ಕಾಂಗ್ರೆಸ್ ಕಾರ್ಯಕರ್ತನಿಗೆ ಸಚಿವ ಸಿ.ಸಿ. ಪಾಟೀಲ್ ಧಮ್ಕಿ ಹಾಕಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್
ಗದಗ(ನ.05): ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರು ಕಾಂಗ್ರೆಸ್ ಕಾರ್ಯಕರ್ತನಿಗೆ ಧಮ್ಕಿ ಹಾಕಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಕ್ಷೇತ್ರದ ಅಭಿವೃದ್ಧಿ ವಿಷಯವಾಗಿ ಫೇಸ್‌ಬುಕ್‌ನಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಫುಲ್ ಗರಂ ಆಗಿದ್ದಾರೆ. ಇನ್ಮೊಮ್ಮೆ ಹೇಳ್ತಿನಿ, ಮತ್ತೊಮ್ಮೆ ಹೇಳ್ತಿನಿ ಮುಂದೆ ಆಸ್ಪತ್ರೆಯಲ್ಲಿ ಬಂದು ನೋಡ್ತಿನಿ ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿರುವ ಆಡಿಯೋ ವೈರಲ್ ಆಗಿದೆ. ಅಲ್ದೆ, ಇಷ್ಟೊತ್ತು ಕೈ ಎತ್ತಿಲ್ಲ ಈಗ ಎತ್ತಬೇಕಾ? ಅಂತಾ ಕೇಳುವ ಮೂಲಕ ಪರೋಕ್ಷವಾಗಿ ಹಲ್ಲೆಗೆ ಪ್ರಜೋದನೆ ಅಂತ ಕಾಂಗ್ರೆಸ್ ಆರೋಪಿಸಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿ ನ.1 ರಂದು ಈ ಘಟನೆ ನಡೆದಿದೆ. ಘಟನಾವಳಿ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರೆಕಾರ್ಡ್ ಮಾಡಿದ್ದ ಆಡಿಯೋ ಸದ್ಯ ವೈರಲ್ ಆಗ್ತಿದೆ. ಗ್ರಾಮದ ಬಿಜೆಪಿ ಮುಖಂಡ ಪ್ರಕಾಶಗೌಡ್ ಎಂಬುವರು ಕಾಂಗ್ರೆಸ್ ಕಾರ್ಯಕರ್ತ ಪ್ರವೀಣ್‌ಗೆ ಫೋನ್ ಮಾಡಿ ಗ್ರಾಮದ ತೋಂಟದಾರ್ಯ ಮಠಕ್ಕೆ ಕರೆಸಿಕೊಂಡಿದ್ದರು. ಪ್ರವೀಣ್ ನನ್ನು ನೋಡಿದ್ದೇ ತಡ ಫುಲ್ ಗರಂ ಆದ ಸಚಿವ ಸಿ.ಸಿ. ಪಾಟೀಲ್ ಫೇಸ್‌ಬುಕ್‌ನಲ್ಲಿ ಬಹಳ ಶ್ಯಾಣ್ಯಾ ಆಗಬೇಡ, ಫುಸ್ ಬುಕ್ ಹಟ್ಟೆಗೆ ಹಾಕಲ್ಲ ಅಂತಾ ಹೇಳಿದ್ದಾರೆ. ಸಚಿವರ ಅವತಾರಕ್ಕೆ ಕಾರ್ಯಕರ್ತರ ಹೆದರದೇ ಪ್ರತಿ ಉತ್ತರ ನೀಡಿದ್ದಾನೆ. ಹೇಳುವಾಗ ಹೇಳ್ತಿನಿ, ಹೆಂಗ್ ಹೇಳಬೇಕು ಹಂಗ ಹೇಳ್ತಿನಿ ಎಂದಿದ್ದಾರೆ. ಸಚಿವರಿಗೆ ಉತ್ತರಿಸಿದ್ದ ಪ್ರವೀಣ್ ನಾನು ಏನ್ನು ತಪ್ಪು ಮಾಡಿದ್ದೇನೆ ಹೇಳಿ ಸರ್ ಅಂತ ಕೇಳಿದ್ದಾನೆ. ಮತ್ತೆ ಸಿಡಿಮಿಡಿಕೊಂಡಿದ್ದ ಸಚಿವರು ನನ್ನ ಉಸಾಬರಿಗೆ ಯಾಕೇ ಬರ್ತಿ, ನೀ ಏನು ನಮ್ಮ ಪಾರ್ಟಿ ಕಾರ್ಯಕರ್ತನಾ ಅಂತಾ ತರಾಟೆಗೆ ತೆಗೆದುಕೊಂಡಿದ್ದಾರಂತೆ.
ಮಂಡಲ್ ವರದಿ ವೇಳೆ ಸಿದ್ದರಾಮಯ್ಯ ಎಲ್ಲಿದ್ರು? ಶ್ರೀರಾಮುಲು ವಾಗ್ದಾಳಿ
ನೀವು ನಮ್ಮ ಕ್ಷೇತ್ರದ ಶಾಸಕರು ಅಂತಾ ಪ್ರಶ್ನೆ ಮಾಡ್ತೀವಿ ಅಂತಾ ಕೇಳಿದ್ದೇನೆ ಅಂತ ಕಾಂಗ್ರೆಸ್ ಕಾರ್ಯಕರ್ತ ಹೇಳಿದ್ದಾನೆ. ಫೇಸ್‌ಬುಕ್‌ನಲ್ಲಿ ಯಾಕೇ ಹೇಳ್ತಿಯಾ. ಸರ್ಕಾರದ ಕೆಲಸ ಇದ್ರೆ ಬಾ, ಕೇಳುವ ರೀತಿಯಲ್ಲಿ ಕೇಳು ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ಯಾರಿದ್ರು ನಾನು ಕೆಲಸ ಮಾಡ್ತಿನಿ ಎಂದ ಕಾಂಗ್ರೆಸ್ ಕಾರ್ಯಕರ್ತ, ಮಾಜಿ ಶಾಸಕ ಬಿ.ಆರ್. ಯಾವಗಲ್ ಅವರನ್ನು ತಲೆ ಮೇಲೆ ಹೊತ್ತುಕೊಂಡು ಓಡಾಡು, ನಾನು ಬೇಡ ಅನ್ನೊದಿಲ್ಲ. ನಿನ್ನಿಂದ ಕಾಂಗ್ರೆಸ್ ಪಕ್ಷಕ್ಕೆ ನಾಲ್ಕೈದು ವೋಟ್ ಬರಬೇಕು ಎಂದಿದ್ದಾರೆ. ನೀವು ಕಾಂಗ್ರೆಸ್ ಬಂದ್ರೆ ನಿಮಗೆ ನನ್ನ ವೋಟ್ ಅಂತ ಕಾಂಗ್ರೆಸ್ ಕಾರ್ಯಕರ್ತ ಮತ್ತೆ ಸಚಿವರನ್ನು ರೇಗಿಸಿದ್ದಾನೆ. ನಾನು ಕಾಂಗ್ರೆಸ್ ಬರಲ್ಲ ಎಂದ ಸಚಿವ ಸಿ.ಸಿ. ಪಾಟೀಲ್, ನಿನ್ನ ವಯಸ್ಸಿನ ಮಕ್ಕಳಿದ್ದಾರೆ. ಒಂದು ಬಾರಿ ಹೇಳ್ತೀನಿ, ಎರಡು ಬಾರಿ ಹೇಳ್ತೀನಿ. ಮುಂದೆ ಆಸ್ಪತ್ರೆಗೆ ಬಂದು ನೋಡ್ಬೇಕಾಗುತ್ತೆ ಅಂದಿದ್ದಾರೆ. ಸದ್ಯ ಸಚಿವರಾಡಿರುವ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನರಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಸಿ.ಪಾಟೀಲ್ ಸಚಿವರ ವರ್ತನೆ ಖಂಡಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಾಜಿ ಶಾಸಕ ಬಿ.ಆರ್. ಯಾವಗಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನರಗುಂದ ಸಿಪಿಐ ಮಠಪತಿ ಅವರಿಗೆ ಮನವಿ ಸಲ್ಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿದ್ದಾರೆ.