ಕಾಂಗ್ರೆಸ್ ಬಂದಿದ್ರೆ ಪಾಕಿಸ್ತಾನದ ಪರಿಸ್ಥಿತಿ ಬರ್ತಿತ್ತು: ಸಚಿವ ಕಾರಜೋಳ

By Girish Goudar  |  First Published Feb 27, 2023, 1:00 AM IST

ಸಿದ್ದು ಸವದಿ ಅತ್ಯಂತ ಶ್ರೇಷ್ಠ ಕೆಲಸಗಾರರು, ಕೆಲಸ ಆಗೋವರೆಗಾದ್ರೂ ಬಿಡುವವರಲ್ಲ. ಕ್ಷೇತ್ರದ ಬಗ್ಗೆ ಕಳಕಳಿ ಇರುವ ನಾಯಕರಾಗಿದ್ದಾರೆ: āಸಚಿವ ಗೋವಿಂದ ಕಾರಜೋಳ 


ಬಾಗಲಕೋಟೆ(ಫೆ.27): ಕಾಂಗ್ರೆಸ್ಸಿನವರು 60 ವರ್ಷ ಏನು ಕಡಿದು ಕಟ್ಟೆ ಹಾಕಿದ್ದಾರೆ. ಜನರಿಗೆ ಈಗ ಬದುಕಲು ಉದ್ಯೋಗ ನೀಡಬೇಕಿದೆ. ಕಾಂಗ್ರೆಸ್‌ನವರು ಅಕ್ಕಿ ಕೊಟ್ಟೆ, ಬೇಳೆ ಕೊಟ್ಟೆ ಅಷ್ಟೇ ಮಾಡಿದ್ದಾರೆ. ಜಗತ್ತಿನಲ್ಲಿಯೇ ನಮ್ಮ ರಾಷ್ಟ್ರ ಬಲಿಷ್ಠವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಬಡವರಿಗಾಗಿ ಬಜೆಟ್ ನೀಡಿದ್ದಾರೆ ಅಂತ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. 

ನಿನ್ನೆ(ಭಾನುವಾರ) ಬನಹಟ್ಟಿಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಗೋವಿಂದ ಕಾರಜೋಳ ಅವರು, ಸಿದ್ದು ಸವದಿ ಅತ್ಯಂತ ಶ್ರೇಷ್ಠ ಕೆಲಸಗಾರರು, ಕೆಲಸ ಆಗೋವರೆಗಾದ್ರೂ ಬಿಡುವವರಲ್ಲ. ಕ್ಷೇತ್ರದ ಬಗ್ಗೆ ಕಳಕಳಿ ಇರುವ ನಾಯಕರಾಗಿದ್ದಾರೆ ಅಂತ ಹೇಳಿದ್ದಾರೆ. 

Tap to resize

Latest Videos

undefined

ಬಾಗಲಕೋಟೆ: ಕಲಾದಗಿಯಲ್ಲಿ ಆಧುನಿಕ ಪದವಿ ಕಾಲೇಜು ನಿರ್ಮಾಣ, ಸಚಿವ ನಿರಾಣಿ

ದೇಶದ ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿ ಅಷ್ಟೇ ಅಲ್ಲ, ಕೊರೋನಾ ಸಂಕಷ್ಟಗಳಲ್ಲೂ ಜನರಿಗೆ ರಕ್ಷಣೆ ಮಾಡಿದ್ದಾರೆ. ಅಕಸ್ಮಾತ್ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ನೀವು ನೋಡಿದ್ರಿ, ಪಾಕಿಸ್ತಾನದಲ್ಲಿ ಎಂತಹ ಕಷ್ಟದ ಪರಿಸ್ಥಿತಿ ಇದೆ. ಕಾಂಗ್ರೆಸ್ ಬಂದಿದ್ರೆ ನಮ್ಮ ದೇಶಕ್ಕೂ ಅದೇ ಪರಿಸ್ಥಿತಿ ಬರ್ತಿತ್ತು ಅಂತ ಲೇವಡಿ ಮಾಡಿದ್ದಾರೆ. 

ಮೋದಿಯವರಿಂದ ದೇಶ ಅಭಿವೃದ್ಧಿ ಆಗಿದೆ. ಭಾರತ ಹಿರಿಯಣ್ಣಮ ಸ್ಥಾನ ಪಡೆಯಲು ಕೆಲವೇ ಕೆಲವು ಸಮಯ ಇದೆ. ಕಾಂಗ್ರೆಸ್ ಅಪಪ್ರಚಾರ ನಂಬಬೇಡಿ, ಕೇವಲ ಸುಳ್ಳು ಮಾತ್ರ ಮಾತನಾಡ್ತಾರೆ. ಕೈಲಾಗದ ಕಾಂಗ್ರೆಸ್ಸನವರು ಅಪಪ್ರಚಾರ ಮಾಡ್ತಾರೆ ಅಂತ ಕಾಂಗ್ರೆಸ್‌ ನಾಯಕರ ವಿರುದ್ಧ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ. 

click me!