'ಕುಮಾರಸ್ವಾಮಿ ಯಾರ ಜೊತೆಗೆ ಬೇಕಾದ್ರೂ ಸೂಟ್ ಆಗ್ತಾರೆ : ಅವರ ಸಖ್ಯವೇ ಬೇಡ'

By Kannadaprabha NewsFirst Published Feb 27, 2021, 2:10 PM IST
Highlights

ಮಾಜಿ ಸಿಎಂ ಕುಮಾರಸ್ವಾಮಿ ಯಾರ ಜೊತೆಗೆ ಬೇಕಾದ್ರೂ ಸೂಟ್ ಆಗ್ತಾರೆ. ಅವರಿಗೆ ಬದ್ಧತೆ ಇಲ್ಲ ಎಂದು ಅಸಮಾಧಾನ ಹೊರಹಾಕಲಾಗಿದೆ. ಅಲ್ಲದೇ ಅವರ ಸಖ್ಯವೇ ನಮಗೆ ಬೇಡ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರು (ಫೆ.27):  ಮಾಜಿ ಸಿಎಂ ಕುಮಾರಸ್ವಾಮಿ ಅವರೊಬ್ಬ ಜೋಕರ್, ಅವರು ಯಾರಿಗೂ ಸೂಟ್ ಆಗುತ್ತಾರೆ. ಅವರಿಗೆ ಸರಿಯಾದ ರಾಜಕೀಯ ನಿಲುವು, ಬದ್ಧತೆ, ದೃಷ್ಟಿಕೋನ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ಪುನರುಚ್ಚರಿಸಿದ್ದಾರೆ. ಅಲ್ಲದೆ ಎಚ್‌ಡಿಕೆ ಕುರಿತ ಈ ಹೇಳಿಕೆಗೆ ನಾನು ಬದ್ಧ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿಂದು ಮಾತನಾಡಿದ ಸಚಿವ ಯೋಗೇಶ್ವರ್, ವಿಧಾನ ಪರಿಷತ್‌ನಲ್ಲಿ ಬಿಜೆಪಿ ಬೆಂಬಲ ಪಡೆದು ಸಭಾಪತಿ ಸ್ಥಾನ ಗಳಿಸಿಕೊಂಡ ಜೆಡಿಎಸ್, ಬಳಿಕ ಮೈಸೂರಿನಲ್ಲಿ ಮೇಯರ್ ಗಾದಿಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ ಎಂದರು.

'2023ಕ್ಕೆ ಮತ್ತೊಮ್ಮೆ ಎಚ್ಡಿಕೆ ಮುಖ್ಯಮಂತ್ರಿ' ...

ಕುಮಾರಸ್ವಾಮಿ ಅವರ ಅವಕಾಶವಾದಿ ರಾಜಕಾರಣಕ್ಕೆ ಈ ಎಲ್ಲಾ ವಿಚಾರಗಳು ಸಾಕ್ಷಿ. ಬಿಜೆಪಿ ತತ್ವಸಿದ್ಧಾಂತದ ಪಕ್ಷವಾಗಿದ್ದು, ಹಾಗಾಗಿಯೇ ಜೆಡಿಎಸ್ ಜೊತೆ ಸಖ್ಯ ಬೇಡ ಎಂದು ಪಕ್ಷದ ಹಿರಿಯ ಮುಖಂಡರ ಗಮನಕ್ಕೆ ತಂದಿದ್ದೇನೆ ಎಂದು ಸಚಿವ ಯೋಗೇಶ್ವರ್ ಹೇಳಿದರು. 

 ಯೊಗೇಶ್ವರ್ ರಾಜಕೀಯದಲ್ಲಿ ಬಚ್ಚಾ ಇರಬಹುದು ಎಂದು ಎಚ್‌ಡಿಕೆ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿದ ಯೋಗೇಶ್ವರ್, ರಾಮನಗರಕ್ಕೆ ಮೊದಲ ಬಾರಿ ಆಗಮಿಸಿದಾಗ ಎಚ್‌ಡಿಕೆ ಕೂಡ ಬಚ್ಚಾ ಆಗಿದ್ದರು. ಆದರೆ ನಾನು ಅಲ್ಲೇ ಹುಟ್ಟಿ ಬೆಳೆದವನು ಎಂದಿದ್ದಾರೆ.

click me!