ಅಭಿವೃದ್ಧಿಯಲ್ಲಿ ನನಗ್ಯಾರೂ ಸರಿಸಾಟಿ ಇಲ್ಲ: ಸಚಿವ ಗೋವಿಂದ ಕಾರಜೋಳ

By Kannadaprabha News  |  First Published Mar 22, 2023, 11:00 PM IST

ಅಭಿವೃದ್ಧಿ ವಿಚಾರದಲ್ಲಿ ನನಗಿಂತ ನಾನು ಮಾಡಿದ ಕೆಲಸಗಳೇ ಮಾತನಾಡುತ್ತಿವೆ. ನನ್ನ ವಿರುದ್ಧ ಮಾತನಾಡಿದರೆ ಸಾಲದು ಮಾಡಿದ್ದನ್ನು ತೋರಿಸಬೇಕು ಎಂದು ಹೇಳಿದ ಸಚಿವ ಗೋವಿಂದ ಕಾರಜೋಳ. 


ಮುಧೋಳ(ಮಾ.22): ಅಭಿವೃದ್ಧಿಯಲ್ಲಿ ನನಗೆ ಸರಿಸಾಟಿ ಯಾರೂ ಇಲ್ಲ. 50 ವರ್ಷ ಬೇರೆಯವರು ಮಾಡದಷ್ಟು ಅಭಿವೃದ್ಧಿ ಕಾರ್ಯಗಳನ್ನು 25 ವರ್ಷಗಳಲ್ಲಿ ನಾನು ಮಾಡಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ಮುಧೋಳದ ಕುಡೆ ಪ್ಲಾಟ್‌ ಲಕ್ಷ್ಮೀ ನಗರದಲ್ಲಿ ಭಾನುವಾರ, ರಾಜೀವ ಗಾಂಧಿ​ ವಸತಿ ನಿಗಮದಿಂದ 157 ಫಲಾನುಭವಿಗಳಿಗೆ ಮಂಜೂರಾದ ಹಕ್ಕುಪತ್ರ ವಿತರಿಸಿ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ನನಗಿಂತ ನಾನು ಮಾಡಿದ ಕೆಲಸಗಳೇ ಮಾತನಾಡುತ್ತಿವೆ. ನನ್ನ ವಿರುದ್ಧ ಮಾತನಾಡಿದರೆ ಸಾಲದು ಮಾಡಿದ್ದನ್ನು ತೋರಿಸಬೇಕು ಎಂದು ಹೇಳಿದರು.

ಲಕ್ಷ್ಮೀನಗರದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ವಿಶೇಷ ಪ್ರಕರಣವೆಂದು ಪರಿಗಣಿಸಿ ಹಕ್ಕುಪತ್ರ ವಿತರಿಸಲಾಗಿದೆ. ಇದು ರಾಜ್ಯದಲ್ಲೇ ಪ್ರಥಮ ಪ್ರಕರಣ. ಬಡವರಿಗೆ ಅನ್ಯಾಯವಾಗದಂತೆ ನೋಡಿಕೊಂಡಿದ್ದೇನೆ ಎಂದು ಹೇಳಿದರು.

Tap to resize

Latest Videos

undefined

ರಾಜ್ಯದಲ್ಲಿ ವರ್ಷಕ್ಕೆ 13 ಲಕ್ಷ ಜನರಿಗೆ ಉದ್ಯೋಗ: ಸಿಎಂ ಬೊಮ್ಮಾಯಿ

50 ಜನರಿಗೆ ಹಕ್ಕುಪತ್ರ ವಿತರಿಸುವುದು ಬಾಕಿಯಿದ್ದು ಅವರಿಗೂ ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ. ಯಾರೂ ಭಯಪಡಬೇಕಿಲ್ಲ. ನಿಮ್ಮ ನಂಬಿಕೆ ಉಳಿಸಿಕೊಳ್ಳಲು ಬದ್ಧದ್ದೇನೆ. ಮುಧೋಳ ನಗರವ್ಯಾಪ್ತಿ 18.25 ಚದುರ ಕಿ.ಮೀ. ಇದ್ದು, ಇದನ್ನು 50 ಚದುರ ಕಿ.ಮೀ. ವ್ಯಾಪ್ತಿಗೆ ವಿಸ್ತರಿಸಲಾಗುವುದು ಎಂದು ಹೇಳಿದರು.

ಆಶ್ರಯ ಸಮಿತಿ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ ಮಾತನಾಡಿ, ನನ್ನ ಅವ​ಧಿಯ ಮೊದಲ ಹಂತದಲ್ಲಿ 750 ಮನೆಗಳನ್ನು ಹಾಗೂ ಈಗ 157 ಮನೆಗಳನ್ನು ನೀಡುತ್ತಿದ್ದು, ಯಾರಿಂದಲೂ ನಯಾ ಪೈಸೆ ಪಡೆದಿಲ್ಲ ಎಂದು ಹೇಳಿದರು. ನಗರಸಭೆ ಸದಸ್ಯ ಗುರುಪಾದ ಕುಳಲಿ ಪ್ರಾಸ್ತಾವಿಕ ಮಾತನಾಡಿದರು. ಶಬ್ಬೀರ್‌ ಮುಲ್ಲಾ, ಶಿವಪ್ಪ ಈಟಿ, ಪುಂಡಲೀಕ ಮಾನೆ, ಕಲ್ಲಪ್ಪಣ್ಣ ಸಬರದ ಅವರನ್ನು ಅಭಿನಂದಿಸಲಾಯಿತು. ಇದೇ ವೇಳೆ ಲಕ್ಷ್ಮಿ ನಗರದ ನಿವಾಸಿಗಳು ಸಚಿವ ಗೋವಿಂದ ಕಾರಜೋಳ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ, ಬೆಳ್ಳಿ ಗದೆ ನೀಡಿ ಗೌರವಿಸಿದರು.

ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದರೆ ಸ್ವಾಗತ: ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿದ ಜೆಡಿಎಸ್ ಅಭ್ಯರ್ಥಿ!

ನಗರಸಭೆ ಅಧ್ಯಕ್ಷ ಶಹಾಜೀರಾವ ಮಾನೆ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ರಾಮಣ್ಣ ತಳೇವಾಡ, ಮಹಿಬೂಬ ಬಾಗವಾನ, ಡಾ.ರವಿ ನಂದಗಾಂವಿ, ಅನಂತ ಘೋರ್ಪಡೆ, ಹಣಮಂತ ತುಳಸಿಗೇರಿ, ನಗರಸಭೆ ಆಯುಕ್ತ ಶಿವಪ್ಪ ಅಂಬಿಗೇರ, ಭಾರತಿದೇವಿ ಜೋಶಿ ಹಾಗೂ ನಗರಸಭೆ ಸದಸ್ಯರು ಅಧಿ​ಕಾರಿಗಳು ಇದ್ದರು.

ಮುಧೋಳ ನಗರವನ್ನು 1000 ಕೋಟಿ ಅನುದಾನದಲ್ಲಿ ಅಭಿವೃದ್ಧಿಪಡಿಸಿದ್ದು, ನೀರಾವರಿ, ಶಿಕ್ಷಣ, ವಿದ್ಯುತ್‌, ರಸ್ತೆ, ಆರೋಗ್ಯ ಹೀಗೆ ಸರ್ವ ಕ್ಷೇತ್ರಗಳಲ್ಲೂ ಅಭಿವೃದ್ಧಿ ಮಾಡಲಾಗಿದೆ. ಆದರೂ ಕಾಂಗ್ರೆಸ್‌ನವರು ಟೀಕಿಸುತ್ತಿದ್ದಾರೆ. ಅವರಿಗೆ ಮನುಷ್ಯತ್ವವೇ ಇಲ್ಲ ಅಂತ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. 

click me!