
ಬೆಂಗಳೂರು(ಜ.09): ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಮೇಕೆದಾಟು ಯೋಜನೆ(Mekedatu Project) ಕುರಿತು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನ್ಯಾಯಾಲಯದಲ್ಲಿರುವ ಜಲವಿವಾದದ ಬಗ್ಗೆ ಬೇಕಾಬಿಟ್ಟಿ ಜಾಹೀರಾತು ನೀಡಿ ಚಿಲ್ಲರೆ ವರ್ತನೆ ತೋರಿದ್ದಾರೆ. ಅವರು ಜಲಸಂಪನ್ಮೂಲ ಸಚಿವರಾಗಿ ಮುಂದುವರೆಯಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್(MB Patil) ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ(Siddaramaiah) ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಅವರ ಸಂಪುಟದಲ್ಲಿ ನಾನು ಜಲಸಂಪನ್ಮೂಲ ಸಚಿವನಾಗಿದ್ದೆ. ಆಗ ಬೆಂಗಳೂರಿಗೆ ಹೆಚ್ಚುವರಿ ಕುಡಿಯುವ ನೀರಿನ ಅವಶ್ಯಕತೆಯನ್ನು ನ್ಯಾಯಾಧಿಕರಣಕ್ಕೆ ಮನವರಿಕೆ ಮಾಡಿಕೊಡಲಾಯಿತು. ಇದರ ಫಲವಾಗಿ ನಮಗೆ ಹೆಚ್ಚುವರಿಯಾಗಿ 4.75 ಟಿಎಂಸಿ ನೀರು ಸಿಕ್ಕಿತು. ಇದರ ಐದು ಪಟ್ಟು ಅಂದರೆ 23 ಟಿಎಂಸಿಯಷ್ಟು ನೀರು ಸಂಗ್ರಹಕ್ಕೆ ಅವಕಾಶ ದೊರೆಯಿತು. ಹಾಗಾಗಿ ಮೇಕೆದಾಟು ಯೋಜನೆಗೆ ಶಕ್ತಿ ಬಂತು. ನಂತರ ಯೋಜನೆಗೆ ಸಮಗ್ರ ಯೋಜನಾ ವರದಿ(DPR) ಸಿದ್ಧಪಡಿಸಿ ಕಾಂಗ್ರೆಸ್(Congress) ಸರ್ಕಾರ ಕೇಂದ್ರದ ಅನುಮತಿಗೆ ಕಳುಹಿಸಿತು. ಆದರೆ, ಅಂತರಾಜ್ಯ ಜಲವಿವಾದದ(Interstate Water Dispute) ಬಗ್ಗೆ ತಳ ಬುಡ ಗೊತ್ತಿಲ್ಲದ ಗೋವಿಂದ ಕಾರಜೋಳ ಅವರು ಡಿಪಿಆರ್ ಸಿದ್ಧಪಡಿಸಿದ್ದು ಬಿಜೆಪಿ ಸರ್ಕಾರದಲ್ಲಿ ಎಂದು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಬೇಕಾಬಿಟ್ಟಿ ಜಾಹೀರಾತು ನೀಡುತ್ತಿದ್ದಾರೆ. ಮೂರ್ಖ ಮಂತ್ರಿಯಿಂದ ಇಂತಹದ್ದು ನಡೆಯಲು ಸಾಧ್ಯ. ಜಲ ಸಂಪನ್ಮೂಲ ಸಚಿವರಾಗಿರಲು ಅವರಿಗೆ ನೈತಿಕತೆ ಇಲ್ಲ ಎಂದು ಹೇಳಿದರು.
Padayatra Politics: ತಮಿಳ್ನಾಡಲ್ಲಿ ಮಿತ್ರಪಕ್ಷಕ್ಕೆ ಬುದ್ಧಿ ಹೇಳಿ: ಕಾಂಗ್ರೆಸ್‌ಗೆ ಕಾರಜೋಳ ತಿರುಗೇಟು
ಇದೇ ವೇಳೆ, ಮೇಕೆದಾಟು ಯೋಜನೆಗೆ ಕುರಿತು ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ‘ಮೇಕೆದಾಟು ಸತ್ಯದರ್ಶನ’ ಹೆಸರಿನ ಜಾಹೀರಾತು ಕುರಿತು, ಈ ಜಾಹೀರಾತನ್ನು ನೀಡಿದ್ದು ಸರ್ಕಾರವಾ, ಬಿಜೆಪಿ(BJP) ಪಕ್ಷವಾ, ಯಾವುದಾದರೂ ಸಂಘ ಸಂಸ್ಥೆ, ವ್ಯಕ್ತಿಯಾ ಯಾವುದೇ ಮಾಹಿತಿ ಇಲ್ಲ. ಒಂದೆಡೆ ಜಾಹೀರಾತು ಅಂತಾರೆ, ಇನ್ನೊಂದೆಡೆ ಪ್ರಾಯೋಜಕತ್ವ ಅಂತಾರೆ. ಗೋವಿಂದ ಕಾರಜೋಳ ಅವರು ನ್ಯಾಯಾಲಯದಲ್ಲಿರುವ ಇಂತಹ ಒಂದು ಜಲ ವಿವಾದದ ಬಗ್ಗೆ ಬೇಕಾಬಿಟ್ಟಿಯಾಗಿ ಜಾಹೀರಾತು ನೀಡಿ ಚಿಲ್ಲರೆ ವರ್ತನೆ ತೋರಿದ್ದಾರೆ ಎಂದು ಆರೋಪಿಸಿದರು.
ರೌಡಿಗಳ ರೀತಿಯಲ್ಲಿ ಮಾತಾಡಬೇಡಿ: ಎಂಬಿಪಾಗೆ ಕಾರಜೋಳ ತಿರುಗೇಟು
ಟೀಕೆ-ಟಿಪ್ಪಣಿ ಮಾಡುವುದು ಪ್ರಜಾಪ್ರಭುತ್ವದ(Democracy) ಸೌಂದರ್ಯ. ಆದರೆ, ಟೀಕೆ ಮಾಡುವ ವೇಳೆ ಸಂಸ್ಕಾರವಂತರಾಗಿ ವರ್ತಿಸಬೇಕೆ ಹೊರತು ರೌಡಿಗಳ ರೀತಿ ಮಾತನಾಡಬಾರದು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ತಿರುಗೇಟು ನೀಡಿದ್ದಾರೆ.
ಕಾರಜೋಳ ಒಬ್ಬ ಮೂರ್ಖ ಸಚಿವ ಎಂಬ ಎಂ.ಪಿ. ಪಾಟೀಲ್ ಹೇಳಿಕೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಕಾರಜೋಳ ಅವರು, ವೈಯಕ್ತಿಕವಾಗಿ ಯಾರ ಬಗ್ಗೆಯೂ ದ್ವೇಷ ಇಲ್ಲ. 2013-18ರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿತ್ತು ಎಂದು ಹೇಳಿದ್ದೇನೆಯೇ ಹೊರತು ಮತ್ತೇನೂ ಇಲ್ಲ. ಆ ಅವಧಿಯಲ್ಲಿ ನಡೆದ ಸತ್ಯವನ್ನು ಬಿಚ್ಚಿಡುವ ಕೆಲಸ ಮಾಡಿದ್ದೇನೆ. ಈ ಸತ್ಯ ಎಂ.ಬಿ.ಪಾಟೀಲ್‌ಗೆ ಏಕೆ ಕಹಿಯಾಯಿತೋ ಗೊತ್ತಿಲ್ಲ. ಹೀಗೆ ಅವಾಚ್ಯ ಶಬ್ದಗಳಿಂದ ಏಕೆ ಮಾತನಾಡಿದ್ದಾರೋ ಗೊತ್ತಿಲ್ಲ ಎಂದು ಕಿಡಿಕಾರಿದರು.
ಎಂ.ಬಿ.ಪಾಟೀಲ್ ಅವರು ನನ್ನನ್ನು ವಜಾ ಮಾಡಲು ಮುಖ್ಯಮಂತ್ರಿಗೆ ಹೇಳಿದ್ದಾರೆ. ಅದಕ್ಕೆ ಸಂತೋಷ, ಅವರು ನನಗಿಂತ ಚಿಕ್ಕವರು. ನಾಲಿಗೆ ಹರಿಬಿಡುವ ಮೊದಲು ಯೋಚನೆ ಮಾಡಬೇಕು. ಅವರ ಆಸ್ತಿಯನ್ನು ನಾನು ಕಸಿದುಕೊಂಡಿಲ್ಲ. ನನ್ನ ಆಸ್ತಿಯನ್ನು ಅವರು ಕಸಿದುಕೊಂಡಿಲ್ಲ. ರಾಜಕೀಯವಾಗಿ ಮಾತನಾಡಿದ್ದಾರೆ. ಅದಕ್ಕೆ ನಾನೂ ರಾಜಕೀಯವಾಗಿಯೇ ಉತ್ತರ ಕೊಡುತ್ತೇನೆ ಎಂದು ಕಿಡಿಕಾರಿದರು.
ಪಾದಯಾತ್ರೆ ಜನಪರವಲ್ಲ:
ಕಾಂಗ್ರೆಸ್ ಪಾದಯಾತ್ರೆಯು(Congress Padayatra) ಚುನಾವಣೆ(Election)ಸಮಯದಲ್ಲಿ ಮತ ಬ್ಯಾಂಕ್(Vote Bank) ಆಗುತ್ತದೆಯೇ ಹೊರತು ಜನಪರವಾಗುವುದಿಲ್ಲ. ಕೋವಿಡ್(Covid19) ಸೋಂಕು ಹೆಚ್ಚಾಗಿರುವ ಹೊತ್ತಿನಲ್ಲಿ ಜನರನ್ನು ಸೇರಿಸಿ ಹೋರಾಟ ಮಾಡುವುದು ಎಷ್ಟುಸರಿ? ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ನಮ್ಮ ವಿರೋಧ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಗೂ ಹೋರಾಟ ಮಾಡುವ ಹಕ್ಕಿದೆ. ಆದರೆ, ಸಮಯ, ಸಂದರ್ಭ ನೋಡಿಕೊಂಡು ಹೋರಾಟ ನಡೆಸಬೇಕು. ಕೋವಿಡ್ ಸೋಂಕು ಹೆಚ್ಚಾಗಿರುವ ಸಮಯದಲ್ಲಿ ಜನರನ್ನು ಸೇರಿಸಿ ಹೋರಾಟ ಮಾಡುವುದು ಎಷ್ಟುಸಮಂಜಸ? ಕೋವಿಡ್ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿಗರು ಪಾದಯಾತ್ರೆಯನ್ನು ಕೈ ಬಿಡಬೇಕು ಎಂದು ಮನವಿ ಮಾಡಿದರು.
ಮೇಕೆದಾಟು ಪಾದಯಾತ್ರೆ ಬಗ್ಗೆ ಸಚಿವ ಕಾರಜೋಳ ಟೀಕೆ
ಕಾಂಗ್ರೆಸ್ ಪಾದಯಾತ್ರೆಯು ಚುನಾವಣೆ ಸಮಯದಲ್ಲಿ ಮತ ಬ್ಯಾಂಕ್ ಆಗುತ್ತದೆಯೇ ಹೊರತು ಜನಪರವಾಗುವುದಿಲ್ಲ. ಕೋವಿಡ್ ಸೋಂಕು ಹೆಚ್ಚಾಗಿರುವ ಹೊತ್ತಿನಲ್ಲಿ ಜನರನ್ನು ಸೇರಿಸಿ ಹೋರಾಟ ಮಾಡುವುದು ಎಷ್ಟುಸರಿ? ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಟೀಕಾಪ್ರಹಾರ ನಡೆಸಿದ್ದಾರೆ.
ಕಾರಜೋಳ ಹೇಳಿಕೆ ಶುದ್ಧ ಸುಳ್ಳು: ನಮ್ಮ ಅವಧಿಯಲ್ಲೇ ಕೇಂದ್ರಕ್ಕೆ ಡಿಪಿಆರ್ ಸಲ್ಲಿಕೆ: ಸಿದ್ದು, ಡಿಕೆಶಿ
ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ನಮ್ಮ ವಿರೋಧ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಗೂ ಹೋರಾಟ ಮಾಡುವ ಹಕ್ಕಿದೆ. ಆದರೆ, ಸಮಯ, ಸಂದರ್ಭ ನೋಡಿಕೊಂಡು ಹೋರಾಟ ನಡೆಸಬೇಕು. ಕೋವಿಡ್ ಸೋಂಕು ಹೆಚ್ಚಾಗಿರುವ ಸಮಯದಲ್ಲಿ ಜನರನ್ನು ಸೇರಿಸಿ ಹೋರಾಟ ಮಾಡುವುದು ಎಷ್ಟು ಸಮಂಜಸ? ಕೋವಿಡ್ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿಗರು ಪಾದಯಾತ್ರೆಯನ್ನು ಕೈ ಬಿಡಬೇಕು ಎಂದು ಮನವಿ ಮಾಡಿದರು.
2013-18ರವರೆಗೂ ಕಾಂಗ್ರೆಸ್ ಸರ್ಕಾರ ನೀರಾವರಿ ಯೋಜನೆಯಲ್ಲಿ(Irrigation Project) ಮಾಡಬೇಕಾದ ಕೆಲಸ ಮಾಡಿಲ್ಲ. ಈಗ ಪಾದಯಾತ್ರೆ ಕೈಗೊಂಡಿದೆ. ಚುನಾವಣೆ ಸಮಯದಲ್ಲಿ ಇಂತಹ ಹೋರಾಟಗಳು ಮತಬ್ಯಾಂಕ್ ರಾಜಕಾರಣವಾಗುತ್ತದೆಯೇ(Politics) ವಿನಃ ಜನಪರವಾಗುವುದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರೋಧ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಅಣ್ಣಾಮಲೈ ಚುನಾಯಿತ ಪ್ರತಿನಿಧಿಯಲ್ಲ, ಅವರು ಪಕ್ಷದ ಅಧ್ಯಕ್ಷ. ತಮಿಳುನಾಡಿನಲ್ಲಿರುವುದು(Tamil Nadu) ಕಾಂಗ್ರೆಸ್ ಮೈತ್ರಿಕೂಟದ ಡಿಎಂಕೆ ಸರ್ಕಾರ. ಅವರ ಶಾಸಕರಿಗೆ ಒತ್ತಾಯ ಮಾಡಬೇಕು. ವಿನಾಕಾರಣ ಹಂಚಿಕೆಯಾದ ನೀರಿನ ಬಗ್ಗೆ ಕ್ಯಾತೆ ತೆಗೆಯಬೇಡಿ ಎಂದು ಹೇಳಬೇಕು. ಈ ಮೂಲಕ ರಾಜ್ಯದ ಜನರಿಗೆ ಉಪಕಾರವಾಗಲಿ ಎಂದು ಲೇವಡಿ ಮಾಡಿದರು.
ಎರಡು ವರ್ಷದಲ್ಲಿ ಬಿಜೆಪಿ ಏನು ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾನು ಮತ್ತು ಮುಖ್ಯಮಂತ್ರಿಗಳು ಕಾನೂನು ಹೋರಾಟ ಮಾಡುವ ಸಂಬಂಧ ಕಾನೂನು ತಂಡದ ಜತೆ ಚರ್ಚೆಗಳನ್ನು ನಡೆಸಿದ್ದೇವೆ. ಕೇಂದ್ರ ಜಲಶಕ್ತಿ ಸಚಿವರ ಜತೆ ಮಾತನಾಡಿದ್ದೇವೆ ಮತ್ತು ಪರಿಸರ ಮಂಜೂರಾತಿ ತೆಗೆದುಕೊಂಡಿದ್ದೇವೆ. ಯೋಜನೆಗೆ ಜಾರಿಗೆ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.