
ಬಾಗಲಕೋಟೆ(ಫೆ.25): ದೆಹಲಿ ಹೋರಾಟದಲ್ಲಿ ಭಾಗಿಯಾದ ರೈತರು ಫೇಕ್ ಎಂಬ ಸೂಲಿಬೆಲೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಎಚ್.ಕೆ. ಪಾಟೀಲ, ರೈತರು ಅಂದ್ರೆನೇ ಗೊತ್ತಿಲ್ಲ. ದುರ್ದೈವದ ಸಂಗತಿ ಎಂದು ಪ್ರತಿಕ್ರಿಯಿಸಿದ್ದಾರೆ.
ಜಿಲ್ಲೆಯ ಹೂಲಗೇರಿ ಗ್ರಾಮದಲ್ಲಿ ಸಚಿವ ಎಚ್.ಕೆ. ಪಾಟೀಲ ಪ್ರತಿಕ್ರಿಯೆ ನೀಡಿ, ಯಾರಿಗೆ ನೀವು ಮಾಧ್ಯಮದವರು ಹೆಚ್ಚೆಚ್ಚು ಪ್ರಚಾರ ಕೊಡುತ್ತೀರಿ. ಅಲ್ಲಿರೋರು ಯಾರಿ ಅವರು ಫೇಕ್ ಫಾರ್ಮರ್ಸಾ.? ಯಾವ ಸಂಘಟನೆಯವರು ಹೋಗಿದ್ದಾರೆ ? ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿ ನಿಂತಿದ್ದಾರಾ ? ಹಳ್ಳಿ ಹಳ್ಳಿಯಿಂದ ಬರುವ ಜನ ರೈತರಲ್ಲವೇ? ನಿಮಗೆ ರೈತರ ಅಂದರೇನೇ ಸರಿಯಾಗಿ ಪರಿಚಯ ಇಲ್ಲ ಅಂದಂಗಾಯ್ತು. ಈ ರೀತಿ ಸುಳ್ಳುಗಳ ಸರಮಾಲೆ ಹೆಣೆಯುವ ಮೂಲಕ ಜನರನ್ನು ಗೊಂದಲಕ್ಕೀಡು ಮಾಡೋದು, ಹಿಟ್ ಆ್ಯಂಡ್ ರನ್ ಮಾಡೋದು. ಲಕ್ಷಾಂತರ ಜನ ವರ್ಷಗಟ್ಟಲೆ ಹೋರಾಟ ಮಾಡಿದರೂ ನೀವು ಅವರ ಮೇಲೆ ಕಾರು ಹತ್ತಿಸಿಕೊಂಡು ಹೋದರು. ಫೇಕ್ ರೈತರ ಮೇಲೆ ಹಾಯಿಸಿಕೊಂಡು ಹೋದ್ರಾ ಎಂದ ಸಚಿವ ಪಾಟೀಲ ಪ್ರಶ್ನಿಸಿದರು.
ಮುಸ್ಲಿಂ ಧಾರ್ಮಿಕ ಕಾರ್ಯಕ್ಕೆ ಬಂದಿಲ್ಲವೆಂದು, ಸ್ಮಶಾನದಲ್ಲಿ ಹುಸೇನ್‌ಸಾಬ್ ಶವ ಹೂಳಲು ಜಾಗ ಕೊಡ್ತಿಲ್ಲ
ಕಳೆದ ಹತ್ತು ವರ್ಷದಲ್ಲಿ ರೈತರ ಬಗ್ಗೆ ನಿರ್ಲಕ್ಷ್ಯ, ಆರ್ಥಿಕ ವ್ಯವಸ್ಥೆ ಮೇಲೆ ಕೊಡಲಿ ಪೆಟ್ಟು ಕೊಟ್ಟಿದ್ದಾರೆ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದ ಸರ್ಕಾರ, ಏನು ಮಾಡಿದೆ? ಎಂಎಸ್‌ಪಿ ಸಹಿತ ಉಳಿಸಿಕೊಳ್ಳಲಿಲ್ಲ. ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವ ವ್ಯವಸ್ಥೆ ಮಾಡಲಿ. ಸ್ವಾಮಿನಾಥನ್ ಫೋಟೋ ಹಿಡಿದುಕೊಂಡು ಅವರಿಗೆ ಪದ್ಮಶ್ರೀ, ಪದ್ಮವಿಭೂಷಣ ಕೊಟ್ಟು ಹೊಗಳಿ, ಕೊಂಡಾಡಿರುವ ಬಿಜೆಪಿ ಮುಖಂಡರಿಗೆ ಎಲ್ಲಿದೆ ಕಳಕಳಿ ಎಂದು ಪ್ರಶ್ನಿಸಿದರು.
ಸ್ವಾಮಿನಾಥನ್ ಹೇಳಿರುವ ಸಮೀಪವಾದರೂ ಬರಬೇಕಲ್ಲ. ಆ ಕಾರಣಕ್ಕೆ ವಿಧಾನಸಭೆಯಲ್ಲಿ ಈಗಾಗ್ಲೆ ನಿರ್ಣಯ ಕೈಗೊಂಡಿದ್ದೇವೆ. ಕೇಂದ್ರ ಸರ್ಕಾರ ರೈತರ ಬೆಳೆದ ಎಲ್ಲ ಬೆಳೆಗೆ, ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು. ಅದನ್ನು ಘೋಷಣೆ ಮಾಡಬೇಕು. ಅದಕ್ಕೆ ಶಾಸನಬದ್ಧ ರೂಪ ಸಿಗಬೇಕು. ಅದನ್ನ ಮಾಡಿ ಎಂದು ವಿಧಾದಸಭೆಯಲ್ಲಿ ಆಗ್ರಹಿಸಿದ್ದೇವೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.