ಬಿಜೆಪಿ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಅಮರೇಗೌಡ

By Kannadaprabha NewsFirst Published Aug 30, 2022, 10:00 AM IST
Highlights

ನಾನು ಚುನಾವಣೆ ಬಂದಾಗ ಏನು ಕೆಲಸವನ್ನು ಮಾಡಿದ್ದೇನೆ ಎಂಬುವುದನ್ನು ಜನರಿಗೆ ತೋರಿಸುತ್ತೇನೆ. ಜನರ ಶಕ್ತಿಯ ಮುಂದೆ ಯಾವ ಶಕ್ತಿಯು ಇಲ್ಲ. ದೇಶದ ಪ್ರತಿಯೊಬ್ಬ ಪ್ರಜೆಯು ಸಮಾನತೆಯಿಂದ ಬಾಳುವುದೇ ಸ್ವಾತಂತ್ರ್ಯವಾಗಿದೆ: ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ 

ಹನುಮಸಾಗರ(ಆ.30):  ನಾನು ಈ ಬಾರಿ ಮತ್ತೊಮ್ಮೆ ಶಾಸಕನಾಗುತ್ತೇನೆ. ಕುಷ್ಟಗಿ ತಾಲೂಕಿನಲ್ಲಿ ಒಮ್ಮೆ ಚುನಾಯಿತರಾದವರು ಮತ್ತೊಮ್ಮೆ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬುದನ್ನು ಅಳಿಸಿಹಾಕುತ್ತೇನೆ ಎಂದು ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ ತಿಳಿಸಿದರು. ಗ್ರಾಮದ ಎಪಿಎಂಸಿ ಮೈದಾನದಲ್ಲಿ ಸೋಮವಾರ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ವಕ್ಕನದುರ್ಗಾ ಗ್ರಾಮದಿಂದ ಹನುಮಸಾಗರದವರೆಗೆ ನಡೆದ ದೇಶದ ಏಕತೆಗಾಗಿ ಸ್ವಾತಂತ್ರ್ಯದ ನಡಿಗೆ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ನಾನು ಚುನಾವಣೆ ಬಂದಾಗ ಏನು ಕೆಲಸವನ್ನು ಮಾಡಿದ್ದೇನೆ ಎಂಬುವುದನ್ನು ಜನರಿಗೆ ತೋರಿಸುತ್ತೇನೆ. ಜನರ ಶಕ್ತಿಯ ಮುಂದೆ ಯಾವ ಶಕ್ತಿಯು ಇಲ್ಲ. ದೇಶದ ಪ್ರತಿಯೊಬ್ಬ ಪ್ರಜೆಯು ಸಮಾನತೆಯಿಂದ ಬಾಳುವುದೇ ಸ್ವಾತಂತ್ರ್ಯವಾಗಿದೆ. ಕಾಂಗ್ರೆಸ್‌ ಸರ್ಕಾರ ಈ ಹಿಂದೆ ದೇಶದ 33 ಕೋಟಿ ಜನರಿಗೆ ಅಂದಿನ ಪ್ರಧಾನ ಮಂತ್ರಿಗಳು ಪಂಚವಾರ್ಷಿಕ ಯೋಜನೆಯಡಿಯಲ್ಲಿ ಆಹಾರ, ಶಿಕ್ಷಣ, ನೀರಾವರಿ ಸೇರಿದಂತೆ ನಾನಾ ರೀತಿಯ ಮೂಲ ಸೌಲಭ್ಯಗಳನ್ನು ಒದಗಿಸಿದ್ದಾರೆ.

ನಡ್ಡಾ ಸೂಚನೆ ಮೇರೆಗೆ ಕರ್ನಾಟಕದ 6 ಕಡೆ ದೊಡ್ಡ ರ್ಯಾಲಿ: ಸಿಎಂ ಬೊಮ್ಮಾಯಿ

ಇಂದಿನ ಬಿಜೆಪಿಯು ಬಡವರ ಮಕ್ಕಳಿಗೆ ಇದ್ದಂತಹ ವಿದ್ಯಾಸಿರಿ ಪ್ರೋತ್ಸಾಹಧನ ಬಂದ್‌ ಮಾಡಿದೆ. ಪ್ರತಿನಿತ್ಯ ದಿನ ಬಳಕೆ ವಸ್ತುಗಳ ಬೆಲೆ ಹೆಚಾಗುತ್ತಿದೆ. ಅದಕ್ಕೆ ಜಿಎಸ್‌ಟಿ ಹಾಕಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಶಾಸಕರಿದ್ದ ಕಡೆ ಅನುದಾನ ಬೇರೆ, ಕಾಂಗ್ರೆಸ್‌ ಶಾಸಕರಿದ್ದ ಕಡೆ ಅನುದಾನವನ್ನು ಬೇರೆ ರೀತಿಯಾಗಿ ಹಂಚಿಕೆಯಾಗುತ್ತಿದ್ದು, ಬಿಜೆಪಿ ಸರ್ಕಾರ ತಾರತಮ್ಯವನ್ನು ಮಾಡುತ್ತಿದೆ. ಸಿದ್ದರಾಮಯ್ಯನವರ ಯೋಜನೆಗಳು ಬಡವರಿಗೆ ಸಹಾಯಕವಾಗಿವೆ. ಮುಂಬರುವ ದಿನಮಾನಗಳಲ್ಲಿ ಕಾಂಗ್ರೆಸ್‌ ಎಲ್ಲ ಕಡೆ ಪ್ರತಿಧ್ವನಿಸಬೇಕು ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಲಪ್ಪ ತಳವಾರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ, ತಾಲೂಕಾಧ್ಯಕ್ಷೆ ನಿರ್ಮಲಾ ಮುತ್ತಣ್ಣ ಕರಡಿ, ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹುಲ್ಲೂರು, ಶೇಖರಗೌಡ ಮಾಲಿಪಾಟೀಲ್‌, ಶ್ಯಾಮರಾವ್‌ ಕುಲಕರ್ಣಿ, ರಾಜ್ಯ ಜಾಲತಾಣದ ಪ್ರಚಾರಕ, ರವೀನಂದ, ಗವಿಸಿದ್ಧಪ್ಪ, ದೊಡ್ಡಯ್ಯ ಗೆದ್ದಡಕಿ, ಮೈನೂದ್ಧೀನ್‌ ಖಾಜಿ, ಮಹಾಂತೇಶ ಅಗಸಿಮುಂದಿನ, ವಿಶ್ವನಾಥ ಕನ್ನೂರ, ಕೆ.ಬಿ. ತಳವಾರ, ಸಂಗಯ್ಯ ವಸ್ತ್ರದ, ಸೂಚಪ್ಪ ದೇವರಮನಿ, ಲಾಡ್ಲೆಮಷಾಕ್‌, ಸುರೇಶ ಕುಂಟನಗೌಡ್ರ, ಬಸಮ್ಮ ಹಿರೇಮಠ, ಲಕ್ಷ್ಮೀ ಬಸವರಾಜ, ರೇಣುಕಾ ಪುರದ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯಕರ್ತರು ಇತರರು ಇದ್ದರು.
 

click me!