ಏನಪ್ಪಾ ನಿನಗೆ ಕುಮಾರಣ್ಣ ಅನ್ಯಾಯ ಮಾಡಿದ್ರು? ನಾರಾಯಣಗೌಡ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ

By Ravi JanekalFirst Published Apr 3, 2023, 10:34 AM IST
Highlights

: ನಾರಾಯಣಗೌಡರನ್ನ ಜೆಡಿಎಸ್ ಎರಡು ಬಾರಿ ಶಾಸಕರನ್ನಾಗಿ ಮಾಡಿತ್ತು. ಆದರೂ  2-3 ವರ್ಷದ ದರಿದ್ರ ಅಧಿಕಾರಕ್ಕೋಸ್ಕರ ಬಿಜೆಪಿಗೆ ಹೋದ್ರು. ಸಚಿವ ನಾರಾಯಣಗೌಡ ವಿರುದ್ದ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.

ಮಂಡ್ಯ (ಏ.3) : ನಾರಾಯಣಗೌಡರನ್ನ ಜೆಡಿಎಸ್ ಎರಡು ಬಾರಿ ಶಾಸಕರನ್ನಾಗಿ ಮಾಡಿತ್ತು. ಆದರೂ  2-3 ವರ್ಷದ ದರಿದ್ರ ಅಧಿಕಾರಕ್ಕೋಸ್ಕರ ಬಿಜೆಪಿಗೆ ಹೋದ್ರು. ಸಚಿವ ನಾರಾಯಣಗೌಡ ವಿರುದ್ದ ಶಾಸಕ ರವೀಂದ್ರ ಶ್ರೀಕಂಠಯ್ಯ(MLA Ravindra Srikantaiaht) ವಾಗ್ದಾಳಿ ನಡೆಸಿದರು.

ಜೆಡಿಎಸ್‌ನಿಂದ ಅನ್ಯಾಯವಾಗಿದೆ ಎಂಬ ಸಚಿವ ನಾರಾಯಣಗೌಡರ ಹೇಳಿಕೆ ವಿಚಾರ ಪ್ರಸ್ತಾಪಿಸಿ ಮಾತನಾಡಿದರು

Latest Videos

ಜೆಡಿಎಸ್ ಪಕ್ಷದಿಂದ ಅಧಿಕಾರ ಅನುಭವಿಸಿ ಈಗ ಜೆಡಿಎಸ್ ನಿಂದ ಅನ್ಯಾಯವಾಗಿದೆ ಅಂತಾ ಹೇಳಿಕೆ ನೀಡ್ತಿರಲ್ಲ, ಪಕ್ಷ ದ್ರೋಹ ಮಾಡಿರುವ ನಿಮಗೆ ಜನ ವೋಟ್ ಕೊಡ್ತಾರೇನ್ರಿ? ಎಂದು ಕಿಡಿ ಕಾರಿದರು.

ಏನಪ್ಪ ನಿನಗೆ ದೇವೇಗೌಡರ ಕುಟುಂಬ‌ ಅನ್ಯಾಯ ಮಾಡಿದ್ದು? ನಿನಗೆ ವಿರೋಧ ಇದ್ದರೂ ಟಿಕೆಟ್ ಕೊಡಲಿಲ್ಲವಾ? ಎರಡು ಬಾರಿ ಎಂಎಲ್ಎ ಮಾಡಿರಲಿಲ್ವ. ಕುಮಾರಣ್ಣ(HD kumaraswamy)ನ ಬಗ್ಗೆ ಮಾತನಾಡ್ತಿಯಲ್ಲ ನಿನಗೆ ನಾಚಿಕೆ ಆಗಲ್ವ. ನನ್ನ ಪ್ರಕಾರ ನಾರಾಯಣಗೌಡನಿಗೆ ಈ ಬಾರಿ ಠೇವಣಿ ಸಿಗಲ್ಲ. ಹಳ್ಳಿ ಮೇಲೆ ಹೋಗಿ ವೋಟ್ ಕೇಳೊಕೆ ಆಗಲ್ಲ. ಮೋಸ ಮಾಡಿಕೊಂಡೆ ಕಾಲಕಾಳೆದಿದ್ದು ಇದರಿಂದ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಮತ ಕೇಳಲು ಹೋಗಲಿ ಅದರ ಪರಿಣಾಮ ಗೊತ್ತಾಗುತ್ತದೆ ಎಂದರು.

ಇವರಿಗಿಂತ ಮೊದಲೇ ನನಗೆ ಅವಕಾಶ ಬಂದಿತ್ತು. ಈ ರಾಜ್ಯದ ದೊಡ್ಡ ನಾಯಕರುಗಳೇ ನನ್ನನ್ನ ಬಿಜೆಪಿಗೆ ಬರುವಂತೆ ಕರೆದು ಮಾತನಾಡಿದ್ರು. ಮಂತ್ರಿ ಮಾಡ್ತೀವಿ, ಜಿಲ್ಲಾ ಉಸ್ತುವಾರಿ ಕೊಡ್ತೀವಿ ಒಪ್ಪಿಕೊಳ್ಳಿ ಅಂದ್ರು. ಆದ್ರೆ ನಾನು ನಮ್ಮ ಕುಟುಂಬದಲ್ಲಿ ಇದೆಲ್ಲ ನಡೆದು ಬಂದಿಲ್ಲ. ಜೆಡಿಎಸ್ ಪಕ್ಷಕ್ಕೆ ಬಂದಾಗಲು ಗುರು ಹಿರಿಯರ ವಿಶ್ವಾಸ ತೆಗೆದುಕೊಂಡು ಬಂದಿದ್ದೀನಿ. ನನ್ನದು ಆ ತರಹದ ಸಂಸ್ಕಾರ ಅಲ್ಲ ಎಂದು ಆಫರ್ ಮುರಿದುಹಾಕಿದ್ದೆ. ಆದ್ರೆ ನೀವು ಸಿಕ್ಕಿದ್ದನ್ನ ಬಾಚಿಕೊಂಡು ಮಂತ್ರಿ ಆಗ್ಬಿಟ್ಟು ಈಗ ಕುಮಾರಣ್ಣ ಅನ್ಯಾಯ ಮಾಡಿದ ಅಂತಾ ಮಾತಾಡ್ತಿರಲ್ಲ;
ಇದನ್ನ ಜೆಡಿಎಸ್ ಕಾರ್ಯಕರ್ತರು, ಶಾಸಕರು ಸಹಿಸಿಕೊಳ್ಳಲ್ಲ ಎಂದು ಹಾರಿಹಾಯ್ದರು.

ಕುಮಾರಸ್ವಾಮಿಯವರ ಬಗ್ಗೆ ಮಾತನಾಡುವ ಯೋಗ್ಯತೆ ನಾರಾಯಣಗೌಡಗೆ ಇಲ್ಲ. ನಾರಾಯಣಗೌಡರೇ ಕುಮಾರಸ್ವಾಮಿಯವರಿಗೆ ಮೋಸ ಮಾಡಿದ್ದು. ಸುಖಾಸುಮ್ಮನೆ ಆರೋಪ ಮಾಡಿದರೆ ನಾವು ಸಹಿಸಲ್ಲ ನಾರಾಯಣಗೌಡಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಖಡಕ್ ಎಚ್ಚರಿಕೆ.

click me!