೊದಲೇ ಇತ್ತು. ಬಲವಂತ, ಆಶ್ವಾಸನೆ ಕೊಟ್ಟು ಮತಾಂತರ ಮಾಡೋದು ತಪ್ಪು, ಹಳೇ ಕಾಯ್ದೆಯೇ ಇದೆ ಎಂದು ಕೆ.ಜೆ ಜಾರ್ಜ್  ಹೇಳಿದ್ದಾರೆ. 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜೂ.16): ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಆಡಳಿತದಲ್ಲಿ ಸುಧಾರಣೆ ತಂದು ಅನುಷ್ಠಾನಕ್ಕೆ ತರಲು ಪ್ರತಿ ತಾಲ್ಲೂಕಿನಲ್ಲಿ ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸಿ, ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ (KJ George ) ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾದ ನಂತರ ಪ್ರಪ್ರಥಮವಾಗಿ ಇಂದು ಜಿಲ್ಲೆಗೆ ಆಗಮಿಸಿದ್ದ ಸಚಿವರು ಖಾಸಗಿ ಹೋಟೆಲ್ ವೊಂದರಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಭೇಟಿ ಮಾಡಿ ಮಾತನಾಡಿದರು.

Tap to resize

Latest Videos

undefined

ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಜನಪ್ರತಿನಿಧಿಗಳಿಂದ ಮಾಹಿತಿ ಪಡೆದು ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದೊಂದಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ನಗರದ ಕುಡಿಯುವ ನೀರಿನ ಸಮಸ್ಯೆ ಯುಜಿಡಿ ಕಾಮಗಾರಿಯ ವಿಳಂಭ ಹಾಗೂ ನಿವೇಶನ ಸಮಸ್ಯೆ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಹಿಂದೆ ನಡೆದಿರುವ ಕಾಮಗಾರಿಗಳ ಬಗ್ಗೆ ಪ್ರಗತಿ ಪರಿಶೀಲಿಸಿ ಸಭೆ ನಡೆಸಿ, ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಇಸ್ಲಾಂಗೆ ಮತಾಂತರಗೊಳಿಸಿ ಮದುವೆ, ಮಗಳನ್ನು ರಕ್ಷಿಸಲು ಹೈಕೋರ್ಟ್ ಮೊರೆ ಹೋದ ತಂದೆ!

ಬಿಜೆಪಿಯವರ ಕೆಲಸವೇ ವಿರೋಧ ಮಾಡೋದು : 
ಮತಾಂತರ ನಿಷೇಧ ಕಾಯ್ದೆ (anti conversion act amendment) ಹಿಂಪಡೆದಿದ್ದಕ್ಕೆ ಬಿಜೆಪಿಯವರ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರ ಕೆಲಸವೇ ವಿರೋಧ ಮಾಡೋದು. ಕಾಂಗ್ರೆಸ್ಸಿನ ಅಭಿವೃದ್ಧಿ ಹೆಜ್ಜೆಗೆ ವಿರೋಧವೇ ಅವರ ಕೆಲಸ. ಅವರು ಪ್ರತಿ ಪಕ್ಷ ಅಲ್ಲ, ವಿರೋಧ ಪಕ್ಷ ಎಂದು ಲೇವಡಿ ಮಾಡಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಮೊದಲೇ ಇತ್ತು. ಬಲವಂತ ಹಾಗೂ ಆಶ್ವಾಸನೆ ಕೊಟ್ಟು ಮತಾಂತರ ಮಾಡೋದು ತಪ್ಪು. ಅದು ಹಳೇ ಕಾಯ್ದೆಯೇ ಇದೆ. ಅದನ್ನ ನಾವು ಒಪ್ಪುತ್ತೇವೆ.

ಆದರೆ, ಅವರು ಕೆಲವು ತಪ್ಪು ಮಾಡಿದ್ದಾರೆ. ಆರೋಪ ಮಾಡಿದವರು ಪ್ರೂವ್ ಮಾಡಬೇಕು. ಆರೋಪ ಮಾಡುವವರು ಸಾಕ್ಷಿ ಕೊಟ್ಟು ಹೇಳಬೇಕು. ನನ್ನ ಮೇಲೆ ಆರೋಪ ಮಾಡಿದರೆ, ನಾನೇ ಪ್ರೂವ್ ಮಾಡಬೇಕಾ. ಇದು ಯಾವ ಕಾನೂನಿನಲ್ಲಿ ಇದೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯವರು ಈ ರೀತಿ ತುಂಬಾ ತಪ್ಪು ಮಾಡಿದ್ದಾರೆ. ಅದನ್ನ ನಾವು ಸರಿ ಮಾಡುತ್ತೇವೆ. ಇಷ್ಟು ದಿನ ಅವರೇ ಇದ್ದರಲ್ಲಾ ಹೊಸದಾಗಿ ಏನು ಕಂಡು ಹಿಡಿದಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ನಮ್ಮ ಜವಾಬ್ದಾರಿ ಇದೆ. ಎಲ್ಲರಿಗೂ ಸರಿ ಆಗುವ ಕಾಯ್ದೆ ಜಾರಿಗೆ ಮಾಡುತ್ತೇವೆ ಎಂದಿದ್ದಾರೆ

ನೂತನ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿಲ್ಲ : 
ವಿದ್ಯುತ್ ದರ ಹೆಚ್ಚಳದ ಬಗ್ಗೆ ಗಮನ ಸೆಳೆದಾಗ ವಿವರ ನೀಡಿದ ಸಚಿವರು ರಾಜ್ಯದಲ್ಲಿ ನೂತನ ಸರ್ಕಾರ ವಿದ್ಯುತ್ ಬೆಲೆ ಹೆಚ್ಳ ಮಾಡಿಲ್ಲ ಕೆ.ಇ.ಆರ್.ಸಿ ಶಿಫಾರಸ್ಸಿನಂತೆ ವಿದ್ಯುತ್ ದರ ಹೆಚ್ಚಳವಾಗಿದ್ದು, ಇದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ನಿರ್ಧಾರವಾಗಿತ್ತು. ಚುನಾವಣೆ ನೀತಿ ಸಂಹಿತೆಯಿಂದ ಅನುಷ್ಠಾನಕ್ಕೆ ಬಂದಿರಲಿಲ್ಲ ಈಗ ಕೆ.ಇ.ಆರ್.ಸಿ ನಿರ್ಧಾರದಂತೆ ಅನಿವಾರ್ಯವಾಗಿ ವಿದ್ಯುತ್ದರ ಹೆಚ್ಚಳವಾಗಿದೆ ವಿದ್ಯುತ್ ದರ ಹೆಚ್ಚಳ ರಾಜ್ಯ ಸರ್ಕಾರದ ಮುಂದೆ ಇಲ್ಲ ಆದರೂ ಈ ಬಗ್ಗೆ ಮರುಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರ ಕೆ.ಇ.ಆರ್.ಸಿಗೆ ಮನವರಿಕೆ ಮಾಡಲಿದೆ ಎಂದು ತಿಳಿಸಿದರು.

 

 ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆ ರದ್ದು: ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ಸಿ.ಟಿ ರವಿ ವಿರುದ್ದ ಲೇವಡಿ : 
ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಕೊಂಡುಕೊಳ್ಳುತ್ತಾರೆ. ನೀವು ಮೊದಲು ಅವರ ಖಾತೆಗೆ ಹಣ ಹಾಕಿ ಎಂದಿದ್ದ ಮಾಜಿ ಶಾಸಕ ಸಿ.ಟಿ.ರವಿಗೆ ಟಾಂಗ್ ನೀಡಿದ್ರು. ನಾವು ಅಕ್ಕಿಯನ್ನು ಉಚಿತವಾಗಿ ಕೇಳುತ್ತಿಲ್ಲ. ದುಡ್ಡು ಕೊಡ್ತೀವಿ ಕೊಡಿ ಎಂದು ಕೇಳಿದ್ದೇವೆ. ಜನರಿಗೆ ಬೇಕಾಗಿರುವುದು ಅಕ್ಕಿ. ದುಡ್ಡಲ್ಲ. ಎಫ್.ಸಿ.ಐ. ಅವರೇ ಸ್ಟಾಕ್ ಇದೆ ಕೊಡುತ್ತೇವೆ ಎಂದು ಲೆಟರ್ ಕೊಟ್ಟಿದ್ದಾರೆ. ಈಗ ಅಕ್ಕಿ ವಾಪಸ್ ಹೋಗಿದೆ. ಕೊಳೆಯಲು ಬಿಟ್ಟಿದ್ದೀರಾ ರವಿ ಅವರೇ ಎಂದಿದ್ದಾರೆ. ಪಾಪ. ಸಿ.ಟಿ.ರವಿ he is a party man... ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಅವರಿಗೆ ಇದೆಲ್ಲ ಹೇಗೆ ಗೊತ್ತಾಗುತ್ತೆ ಎಂದು ಲೇವಡಿ ಮಾಡಿದ್ದಾರೆ. ಅಕ್ಕಿ ಇರುವುದೇ ಬಡವರಿಗೆ ಕೊಡುವುದಕ್ಕೆ. ದುಡ್ಡು ಕೊಡಿ ಅಂದ್ರೆ ಹೇಗೆ. ಜನರಿಗೆ ಬೇಕಾಗಿರುವುದು ಅಕ್ಕಿ. ದುಡ್ಡಲ್ಲ ಎಂದಿದ್ದಾರೆ.

click me!