'ಕಾಂಗ್ರೆಸ್‌ ಗ್ಯಾರಂಟಿ' ಮತ್ತೆ ಮುಳುಗುವುದು ಖಚಿತ: ಸಚಿವ ಸಿ.ಸಿ.ಪಾಟೀಲ್‌

By Kannadaprabha News  |  First Published Mar 8, 2023, 1:58 PM IST

ಕಾಂಗ್ರೆಸ್‌ ಗ್ಯಾರಂಟಿ ಮತ್ತೆ ಮುಳುಗುವುದು ಗ್ಯಾರಂಟಿ. ಹತ್ತು ಕೆಜಿ ಅಕ್ಕಿ, 200 ಯೂನಿಟ್‌ ಉಚಿತ ವಿದ್ಯುತ್‌, ಗೃಹಿಣಿಯರಿಗೆ ಪ್ರತಿ ತಿಂಗಳು ಎರಡು ಸಾವಿರ ರುಪಾಯಿ ನೀಡುವುದು ಸೇರಿದಂತೆ ಹಲವು ಹುಸಿ ಭರವಸೆಗಳನ್ನು ನೀಡಿ ಮತದಾರರನ್ನು ಕಾಂಗ್ರೆಸ್‌ ವಂಚಿಸುತ್ತಿದೆ ಎಂದು ಪಕ್ಷದ ನಾಯಕರ ವಿರುದ್ಧ ರಾಜ್ಯ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ಹರಿಹಾಯ್ದರು.


ಹೊಳೆಆಲೂರ (ಮಾ.08): ಕಾಂಗ್ರೆಸ್‌ ಗ್ಯಾರಂಟಿ ಮತ್ತೆ ಮುಳುಗುವುದು ಗ್ಯಾರಂಟಿ. ಹತ್ತು ಕೆಜಿ ಅಕ್ಕಿ, 200 ಯೂನಿಟ್‌ ಉಚಿತ ವಿದ್ಯುತ್‌, ಗೃಹಿಣಿಯರಿಗೆ ಪ್ರತಿ ತಿಂಗಳು ಎರಡು ಸಾವಿರ ರುಪಾಯಿ ನೀಡುವುದು ಸೇರಿದಂತೆ ಹಲವು ಹುಸಿ ಭರವಸೆಗಳನ್ನು ನೀಡಿ ಮತದಾರರನ್ನು ಕಾಂಗ್ರೆಸ್‌ ವಂಚಿಸುತ್ತಿದೆ ಎಂದು ಪಕ್ಷದ ನಾಯಕರ ವಿರುದ್ಧ ರಾಜ್ಯ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ಹರಿಹಾಯ್ದರು.

ಹೊಳೆಆಲೂರ ಗ್ರಾಮದಲ್ಲಿ 13.58 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಡಿಪ್ಲೊಮಾ ಕಾಲೇಜು ಉದ್ಘಾಟನೆ . 26 ಕೋಟಿ ವೆಚ್ಚದಲ್ಲಿ ಹೊಳೆಆಲೂರ ನೀರಲಗಿ ರಸ್ತೆಯ ಮಲಪ್ರಭಾ ನದಿಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ, 85 ಲಕ್ಷ ವೆಚ್ಚದಲ್ಲಿ ಗಜೇಂದ್ರಗಡ ಸೊರಬ ರಸ್ತೆ ಸುಧಾರಣಾ ಕಾಮಗಾರಿ . 9 ಕೋಟಿ ವೆಚ್ಚದಲ್ಲಿ ಹೊಳೆಆಲೂರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೇಲ್ದರ್ಜೆಗೇರಿಸಿ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿಯ ಭೂಮಿಪೂಜೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

undefined

ಮತದಾರರನ್ನು ಆಕರ್ಷಿಸಲು ಕಣ್ಮನ ಸೆಳೆಯುವಂತೆ ಸಿಂಗಾರಗೊಳ್ಳುತ್ತಿವೆ ಮತಗಟ್ಟೆಗಳು!

ಕಾಂಗ್ರೆಸ್‌ ಮುಖಂಡರು ಆಡಳಿತದಲ್ಲಿ ಅನುಭವಿಗಳಾಗಿದ್ದು, ಒಂಭತ್ತು ಬಾರಿ ಬಜೆಟ್‌ ಮಂಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಷ್ಟುದೊಡ್ಡ ಪ್ರಮಾಣದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ರಾಜ್ಯದ ಬಜೆಟ್ಟಿನಲ್ಲಿ ಅಸಾಧ್ಯ ಎಂಬುದು ತಿಳಿದಿದ್ದರೂ ಜನರ ದಾರಿ ತಪ್ಪಿಸುವ ಸುಳ್ಳು ಭರವಸೆಗಳನ್ನು ನೀಡುತ್ತಿರುವುದು ಕಾಂಗ್ರೆಸ್‌ ನಾಯಕರ ಹತಾಶೆಯ ಪ್ರತಿಬಿಂಬವಾಗಿದ್ದು, ಅವರು ಕೇವಲ ಭರವಸೆಗಳನ್ನು ಮಾತ್ರ ನೀಡಬಲ್ಲರು, ಕಳೆದ ಬಾರಿ ಸೇತುವೆ ನಿರ್ಮಿಸುವ ಮಾತನಾಡಿದ್ದ ಕಾಂಗ್ರೆಸ್‌ ಭರವಸೆ ಈಡೇರಿಸದೇ ವಂಚಿಸಿದ್ದು, ನಾನು ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ಪಡೆದು ಇಂದು ಭೂಮಿಪೂಜೆ ನೆರವೇರಿಸಿದ್ದೇನೆ. 

ಮತಕ್ಷೇತ್ರದ ಜನರ ಆಂಕಾಕ್ಷೆಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ನಾನು ಮತ್ತು ನಮ್ಮ ಸರ್ಕಾರ ಮಾಡುತ್ತಿದ್ದು, ರಾಜ್ಯದ ಉದ್ದಗಲಕ್ಕೂ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿದ್ದು, ನರಗುಂದ ಮತಕ್ಷೇತ್ರದ ಅಭಿವೃದ್ಧಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಅನುದಾನ ತಂದಿದ್ದು ಅಭಿವೃದ್ಧಿಗೊಳಿಸಿದ್ದೇನೆ. ಅಭಿವೃದ್ಧಿಯ ಆಧಾರದ ಮೇಲೆ ಜನತೆ ಬಿಜೆಪಿಯನ್ನು ಬೆಂಬಲಿಸಲಿದ್ದು, ರಾಜ್ಯದಲ್ಲಿ ನಡೆಯುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 125ರಿಂದ 130 ಸ್ಥಾನಗಳಲ್ಲಿ ಜಯಗಳಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.

ಅನಧಿಕೃತ ಬಂದೂಕುಗಳ ವಶದ ಬೆನ್ನಲ್ಲೇ ಮೀಸಲು ಅರಣ್ಯದಲ್ಲಿ 60ಕ್ಕೂ ಹೆಚ್ಚು ಫೈರಿಂಗ್ ಕಾಟ್ರೇಜ್ ಪತ್ತೆ

ಕಾರ್ಯಕ್ರಮದಲ್ಲಿ ಯಚ್ಚರೇಶ್ವರ ಮಠದ ಯಚ್ಚರೇಶ್ವರ ಶ್ರೀಗಳು, ಬಿಜೆಪಿ ಮಂಡಲ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ಪಕ್ಷದ ಮುಖಂಡರಾದ ಎ.ಪಿ. ಪಾಟೀಲ, ನಿಂಗಪ್ಪ ಕೆಂಗಾರ, ಉಮೇಶಗೌಡ ಪಾಟೀಲ, ಶ್ರೀಪತಿ ಉಡುಪಿ, ಬಸವಂತಪ್ಪ ತಳವಾರ, ವಿ.ಎಸ್‌. ಹಿರೇಮಠ, ಶಶಿಧರ ಪಾಟೀಲ, ರಾಮನಗೌಡ ಪಾಟೀಲ, ಶಿವಕುಮಾರ ನೀಲಗುಂದ, ಸೋಮು ಹುಡೇದ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಗಪ್ಪ ದುಗುಲದ, ಮೋತಿಲಾಲ್‌ ರಾವಳ್‌, ಕೆ.ಸಿ. ಪಾಟೀಲ ಗ್ರಾಮ ಪಂಚಾಯತಿ ಸದಸ್ಯರು, ಕಾರ್ಯಕರ್ತರು ಇದ್ದರು.

click me!