ಅತ್ತ ಜಾರಕಿಹೊಳಿ ದಿಲ್ಲಿಗೆ, ಇತ್ತ ಯೋಗೇಶ್ವರ್-ಯತ್ನಾಳ್ ರಹಸ್ಯ ಮಾತುಕತೆ

Published : Jun 29, 2021, 08:31 PM IST
ಅತ್ತ ಜಾರಕಿಹೊಳಿ ದಿಲ್ಲಿಗೆ, ಇತ್ತ ಯೋಗೇಶ್ವರ್-ಯತ್ನಾಳ್ ರಹಸ್ಯ ಮಾತುಕತೆ

ಸಾರಾಂಶ

* ಕುತೂಹಲ ಮೂಡಿಸಿದ ಬಿಎಸ್‌ವೈ ವಿರೋಧಿಗಳು ಭೇಟಿ * ಯತ್ನಾಳ್ ಭೇಟಿಯಾದ ಸಚಿವ ಸಿ.ಪಿ. ಯೋಗೇಶ್ವರ್ * ವಿಜಯಪುರದ ಹೋಟೆಲ್‌ನಲ್ಲಿ ರಹಸ್ಯ ಮಾತುಕತೆ

ವಿಜಯಪುರ, (ಜೂನ್.29): ಒಂದೆಡೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ದೆಹಲಿ ದಂಡೆಯಾತ್ರೆ ಕೈಗೊಂಡಿದ್ರೆ, ಇತ್ತ ಸಚಿವ ಸಿ.ಪಿ.ಯೋಗೇಶ್ವರ್​ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಭೇಟಿಯಾಗಿರುವುದು ರಾಜ್ಯ ಬಿಜೆಪಿಯಲ್ಲಿ ಸಂಚಲಚನ ಮೂಡಿಸಿದೆ.

ಹೌದು...ಕಲಬುರಗಿಯಿಂದ ವಿಜಯಪುರ ಜಿಲ್ಲೆಗೆ ಆಗಮಿಸಿರೋ ಪ್ರವಾಸೋದ್ಯಮ ಇಲಾಖೆ ಸಚಿವ ಯೋಗೇಶ್ವರ್ ಇಂದು (ಮಂಗಳವಾರ) ಯತ್ನಾಳ್ ಅವರನ್ನ ನಗರದ ಹೊರವಲಯದಲ್ಲಿರುವ ಹೋಟೆಲ್​ ಒಂದರಲ್ಲಿ ಭೇಟಿಯಾದರು. ಈ ವೇಳೆ ಕೆಲ ಕಾಲ ರಹಸ್ಯ ಮಾತುಕತೆಯನ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ದಿಲ್ಲಿಯಲ್ಲಿ ಸಾಹುಕಾರ, RSS ಮುಖಂಡರೊಬ್ಬರ ಮನೆಯಲ್ಲಿ ಮಹತ್ವದ ಚರ್ಚೆ

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಸಮರ ಸಾರಿರುವ ಈ ಉಭಯ ನಾಯಕರ ರಹಸ್ಯ ಭೇಟಿಯ ಮಾತುಕತೆ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಬಸನಗೌಡ ಪಾಟೀಲ್​ ಯತ್ನಾಳ್ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿವೈ ವಿಜಯೇಂದ್ರ ವಿರುದ್ಧ ಬಂಡಾಯವೆದ್ದಿದ್ದಾರೆ.  ಅಲ್ಲದೇ ಸಿಪಿ ಯೋಗೇಶ್ವರ್ ಕೂಡ ಇತ್ತೀಚೆಗೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

 ಸಿಪಿ ಯೋಗೇಶ್ವರ್ ಅವರು ಯತ್ನಾಳ್​​ರನ್ನ ಭೇಟಿಯಾಗಿರೋದು ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಸಿಎಂ ವಿರೋಧಿಗಳನ್ನ ಮತ್ತೆ ಒಂದು ಗೂಡಿಸುತ್ತಿದ್ದಾರೆ ಅನ್ನೋ ಚರ್ಚೆ ಬಿಜೆಪಿಯಲ್ಲಿ ಶುರುವಾಗಿದೆ. ಇನ್ನು ಅತ್ತ ರಮೇಶ್ ಜಾರಕಿಹೊಳಿ ಅವರು ಸಹ ಕೆಲ ರಾಜ್ಯ ನಾಯಕರ ವಿರುದ್ಧ ತೊಡೆತಟ್ಟಿ ನಿಂತಿರುವ ಜಾರಕಿಹೊಳಿ ಹೈಕಮಾಂಡ್ ನಾಯಕ ಭೇಟಿ ಮಾಡಲು ದಿಲ್ಲಿಗೆ ಹೋಗಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ