2024ರ ಚುನಾವಣೆ ನಂತರ ಕಾಂಗ್ರೆಸ್ ಕಚೇರಿಯಲ್ಲಿ ದೀಪ ಹಚ್ಚೋಕು ಯಾರು ಇರಲ್ಲ: ಕಾರಜೋಳ

By Girish GoudarFirst Published Jan 11, 2023, 10:20 AM IST
Highlights

ಕಾಂಗ್ರೆಸ್‌ನವರು ಇವತ್ತೇ ಬರೆದಿಟ್ಟುಕೊಳ್ಳಲಿ, 40 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲೋದಿಲ್ಲ. ಗುಜರಾತ್‌ಗಿಂತಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಕಡಿಮೆ ಆಗುತ್ತದೆ: ಸಚಿವ ಗೋವಿಂದ ಕಾರಜೋಳ 

ಬೆಳಗಾವಿ(ಜ.11):  ಕಾಂಗ್ರೆಸ್‌ನವರು ವ್ಯರ್ಥ ಕಸರತ್ತು ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಸ್ವಂತ ಜಿಲ್ಲೆಯಲ್ಲೇ ಸೋತು ಓಡಿ ಬಂದಿದ್ದಾರೆ. ಸಿದ್ದರಾಮಯ್ಯ ಮೈಸೂರಿನಲ್ಲಿ ಹುಟ್ಟಿ ಬೆಳೆದವರು. ಅಲ್ಲಿಂದ ಬಾದಾಮಿಗೆ ಬಂದು ಕೊನೆಗೆ ಅಲ್ಲಿ ಸೋಲ್ತೀನಿ ಅಂತಾ ಅಲ್ಲಿಂದ ಪಾಲಾಯನ ಮಾಡಿದ್ದಾರೆ. ಅವರಿಗೆ ರಕ್ಷಣೆ ಇಲ್ಲ ಇನ್ನೂ ಅವರ ಕಾರ್ಯಕರ್ತರಿಗೆ ಎಲ್ಲಿದೆ ರಕ್ಷಣೆ..? ಅಂತ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ. ಬೆಳಗಾವಿಯಿಂದ ಕಾಂಗ್ರೆಸ್ ನಾಯಕರ ಬಸ್ಸು ಯಾತ್ರೆಗೆ ಸಂಬಂಧಿಸಿದಂತೆ ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಇವತ್ತೇ ಬರೆದಿಟ್ಟುಕೊಳ್ಳಲಿ, 40 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲೋದಿಲ್ಲ. ಗುಜರಾತ್‌ಗಿಂತಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಕಡಿಮೆ ಆಗುತ್ತದೆ ಅಂತ ತಿಳಿಸಿದ್ದಾರೆ. 

ಕೆಂಪಯ್ಯನ್ನು ಇಟ್ಟುಕೊಂಡು ಭ್ರಷ್ಟಾಚಾರ ಆರೋಪ ಮಾಡ್ತಿದ್ದಾರೆ. ಕಾಂಗ್ರೆಸ್ ನಾಯಕರು ಎಲ್ಲರೂ ಬೇಲ್ ಮೇಲೆ ಓಡಾಡ್ತಿದ್ದಾರೆ. 2024ರ ಚುನಾವಣೆ ನಂತರ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ದೀಪ ಹಚ್ಚೋಕು ಯಾರು ಇರಲ್ಲ. ಸಿದ್ದರಾಮಯ್ಯ ಒಬ್ಬ ಹಿರಿಯ ರಾಜಕಾರಣಿ, ಒಂದು ಸೀಟು ಹುಡುಕಲು ಅಲೆ ಮಾರಿ ತರ ಓಡಾಡ್ತಿದ್ದಾರೆ ಅಂತ ಲೇವಡಿ ಮಾಡಿದ್ದಾರೆ. 

ಸಿದ್ದರಾಮಯ್ಯ ಕಾಣುತ್ತಿರುವ ಸಿಎಂ ಕುರ್ಚಿ ಕನಸು ನನಸಾಗೋದಿಲ್ಲ: ಸಚಿವ ಕಾರಜೋಳ

ಸುಪ್ರೀಂ ಕೋರ್ಟ್‌ನಲ್ಲಿ ಕೃಷ್ಣ ಅಧಿಸೂಚನೆ ವಿಚಾರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ, 2013 ರಿಂದ ಇಲ್ಲಿಯವರೆಗೂ ಗೆಜೆಟ್ ನೋಟಿಫಿಕೆಷನ್ ನಿಲ್ಲಿಸಿದ್ರು. ನಿನ್ನೆ ನಮ್ಮ ಪರ ವಕೀಲರು ವಾದ ಮಂಡನೆ ಮಾಡಿದ್ದಾರೆ. ಕಾವೇರಿ ವಿಚಾರ ಬಂದಾಗ ಗೆಜೆಟ್ ನೋಟಿಫಿಕೆಶನ್ ಮಾಡಿರುವ ಉದಾಹರಣೆ ಇದೆ. ನಾವು 15 ಸಾವಿರ ಕೋಟಿ ಮೂಲಸೌಕರ್ಯಕ್ಕೆ ವೆಚ್ಚ ಮಾಡಿದ್ದೀವಿ. ಅದು ಉಪಯೋಗ ಆಗಬೇಕು ಎಂದು ವಕೀಲರು ವಾದ ಮಂಡಿಸಿದ್ದಾರೆ. ಆಲಮಟ್ಟಿ ಜಲಾಶಯದಲ್ಲಿ ನೀರು ಹಿಡಿದಿಡುವ ಸಾಮರ್ಥ್ಯವಿದೆ ಎಂದು ವಾದ ಮಾಡಿದ್ದಾರೆ. 5.9 ಲಕ್ಷ ಹೆಕ್ಟೇರ್ ನೀರಾವರಿ ಮಾಡೋಕೆ ಅವಕಾಶ ಮಾಡಿಕೊಡಬೇಕು. ಮಹಾರಾಷ್ಟ್ರ ಸರ್ಕಾರದ ಜೊತೆಗೆ ಜಂಟಿಯಾಗಿ ಮೂವ್ ಮಾಡಿದ್ದೇವೆ. ನಮ್ಮ ಪರವಾಗಿ ಸುಪ್ರೀಂ ಕೋರ್ಟ್ ಅಧಿಸೂಚನೆ ಹೊರಡಿಸಲಿದೆ ಎಂಬ ವಿಶ್ವಾಸವಿದೆ ಅಂತ ಕಾರಜೋಳ ತಿಳಿಸಿದ್ದಾರೆ. 

ಇನ್ನು ಎಸ್ಸಿ, ಎಸ್ಟಿ 9ನೇ ಶೆಡ್ಯೂಲ್ ಸೇರಿಸಲು ಗಡುವು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜನಸಂಖ್ಯೆಯ ಅನುಗುಣವಾಗಿ ಮೀಸಲಾತಿ ಹೆಚ್ಚಳವಾಗಬೇಕು ಎಂದು ಹೋರಾಟ ಮಾಡಿದ್ದರು. ಕಾಂಗ್ರೆಸ್ ಮೀಸಲಾತಿ ನೀಡಿಲ್ಲ, ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರ ಆ ರೀತಿ ಮಾಡಲ್ಲ. ಕಾನೂನು ಸಚಿವರ ನೇತೃತ್ವದಲ್ಲಿ ಉಪಸಮಿತಿ ಸಭೆ ನಡೆಸಿದ್ದೇವೆ. ಕಾದು ನೋಡಿ ಅಂತ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. 

click me!