ಯತ್ನಾಳ್‌ ಉಚ್ಚಾಟನೆ ಮಾಡಲು ಶಿಫಾರಸ್ಸು ಮಾಡಿದ್ದೇನೆ: ಸಚಿವ ಈಶ್ವರಪ್ಪ

By Kannadaprabha News  |  First Published Oct 22, 2020, 10:36 AM IST

ಯತ್ನಾಳ್‌ ಹೇಳಿಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಈಶ್ವರಪ್ಪ| ಯತ್ನಾಳ್‌ ಹೇಳಿಕೆ ಹುಚ್ಚಾಟದ ಪರಮಾವಧಿ. ಅದು ಬಿಟ್ಟರೆ ಮತ್ತೇನಲ್ಲ| ಯತ್ನಾಳ್‌ಗೆ ಶಿಸ್ತು ಇಲ್ಲದಿರಬಹುದು. ಆದರೆ, ಬಿಜೆ​ಪಿ​ಗೆ ಶಿಸ್ತಿದೆ. ಅದು ತನ್ನ ಕೆಲಸವನ್ನು ಮಾಡಿಯೇ ಮಾಡುತ್ತದೆ| 


ಬಳ್ಳಾರಿ(ಅ.22): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪದಚ್ಯುತಿ ಕುರಿತು ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು, ಯತ್ನಾಳ್‌ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಶಿಫಾರಸು ಮಾಡಲಾಗಿದೆ ಎಂದು ಹೇಳಿದ್ದಾರೆ.

"

Latest Videos

undefined

ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ ಸಂಬಂಧ ನಗರದಲ್ಲಿ ಬುಧವಾರ ಸಂಜೆ ಜರುಗಿದ ಪಕ್ಷದ ಪ್ರಮುಖ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಈಶ್ವರಪ್ಪ ಅವರು, ಯತ್ನಾಳ್‌ ಅವರ ಹೇಳಿಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಯತ್ನಾಳ್‌ ಅವರ ಹೇಳಿಕೆ ಹುಚ್ಚಾಟದ ಪರಮಾವಧಿ. ಅದು ಬಿಟ್ಟರೆ ಮತ್ತೇನಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. 

ಸಿಎಂ ವಿರುದ್ಧ ಮತ್ತೆ ಹರಿಹಾಯ್ದ ಯತ್ನಾಳ್, ಯಡಿಯೂರಪ್ಪಗೆ ಎಚ್ಚರಿಕೆ ಸಂದೇಶ..!

ಶಾಸಕಾಂಗ ಪಕ್ಷದ ಸಭೆಗೆ ಬಂದಿದ್ದ ಯತ್ನಾಳ್‌ ಅವರು ಅಲ್ಲಿ ಏನೂ ಮಾತನಾಡಲಿಲ್ಲ. ಇದ್ದಕ್ಕಿದ್ದಂತೆಯೇ ಮುಖ್ಯಮಂತ್ರಿಗಳ ಬದಲಾವಣೆ ಆಗುತ್ತದೆ. ಮೋದಿ ಅವರ ಸಮ್ಮತಿ ಎಂದು ಹುಚ್ಚಾಟದ ಹೇಳಿಕೆ ನೀಡಿದ್ದಾರೆ. ಯತ್ನಾಳ್‌ಗೆ ಶಿಸ್ತು ಇಲ್ಲದಿರಬಹುದು. ಆದರೆ, ಬಿಜೆ​ಪಿ​ಗೆ ಶಿಸ್ತಿದೆ. ಅದು ತನ್ನ ಕೆಲಸವನ್ನು ಮಾಡಿಯೇ ಮಾಡುತ್ತದೆ. ಶಿಸ್ತುಕ್ರಮಕ್ಕೆ ಪಕ್ಷದ ರಾ​ಜ್ಯಾಧ್ಯಕ್ಷರಿಗೆ ಶಿಫಾರಸು ಮಾಡಲಾಗಿದೆ ಎಂದು ಸಚಿವ ಈಶ್ವರಪ್ಪ ಹೇಳಿದರು.
 

click me!