ಪ್ರಸಕ್ತ ಅತಿವೃಷ್ಟಿ ಸನ್ನಿವೇಶದಲ್ಲಿ ಜನೋತ್ಸವದಲ್ಲಿನ ಹಬ್ಬ ಎನ್ನುವ ಪದ ಬಳಸುವುದು ಸರಿಯಾಗುವುದಿಲ್ಲ: ಸುಧಾಕರ್
ಬೆಂಗಳೂರು(ಸೆ.09): ಜನೋತ್ಸವ ಎನ್ನುವುದು ಹಬ್ಬದ ವಾತಾವರಣ. ಅತಿವೃಷ್ಟಿಯ ಈ ಸಂದರ್ಭ ಹಬ್ಬ ಎಂಬ ಪದ ಸರಿಯಲ್ಲ ಎಂಬ ಕಾರಣಕ್ಕಾಗಿ ಜನೋತ್ಸವ ಬದಲು ಜನಸ್ಪಂದನ ಕಾರ್ಯಕ್ರಮ ಎಂಬುದಾಗಿ ಬದಲಾಯಿಸಲಾಯಿತು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿಯೂ ಆಗಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಇದೇ ವೇ.ಎ ಪಿತೃಪಕ್ಷದ ಹಿನ್ನೆಲೆಯಲ್ಲಿ ಭಾನುವಾರದ ಬದಲು ಶನಿವಾರವೇ ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು ಎಂದೂ ಅವರು ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮವನ್ನು ಎರಡು ಬಾರಿ ಮುಂದೂಡಬೇಕಾಯಿತು. 11ನೇ ತಾರೀಖು ಪಿತೃಪಕ್ಷ ಇರುವುದರಿಂದ ಆ ದಿನ ಒಳ್ಳೆಯ ಕೆಲಸ ಮಾಡುವುದು ಬೇಡ ಎಂಬ ಉದ್ದೇಶದಿಂದ ಒಂದು ದಿನ ಮುಂಚಿತವಾಗಿ 10ರಂದು ನಿಗದಿಪಡಿಸಲಾಯಿತು. ಇದರಲ್ಲಿ ಬೇರೆ ಯಾವುದೇ ವಿಶೇಷ ಅರ್ಥವಿಲ್ಲ. ಇದರಲ್ಲಿ ಯಾವುದೇ ಗೊಂದಲವಿಲ್ಲ. 11ನೇ ತಾರೀಖು ಘೋಷಣೆ ಮಾಡಿದಾಗ ಪಿತೃಪಕ್ಷ ಇದೆ ಎಂಬುದು ಗೊತ್ತಿರಲಿಲ್ಲ. ಮದುವೆಗಳಿಗೆ ಜ್ಯೋತಿಷಿಗಳು ಒಂದು ದಿನಾಂಕ ಕೊಟ್ಟಿರುತ್ತಾರೆ. ಬಳಿಕ ದಿನಾಂಕ ಬದಲಾಯಿಸಿ ಬೇರೆ ದಿನ ನಿಗದಿ ಮಾಡುವುದಿಲ್ಲವೇ ಎಂದು ಪ್ರತಿಪಾದಿಸಿದರು.
ಬ್ರಿಟಿಷರ ರೀತಿ ದೇಶದಲ್ಲಿ ಬಿಜೆಪಿ ಆಡಳಿತ: ರಾಹುಲ್ ಗಾಂಧಿ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರಸಕ್ತ ಅತಿವೃಷ್ಟಿ ಸನ್ನಿವೇಶದಲ್ಲಿ ಜನೋತ್ಸವದಲ್ಲಿನ ಹಬ್ಬ ಎನ್ನುವ ಪದ ಬಳಸುವುದು ಸರಿಯಾಗುವುದಿಲ್ಲ. ಕೋವಿಡ್ ಸಂಕಷ್ಟದ ವೇಳೆ ಹಾಗೂ ಅಭಿವೃದ್ಧಿ ಸಂದರ್ಭದಲ್ಲಿ ಸರ್ಕಾರ ಯಾವ ರೀತಿಯ ಸ್ಪಂದನ ನೀಡಿದೆ ಎನ್ನುವುದನ್ನು ಸೂಚಿಸುವ ಉದ್ದೇಶದಿಂದ ಜನಸ್ಪಂದನ ಎಂಬ ಹೆಸರನ್ನು ಬದಲಾಯಿಸಲಾಯಿತು. ಹೆಸರಿನಲ್ಲಿ ಯಾವುದೇ ದೋಷವೇನೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.