ಎಲ್ಲಾ ಹುದ್ದೆಗೂ ಡೀಲ್ ಮಾಡಿ ಹಣ ಮಾಡುತ್ತಿದ್ದಾರೆ : ಸಿದ್ದರಾಮಯ್ಯ

By Suvarna News  |  First Published Jul 8, 2021, 1:41 PM IST
  • ಸಿಎಂ‌ ಬಿಎಸ್ ವೈ, ಬಿಜೆಪಿ‌ ಸರ್ಕಾರದ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ವಾಕ್‌ ಪ್ರಹಾರ
  • ಕೇಂದ್ರದಿಂದ ರಾಜ್ಯದ ಹಣ ತರಲು ಇವರಿಗೆ ಸಾಧ್ಯವಾಗುತ್ತಿಲ್ಲ
  • ರಾಜ್ಯಕ್ಕೆ ಕೇಂದ್ರ ಸರ್ಕಾರ 5495 ಕೋಟಿ ವಿಶೇಷ ಅನುಧಾನ ಕೊಡಬೇಕು

ಬೆಂಗಳೂರು (ಜು.08):  ಸಿಎಂ‌ ಬಿಎಸ್ ವೈ, ಬಿಜೆಪಿ‌ ಸರ್ಕಾರದ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ವಾಕ್‌ ಪ್ರಹಾರ ನಡೆಸಿದ್ದಾರೆ. ಕೇಂದ್ರದಿಂದ ರಾಜ್ಯದ ಹಣ ತರಲು ಇವರಿಗೆ ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.  

ಬೆಂಗಳೂರಿನಲ್ಲಿಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯಯ್ಯ 15 ನೇ ಹಣಕಾಸು ಆಯೋಗ ಶಿಫಾರಸ್ಸಿನ ಪ್ರಕಾರ ರಾಜ್ಯಕ್ಕೆ ಕೇಂದ್ರ ಸರ್ಕಾರ 5495 ಕೋಟಿ ವಿಶೇಷ ಅನುಧಾನ ಕೊಡಬೇಕು. ಇದರ ಬಗ್ಗೆ ಕೇಳೋಕೆ ಸಿಎಂ ಯಡಿಯೂರಪ್ಪಗೆ ಧಮ್ ಇಲ್ಲ. ನಿರ್ಮಲಾ ಸೀತಾರಾಮನ್ ಮಂತ್ರಿ ಇದ್ದಾರೆ. ಪ್ರಹ್ಲಾದ ಜೋಶಿ ಮಂತ್ರಿ ಇದ್ದಾರೆ. 
ಈಗ ಹೊಸ ಮಂತ್ರಿಗಳು ಆಗಿದ್ದಾರೆ. ಇಷ್ಟೆಲ್ಲಾ ಇದ್ದರೂ ನಮ್ಮ ಹಣ ತರಲು ಆಗಲಿಲ್ಲ ಎಂದು ಹೇಳಿದರು.

Tap to resize

Latest Videos

ಪಕ್ಷಕ್ಕೆ ಪದೇ ಪದೇ ದ್ರೋಹ ಮಾಡೋರನ್ನ ಎಂದಿಗೂ ಸೇರಿಸಿಕೊಳ್ಳಲ್ಲ : ಸಿದ್ದರಾಮಯ್ಯ ...

ಊಟಕ್ಕೆ ಇಲ್ಲದ ಉಪ್ಪಿನಕಾಯಿ ಅಂತ ಜರಿದ ಸಿದ್ದರಾಮಯ್ಯ : ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 36 ಬನರು ಸಾವನ್ನಪ್ಪಿದರು. ಆದರೆ ಮೊದಲು ಸರ್ಕಾರ ಕೇವಲ 3 ಜನ ಸಾವನ್ನಪ್ಪಿದ್ದಾರೆ ಎಂದಿತ್ತು.  ನಾನು ಡಿ ಕೆ ಶಿವಕುಮಾರ್ ಹೋಗಿ ಪರಿಶೀಲನೆ ‌ಮಾಡಿದ ಬಳಿಕ 36 ಜನ ಸಾವನ್ನಪ್ಪಿರುವುದನ್ನ  ಅಧಿಕಾರಿಗಳು ಒಪ್ಪಿಕೊಂಡರು. 

ಚಾಮರಾಜನಗರದ ದುರಂತಕ್ಕೆ ಆರೋಗ್ಯ ಸಚಿವ ಸುಧಾಕರ್, ಜಿಲ್ಲಾ ಉಸ್ತುವಾರಿ ಸುರೇಶ್ ಕುಮಾರ್ ನೇರ ಹೊಣೆ. ಸರ್ಕಾರದಲ್ಲಿರುವ ಸಚಿವ ಸೋಮಣ್ಣ ಕೂಡ ಹೊಣೆ.
ಕೊರೋನಾ ಎದುರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದಕ್ಕೆ ಸಿಎಂ ಯಡಿಯೂರಪ್ಪ ಕೂಡ ನೇರ ಹೊಣೆ ಎಂದರು.

ಪ್ರತಿ ಹುದ್ದೆಗೆ ರಾಜ್ಯದಲ್ಲಿ ಡೀಲ್ ಮಾಡಿ ಹಣ ಮಾಡುತ್ತಿದ್ದಾರೆ. ಹಣ ಕೊಟ್ಟು ಅಧಿಕಾರ ವಹಿಸಿಕೊಂಡವರು ಸುಮ್ಮನೆ ಇರುತ್ತಾರಾ..? ಭ್ರಷ್ಟಾಚಾರ ಮಾಡುತ್ತಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

click me!