ಹಿಂದೆ ತಾಯಿಯೊಬ್ಬರು ಪ್ರಧಾನಿ ಆಗಿದ್ದರು. ಅವರಿಗೆ ಮಹಿಳೆಯರ ಕಷ್ಟ ಅರ್ಥ ಆಗಲಿಲ್ಲ. ಆದರೆ ಮೋದಿ ಪ್ರಧಾನಿ ಆದ ಮೇಲೆ ತಾಯಂದಿರ ಕಷ್ಟ ಅರ್ಥ ಮಾಡಿಕೊಂಡು ಉಚಿತ ಗ್ಯಾಸ್, ಸಿಲಿಂಡರ್ ನೀಡಿದರು. ಹಾಗೆ ಮನೆ ಮನೆಗೆ ನಲ್ಲಿ ನೀರು ಬರುವಂತೆ ಮಾಡಿದ್ದಾರೆ: ಆಚಾರ್
ಕುಕನೂರು(ಆ.30): ದಕ್ಷ, ಸ್ಪಷ್ಟ, ಪಾರದರ್ಶಕ ಆಡಳಿತ ಮಾಡಿದ್ದು, ಯಲಬುರ್ಗಾ ಕ್ಷೇತ್ರದ ಹೆಸರನ್ನು ರಾಜ್ಯ, ರಾಷ್ಟ್ರಮಟ್ಟದವರೆಗೂ ಬೆಳೆಸಿದ ಹಿರಿಮೆ ಇದೆ. 2011ರಲ್ಲಿ ನಾನು ಎಂಎಲ್‌ಸಿ ಇದ್ದಾಗ ಮುಳುಗಡೆ ಗ್ರಾಮದ ಪರಿಹಾರದ ಚೆಕ್‌ಗಳನ್ನು ಸಂತ್ರಸ್ತರ ಮನೆ ಬಾಗಿಲಿಗೆ ತಲುಪಿಸಿದ್ದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು. ತಾಲೂಕಿನ ವೀರಾಪುರದಲ್ಲಿ .18.88 ಕೋಟಿ ವೆಚ್ಚದಲ್ಲಿ ಹಾಗೂ ಮುತ್ತಾಳ ಗ್ರಾಮದಲ್ಲಿ .13.33 ಕೋಟಿ ವೆಚ್ಚದಲ್ಲಿ ಪುನರ್ವಸತಿ ಗ್ರಾಮದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಹಿರೇಹಳ್ಳ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆ ಆದ ಗ್ರಾಮಗಳಲ್ಲಿ ಅಭಿವೃದ್ಧಿ ಮರೀಚಿಕೆ ಆಗಿದೆ. ಕಾಂಗ್ರೆಸ್ ಇಷ್ಟೂವರ್ಷ ಆಡಳಿತ ನಡೆಸಿದರೂ ಈ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಿಲ್ಲ ಎಂದರು.
ಹಿರೇಹಳ್ಳ ಯೋಜನೆಯಿಂದ ವೀರಾಪುರ, ಶಿರೂರು, ಮುತ್ತಾಳ ಹಾಗೂ ಮುದ್ಲಾಪುರ ಗ್ರಾಮಗಳು ಮುಳುಗಡೆಯಾಗಿದ್ದು, ಈ ಗ್ರಾಮದ ಪುನರ್ ವಸತಿ ಸ್ಥಳದ ಅಭಿವೃದ್ಧಿಗೆ 22 ವರ್ಷ ಈ ಗ್ರಾಮಸ್ಥರು ಕಾಯಬೇಕಾಗಿದೆ. ಈ ಹಿಂದೆ ಕಾಂಗ್ರೆಸ್ 5 ವರ್ಷ ಆಡಳಿತ ನಡೆಸಿದರೂ ಪುನರ್ ನಿರ್ಮಾಣ ಕಾಮಗಾರಿಗೆ ಒತ್ತು ನೀಡಿಲ್ಲ. ಕೆಲವು ಅಭಿವೃದ್ಧಿಪಡಿಸಿದ ಸಿಸಿ ರಸ್ತೆ ಬಿರುಕು ಬಿಟ್ಟು ಸಂಪೂರ್ಣ ಕಳಪೆಯಾಗಿವೆ. ಕೆಲವರು ಅಲ್ಪಸ್ವಲ್ಪ ಅನುದಾನ ತರುವ ದೊಡ್ಡ ದೊಡ್ಡ ಬ್ಯಾನರ್ ಹಾಕಿಸಿಕೊಂಡಿರುವುದನ್ನು ನೋಡಿದ್ದೇವೆ. ಸದ್ಯ ವೀರಾಪುರ ಗ್ರಾಮಕ್ಕೆ ಸುಮಾರು .31 ಕೋಟಿ ಬಿಡುಗಡೆಯಾಗಿದ್ದು, ಗ್ರಾಮವನ್ನು ಸುಂದರ, ಮಾದರಿ ಗ್ರಾಮ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.
undefined
ಬಿಜೆಪಿ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಅಮರೇಗೌಡ
ಹಿಂದೆ ತಾಯಿಯೊಬ್ಬರು ಪ್ರಧಾನಿ ಆಗಿದ್ದರು. ಅವರಿಗೆ ಮಹಿಳೆಯರ ಕಷ್ಟ ಅರ್ಥ ಆಗಲಿಲ್ಲ. ಆದರೆ ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ತಾಯಂದಿರ ಕಷ್ಟ ಅರ್ಥ ಮಾಡಿಕೊಂಡು ಉಚಿತ ಗ್ಯಾಸ್, ಸಿಲಿಂಡರ್ ನೀಡಿದರು. ಹಾಗೆ ಮನೆ ಮನೆಗೆ ನಲ್ಲಿ ನೀರು ಬರುವಂತೆ ಮಾಡಿದ್ದಾರೆ ಎಂದರು.
ಮುತ್ತಾಳ ಗ್ರಾಮದಲ್ಲಿ ಮಾತನಾಡಿದ ಎಂಎಲ್‌ಸಿ ಹೇಮಲತಾ ನಾಯಕ, ಜಿಲ್ಲೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇರಳ ಕೊಡುಗೆ ನೀಡಿದ್ದಾರೆ. ಅಂಜನಾದ್ರಿ ಬೆಟ್ಟ ಅಭಿವೃದ್ಧಿ, 110 ಬೆಡ್ ಆಸ್ಪತ್ರೆ ಉದ್ಘಾಟನೆ, ವಿಶ್ವವಿದ್ಯಾಲಯ ಹೀಗೆ ಹಲವಾರು ಜನಪರ ಸೌಕರ‍್ಯ ನೀಡಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು, ರಾಷ್ಟಾ್ರಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ರೈತರ ಹಿತಕ್ಕೆ ಕಿರುಧಾನ್ಯ ಉತ್ಪಾದನೆಗೆ ಮನ್ ಕೀ ಬಾತ್‌ನಲ್ಲಿ ಆದ್ಯತೆ ನೀಡಲು ಸೂಚಿಸಿದ್ದಾರೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ವೀರಣ್ಣ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಅನ್ನಮ್ಮ, ಜಿಪಂ ಮಾಜಿ ಸದಸ್ಯ ಶರಣಪ್ಪಗೌಡ ಮಾಲಿಪಾಟೀಲ್, ಗ್ರಾಪಂ ಉಪಾಧ್ಯಕ್ಷ ಸಣ್ಣಪ್ಪ ವಜ್ರಬಂಡಿ, ಸದಸ್ಯರಾದ ಶಿವಕುಮಾರ ಸೊಪ್ಪಿಮಠ, ಶರಣಪ್ಪ ವಡ್ಡರ್, ಎಸ್‌ಡಿಎಂಸಿ ಅಧ್ಯಕ್ಷೆ ಲಲಿತಾ ಬಸಒಡೆಯರ, ತಾಪಂ ಇಒ ರಾಮಣ್ಣ ದೊಡ್ಮನಿ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಲಿ, ಶಿವಕುಮಾರ ನಾಗಲಾಪೂರಮಠ, ತಾಪಂ ಮಾಜಿ ಅಧ್ಯಕ್ಷ ಜಗನ್ನಾಥಗೌಡ ಪೊಪಾ, ರಾಘವೇಂದ್ರ ಜೋಷಿ, ಶಿವಣ್ಣ ಮುತ್ತಾಳ, ಗವಿಸಿದ್ದಪ್ ಜಂತ್ಲಿ, ಕೊಟ್ರಪ್ಪ ಮುತ್ತಾಳ, ಶಂಭು ಜೋಳದ, ಬಸವನಗೌಡ ತೊಂಡಿಹಾಳ, ಚನ್ನಬಸಯ್ಯ ಸೊಪ್ಪಿಮಠ, ಪ್ರಭುಗೌಡ ಪಾಟೀಲ್ ಇತರಿದ್ದರು.