ಒಮ್ಮೆ ಕೊರೋನಾ ಪಾಸಿಟಿವ್, ಮತ್ತೊಮ್ಮೆ ನೆಗೆಟಿವ್: ಥರ್ಡ್ ಅಂಪೈರ್ ಮೊರೆ ಹೋದ ಸಿಟಿ ರವಿ

By Suvarna News  |  First Published Jul 12, 2020, 5:32 PM IST

ಒಂದು ಸಲ ನೆಗೆಟಿವ್ ಮತ್ತೊಂದು ಸಲ ಪಾಸಿಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ಸಚಿವ ಸಿಟಿ ರವಿ ಅವರು ಗೊಂದಲಕ್ಕೀಡಾಗಿದ್ದು, ಥರ್ಡ್ ಅಂಪೈರ್ ರಿಸಲ್ಟ್ ಗಾಗಿ ಕಾಯುತ್ತಿದ್ದಾರೆ.


ಚಿಕ್ಕಮಗಳುರು, (ಜುಲೈ.12):  ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿಟಿ ರವಿ ಈಗಾಗಲೇ ಎರಡು ಬಾರಿ ಕೊರೋನಾ  ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆದ್ರೆ, ಒಂದು ವರದಿಯಲ್ಲಿ ನೆಗೆಟಿವ್ ಮತ್ತೊಂದು ವರದಿಯಲ್ಲಿ ಪಾಸಿಟಿವ್ ಅಂತ ಬಂದಿದೆ.

ಇದರಿಂದ ಗೊಂದಲಕ್ಕೀಡಾದ ಸಿಟಿ ರವಿ ಇದೀಗ ಮೂರನೇ ಬಾರಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದು, ಥರ್ಡ್ ಅಂಪೈರ್ ರಿಸಲ್ಟ್‌ಗಾಗಿ ಕಾಯುತ್ತಿದ್ದಾರೆ.

Latest Videos

undefined

ವರದಿ ಭಿನ್ನವಾಗಿ ಬಂದಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸದ್ಯ ಸಿಟಿ ರವಿ ಅವರು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದು, ಮೂರನೇ ವರದಿಗಾಗಿ ಕಾಯುತ್ತಿದ್ದಾರೆ.

ಸೋಂಕಿತರ ಚಿಕಿತ್ಸೆಗೆ ಯಾವುದೇ ಸಮಸ್ಯೆ ಇಲ್ಲ: ಸಚಿವ ಸಿ.ಟಿ. ರವಿ

ಇನ್ನು ಈ ಕುರಿತು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಸಚಿವರು "ಒಂದು ವಾರದೊಳಗಿನ ಎರಡು ಟೆಸ್ಟ್‌ನಲ್ಲಿ ಒಮ್ಮೆ ನೆಗೆಟಿವ್, ಒಮ್ಮೆ ಪಾಸಿಟಿವ್ ಬಂದಿದೆ, ಅದಕ್ಕಾಗಿ ನಾನು ಇಂದು 3ನೇ ಟೆಸ್ಟ್ ಮಾಡಿಸಿದ್ದೇನೆ. ಥರ್ಡ್ ಅಂಪೈರ್ ರಿಸಲ್ಟ್-ಗಾಗಿ ಕಾಯುತ್ತಿದ್ದೇನೆ" ಎಂದಿದ್ದಾರೆ.

ಒಂದು ವಾರದೊಳಗಿನ ಎರಡು ಟೆಸ್ಟ್ನಲ್ಲಿ ಒಮ್ಮೆ ನೆಗೆಟಿವ್, ಒಮ್ಮೆ ಪಾಸಿಟಿವ್ ಬಂದಿದೆ, ಅದಕ್ಕಾಗಿ ನಾನು ಇಂದು 3ನೇ ಟೆಸ್ಟ್ ಮಾಡಿಸಿದ್ದೇನೆ. ಥರ್ಡ್ ಅಂಪೈರ್ ರಿಸಲ್ಟ್-ಗಾಗಿ ಕಾಯುತ್ತಿದ್ದೇನೆ.

— C T Ravi 🇮🇳 ಸಿ ಟಿ ರವಿ (@CTRavi_BJP)

ಇದಲ್ಲದೆ "ಬೆಳಿಗ್ಗೆ ಸೂರ್ಯ ನಮಸ್ಕಾರ, ಅರ್ಧಕಟಿ ಚಕ್ರಾಸನ, ನಾಡಿಶುದ್ದಿ ಕ್ರಿಯೆಗಳು, ಅನುಲೋಮ ವಿಲೋಮ ಪ್ರಾಣಾಯಾಮ ಪೂರ್ಣಗೊಳಿಸಿದ್ದೇನೆ. ಒಂದು ಗಂಟೆಯ ವಿವಿಧ ಯೋಗಾಭ್ಯಾಸದ ನಂತರ 10 ನಿಮಿಷ ಶವಾಸನ ಹಾಕಿದ್ದೇನೆ. ಮೇಲ್ನೋಟಕ್ಕೆ ಯಾವುದೇ ವ್ಯತ್ಯಾಸ ನನಗೆ ಗೊತ್ತಾಗಿಲ್ಲ" ಎಂದೂ ಹೇಳಿಕೊಂಡಿದ್ದಾರೆ.

ಇದಕ್ಕೆ ಹಿಂದೆ ತಮಗೆ ಕೊರೋನಾ ದೃಢಪಟ್ಟಿರುವ ಬಗ್ಗೆ ಟ್ವೀಟ್ ಮಾಡಿದ್ದ ಸಚಿವ ಸಿಟಿ ರವಿ , ''ನಾನು ಕ್ಷೇಮವಗಿದ್ದೇನೆ. ಕೊರೋನಾ ಲಕ್ಷಣಗಳಿಲ್ಲ. ಈಗ ಹೋಮ್ ಕ್ವಾರಂಟೈನ್-ನಲ್ಲಿ ಇದ್ದೇನೆ. ಸದ್ಯ ನನ್ನ ತೋಟದ ಮನೆಯಲ್ಲೇ ವಾಕ್ ಮಾಡುತ್ತಿದ್ದೇನೆ'' ಎಂದು ಹೇಳಿದ್ದರು.

ವಿಐಪಿಗಳಿಗೆ ವರದಿ ಹೀಗೆ ಬಂತು. ಅವರು ಮೂರ್ನಾಲ್ಕು ಬಾರಿ ಟೆಸ್ಟ್ ಮಾಡಿಸಿಕೊಳ್ಳುತ್ತಾರೆ. ಆದ್ರೆ, ಅದೇ ಸಾಮಾನ್ಯ ಜನರಿಗೆ ಮೊದಲ ಬಾರಿಗೆ ನೆಗೆಟಿವ್ ಬಂತ ಅಂತ ಮನೆಗೆ ಕಳುಹಿಸಿದ್ರೆ, ಮುಂದೇನಾಗ್ಬೇಡ ಎನ್ನುವುದನ್ನು ಊಹಿಸಿಕೊಂಡರೆ ನಿಜಕ್ಕೂ ಭಯವಾಗುತ್ತೆ.

click me!