ನಮ್ಮ ಪಕ್ಷ ಪ್ರೈವೇಟ್ ಕಂಪನಿಯಲ್ಲ, ಕಾಂಗ್ರೆಸ್, ಜೆಡಿಎಸ್‌ಗೆ ಅಶ್ವತ್ಥ್ ನಾರಾಯಾಣ ಟಾಂಗ್

By Suvarna NewsFirst Published Aug 9, 2022, 10:26 PM IST
Highlights

ನಮ್ಮ ಪಕ್ಷ  ಪ್ರೈವೇಟ್ ಕಂಪನಿಯಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು, (ಆಗಸ್ಟ್.09):   ಬಿಜೆಪಿ ಪಕ್ಷ ಮತ್ತು ನಮ್ಮ ಸರ್ಕಾರ ಜನರ ಪರವಾಗಿರುವ ಸರ್ಕಾರವಾಗಿದೆ ಹೊರತು ಇದು ಯಾವುದೋ ಕಾಂಗ್ರೆಸ್, ಜೆಡಿಎಸ್ ನಂತೆ ಖಾಸಗಿ ಕಂಪನಿಯಲ್ಲ ಎಂದು ಸಚಿವ ಅಶ್ವತ್ಥ ನಾರಾಯಣ ಹರಿಯ್ದಿದ್ದಾರೆ

ಬೆಂಗಳೂರಿನಲ್ಲಿ ಇಂದು(ಮಂಗಳಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಜಿಲ್ಲೆಯಲ್ಲಿ ನಾವು ಚೆನ್ನಾಗಿ ಕೆಲಸ ಮಾಡ್ತಿದ್ದೇವೆ. ನಮ್ಮಲ್ಲಿ ಯಾರು ಏನು ಬೇಕಾದರೂ ಆಗಬಹುದು. ಆದರೆ ಇವೆರಡರಲ್ಲಿ ಕುಟುಂಬಕ್ಕಷ್ಟೇ ಅಧಿಕಾರ. ಕಾಂಗ್ರೆಸ್​ನಲ್ಲಿ ಸೋನಿಯಾ ಗಾಂಧಿ ಕಂಪನಿ, ರಾಹುಲ್ ಗಾಂಧಿ ಕಂಪನಿ, ಪ್ರಿಯಾಂಕಾ ಗಾಂಧಿ ಕಂಪನಿ ಇರುವುದು. ರಾಮನಗರದಲ್ಲಿ ಕುಮಾರಸ್ವಾಮಿ ಕಂಪನಿ ಇದೆ. ಈ ಸಮಾಜದಲ್ಲಿ ಯಾವುದಾದರೂ ಅರ್ಥ ಇಲ್ಲದೆ ಇರೋ ಪಕ್ಷಗಳು ಅಂದರೆ ಅದು ಇವುಗಳೇ ಎಂದು ವ್ಯಂಗ್ಯವಾಡಿದರು.

ಎಲ್ಲಿದ್ಯಪ್ಪಾ ನಿಖಿಲ್ ಟ್ರೋಲ್ ನೆನಪು ಮಾಡಿ ಹೆಚ್‌ಡಿಕೆಗೆ ವ್ಯಂಗ್ಯವಾಡಿದ ಅಶ್ವತ್ ನಾರಾಯಣ್

ಬರುವ ಚುನಾವಣೆಯಲ್ಲಿ ರಾಮನಗರದಲ್ಲಿ ನಾವು ಮೆಜಾರಿಟಿ ತೆಗೆದುಕೊಳ್ತೇವೆ. ಅಲ್ಲಿ ಎಲ್ಲಾ ತರ ಇದ್ದಾರೆ, ಬಂಡೆ ಜೊತೆ ಕುಮಾರಸ್ವಾಮಿನೂ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಅಧಿವೇಶನ ಕರೆಯಲು ಸರ್ಕಾರ ಹಿಂದೇಟು ಹಾಕುವ ಬಗ್ಗೆ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಎಲ್ಲಿದ್ಯಪ್ಪಾ ಕುಮಾರಸ್ವಾಮಿ?. ಅಧಿವೇಶನ ಇದ್ದಾಗಲೇ ಅವರು ಸದನಕ್ಕೆ ಬರೋದಿಲ್ಲ. ಎಲ್ಲಿದ್ಯಪ್ಪ ಕುಮಾರಸ್ವಾಮಿ ಅಂತಾ ಅವರನ್ನು ಹುಡುಕಬೇಕು. ಸದನ ಕರೀರಿ ಅನ್ನೋದು, ಆಮೇಲೆ ಬರದೆ ಇರೋದು. ಸಿದ್ದರಾಮಯ್ಯ ಮಾತಿನಂತೆ ಇವರೂ ಮಾತಾಡ್ತಿರೋದು. ಬಾಯಿಗೆ ಬಂದಂತೆ, ದಿಕ್ಕು ಇಲ್ಲದಂತೆ ಗುಂಡು ಹೊಡೆಯುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿಯವರು ನಾಟಕ ಮಾಡ್ತಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರಿಗಾದರೂ ಚೆನ್ನಾಗಿ ನಾಟಕ ಮಾಡೋಕೆ ಬರುತ್ತೆ ಅಂದರೆ ಅದು ಸಿದ್ದರಾಮಯ್ಯನವರಿಗೆ ಮಾತ್ರ. ನಾಟಕದ ಅನುಭವವನ್ನು ಅವರು ಬೇರೆಯವರಿಗೆ ಹೇಳ್ತಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಮಾಡೋದು ಪ್ರತಿಯೊಬ್ಬರ ಕರ್ತವ್ಯ. ಅದರಲ್ಲಿ ತಪ್ಪು ಕಂಡು ಹಿಡಿಯೋದು, ದೋಷ ಎತ್ತಿ ಹಿಡಿಯೋದು ಸರಿಯಲ್ಲ.ಒಳ್ಳೆಯದು ಮಾಡೋಕೆ ಆಗಿಲ್ಲ ಅಂದರೆ ಸಮಾಜದಲ್ಲಿ ಗೊಂದಲ ಸೃಷ್ಟಿಸಬೇಡಿ. ಒಳ್ಳೆಯದು ಮಾಡೋಕೆ ಯೋಗ್ಯತೆ ಇಲ್ಲ ಅಂದರೆ ಕೆಟ್ಟದ್ದನ್ನು ಹೇಳಬೇಡಿ. ನಿಮ್ಮ ಭಕ್ತಿ ದೇಶದ ಮೇಲೆ ಇದ್ರೆ, ಅದನ್ನು ಕರ್ತವ್ಯದ ಮೂಲಕ ಮಾಡಿ. ಅದು ಬಿಟ್ಟು ಇಂತಹ ಡೋಂಗಿ ಹೇಳಿಕೆಗಳನ್ನು ನಿಲ್ಲಿಸಿ ಎಂದು ಕಿಡಿಕಾರಿದರು.

click me!