ಮೀಸಲಾತಿಗಾಗಿ ವಿವಿಧ ಸಮುದಾಯಗಳು ಹೋರಾಟ ಮಾಡುವ ಮೂಲಕ ಸರ್ಕಾರಗಳ ಮೇಲೆ ಒತ್ತಡ ಹೇರುತ್ತಿವೆ. ಇದರ ಮಧ್ಯೆ ಸಚಿವರೊಬ್ಬರು ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರು, (ಫೆ.20): ಮೀಸಲಾತಿಗಾಗಿ ಒಕ್ಕಲಿಗರ ಸಮುದಾಯದ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಮೀಸಲಾತಿ ಹೋರಾಟ ಬಗ್ಗೆ ನನ್ನ ಬೆಂಬಲ ಇಲ್ಲ. ಮೀಸಲಾತಿ ಬಗ್ಗೆ ಎಲ್ಲಾ ಸಮುದಾಯಗಳು ಕೇಳುತ್ತಿವೆ. ಸಂವಿದಾನ ಚೌಕಟ್ಟಿನಲ್ಲೇ ಎಲ್ಲವೂ ಕೆಲಸ ಆಗಬೇಕು. ಹಲವಾರು ಬಾರಿ ಇಂಥಹ ಹೋರಾಟಗಳು ನಡೆದಿವೆ. ಇದ್ಯಾವುದಕ್ಕೂ ಅರ್ಥವಿಲ್ಲ ಎಂದು ಹೇಳಿದರು.
undefined
ಮೀಸಲಾತಿಗೆ ಮತ್ತೊಂದು ಸಮುದಾಯ ಹೋರಾಟಕ್ಕೆ ಸಿದ್ಧ: ಸಿಎಂಗೆ ಶುರುವಾಯ್ತು ಸಂಕಷ್ಟ
ಒಕ್ಕಲಿಗರು ನಾವ್ಯಾರು ಬೀದಿಗೆ ಬಂದು ಇಳಿದಿಲ್ಲ. ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಒಂದು ಕಮಿಟಿ ರಚನೆಯಾಗಲಿದೆ. ನೋಡೋಣ ಮುಂದೆ ಏನಾಗುತ್ತೆ ಅಂತಾ. ನಿರ್ಮಲಾನಂದ ಶ್ರೀಗಳು ಕರೆದು ಚರ್ಚೆ ಮಾಡಿದ್ರೆ, ಅವರ ನಡೆಯನ್ನಾಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದರು.
ಈಗಾಗಲೇ ಒಕ್ಕಲಿಗ ಸಮುದಾಯ ಸಹ ಹಿಂದುಳಿದ ಮೀಸಲಾತಿ ಬೇಕೆಂದು ಆಗ್ರಹಿಸಿದೆ. ಇದಕ್ಕೆ ನಿರ್ಮಲಾನಂದ ಶ್ರೀಗಳು ಧ್ವನಿಗೂಡಿಸಿದ್ದು, ಮುಂದಿನ ದಿನಗಳಲ್ಲಿ ಹೋರಾಟಕ್ಕಿಳಿಯುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.