‘ಕೆಳ ಜಾತಿಗಳನ್ನು ಬಳಸಿಕೊಂಡು ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಅವರಿಗೆ ನ್ಯಾಯಕೊಡಿಸುವ ಬಗ್ಗೆ ಯೋಚಿಸದೇ, ಸಂಪೂರ್ಣ ದ್ರೋಹ ಬಗೆದರು’ ಎಂದು ಸಚಿವ ಬಿ.ಶ್ರೀರಾಮುಲು ವಾಗ್ದಾಳಿ ನಡೆಸಿದರು.
ಗದಗ (ಅ.29): ‘ಕೆಳ ಜಾತಿಗಳನ್ನು ಬಳಸಿಕೊಂಡು ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಅವರಿಗೆ ನ್ಯಾಯಕೊಡಿಸುವ ಬಗ್ಗೆ ಯೋಚಿಸದೇ, ಸಂಪೂರ್ಣ ದ್ರೋಹ ಬಗೆದರು’ ಎಂದು ಸಚಿವ ಬಿ.ಶ್ರೀರಾಮುಲು ವಾಗ್ದಾಳಿ ನಡೆಸಿದರು. ಗದಗ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಅಂಬೇಡ್ಕರ್ ಆಶಯದಂತೆ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ನೀಡಲಾಗಿದೆ. ಅಧಿಕಾರದಲ್ಲಿದ್ದಾಗ ಮೀಸಲಾತಿ ನೀಡದ ಸಿದ್ದರಾಮಯ್ಯ ಅವರು ಬಿಜೆಪಿ ಮೀಸಲಾತಿ ಹೆಚ್ಚಿಸಿದ ಬಳಿಕ ಈ ವಿಚಾರದಲ್ಲಿ ನಾವೂ ಹೋರಾಡಿದ್ದೇವೆ ಎಂದು ಅಪಸ್ವರ ಎಳೆಯುತ್ತಿದ್ದಾರೆ’ ಎಂದು ಕಿಡಿಕಾರಿದರು.
‘ಕಾಂತರಾಜ ವರದಿಯನ್ನು ಕಾರ್ಯಗತಗೊಳಿಸಲಿಲ್ಲ. ಜಸ್ಟೀಸ್ ನಾಗಮೋಹನ್ ದಾಸ್ ವರದಿ ಬಗ್ಗೆ ಚಕಾರ ಎತ್ತಲಿಲ್ಲ ಎಂದರು. ಮಂಡಲ್ ಕಮಿಷನ್ ವಿರೋಧಿಸಿದಾಗ ರಾಮಾ ಜೊಯಿಸರು ಎಲ್ಲಿದ್ದರು ಎಂಬ ಹೇಳಿಕೆಗೆ ತಿರುಗೇಟು ನೀಡಿದ ಶ್ರೀರಾಮುಲು, ಮಂಡಲ್ ಕಮಿಷನ್ ಆಗುವ ಸಂದರ್ಭದಲ್ಲಿ ಸಿದ್ದರಾಮಯ್ಯ ಎಲ್ಲಿದ್ದರು. ಸಿದ್ದರಾಮಯ್ಯನ ಕಥೆ ಕೇಳುವವರು ಇಲ್ಲಿ ಯಾರೂ ಇಲ್ಲ. ಅಹಂಕಾರ ಜಾಸ್ತಿಯಾಗಿದ್ದು, ಚುನಾವಣೆಯಲ್ಲಿ ಜನರು ಅಹಂಕಾರ ಇಳಿಸಲಿದ್ದಾರೆ’ ಎಂದು ಏಕವಚನದಲ್ಲಿ ನಿಂದಿಸಿದರು. ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ 223 ದಿನಗಳ ಹೋರಾಟದಿಂದ ಮೀಸಲಾತಿ ಸಿಕ್ಕಿಲ್ಲ. ಇದರ ಹಿಂದೆ 40 ವರ್ಷಗಳ ಹೋರಾಟದ ಇತಿಹಾಸವಿದೆ. ನಮ್ಮ ಹೋರಾಟಕ್ಕೆ ಬಿಜೆಪಿ ಸರ್ಕಾರ ಬೆಲೆ ನೀಡಿದೆ’ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಿದ್ದು, ಎಚ್ಡಿಕೆ ಸತ್ಯಹರಿಶ್ಚಂದ್ರರ ಮನೇಲಿ ಹುಟ್ಟಿದ್ದರಾ?: ರಾಜ್ಯ ಸರ್ಕಾರಕ್ಕೆ ಕಟ್ಟೆಹೆಸರಲು ತರಲು ಕೆಲವರು ಷಡ್ಯಂತ್ರ ರೂಪಿಸಿದ್ದಾರೆ. ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿರುವ ಗುತ್ತಿಗೆದಾರರ ಸಂಘ ಸ್ವಯಂ ಪ್ರೇರಣೆಯಿಂದ ಹೇಳಿಕೆ ಕೊಟ್ಟಿದೆಯಾ ಅಥವಾ ಯಾರದೋ ಪ್ರಚೋಧನೆಯಿಂದ ಹೇಳಿಕೆ ಕೊಟ್ಟಿದೆಯಾ ಎಂದು ಸಾರಿಗೆ ಸಚಿವ ಬಿ.ಶ್ರೀರಾಮಲು ಪ್ರಶ್ನಿಸಿದರು. ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಹೋಬಳಿಯ ಮಲ್ಲಸಂದ್ರ ಗ್ರಾಮದಲ್ಲಿ 22 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಿಸಿರುವ ಪರಿಶಿಷ್ಟವರ್ಗದ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯನ್ನು ಗುರುವಾರು ಉದ್ಘಾಟಿಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಅವಧಿಯಲ್ಲಿ ರಾಜ್ಯ ಲೂಟಿ: ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ, ರಾಜ್ಯ ಬಿಜೆಪಿ ಸರ್ಕಾರವನ್ನು ಶೇ.40 ಪರ್ಸೆಂಟ್ ಸರ್ಕಾರ ಎಂದು ಕರೆದಿರುವ ಕುರಿತು ಕೇಳಿದ ಪ್ರಶ್ನೆಗೆ ತೀಕ್ಷ ಪ್ರತಿಕ್ರಿಯೆ ನೀಡಿದ ರಾಮಲು, ದೆವ್ವದ ಬಾಯಲ್ಲಿ ಭಗವದ್ಗೀತೆ ಪಠಿಸಿದ್ದಂತೆ ಇಬ್ಬರೂ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಸತ್ಯಹರಿಶ್ಚಂದ್ರ ಮನೆಯಲ್ಲಿ ಹುಟ್ಟಿದ್ದಾರೆ. ಇವರ ಸರ್ಕಾರದ ಅವಧಿಯಲ್ಲಿ ರಾಜ್ಯವನ್ನು ಲೂಟಿ ಮಾಡಿದ್ದಾರೆಂದು ಸಚಿವರು ವಾಗ್ದಾಳಿ ನಡೆಸಿದರು.
ಆರೋಪ ಮಾಡುವವರ ವಿರುದ್ಧ ಕೇಸ್: ನಮ್ಮ ಸರ್ಕಾರದ ಯಾವುದೇ ಮಂತ್ರಿ ಅಥವಾ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಸಿದ್ದರೆ ಆ ಬಗ್ಗೆ ದಾಖಲೆಗಳು ಇದ್ದರೆ ಕೂಡಲೇ ಬಹಿರಂಗ ಪಡಿಸಲಿಯೆಂದು ಶ್ರೀರಾಮಲು ಗುತ್ತಿಗೆದಾರರ ಸಂಘಕ್ಕೆ ಸವಾಲು ಹಾಕಿದರು. ಕೇವಲ ಆರೋಪ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ ಕೆಟ್ಟಹೆಸರು ತರಲು ಯಾರೋ ಹೇಳಿಕೊಟ್ಟಿದ್ದನ್ನು ಇವರು ಹೇಳುತ್ತಿದ್ದಾರೆಂದು ರಾಮಲು ಕಿಡಿಕಾರಿದರು. ವಿನಕಾರಣ ಸುಳ್ಳು ಆರೋಪ ಮಾಡುವರ ಮೇಲೆ ಸರ್ಕಾರ ಕೇಸ್ ದಾಖಲಿಸಲಿದೆ ಎಂದು ಎಚ್ಚರಿಸಿದರು.
ಬಿಡಾಡಿ ದನಗಳಿಗೂ ಒಕ್ಕರಿಸಿದ ಚರ್ಮಗಂಟು ರೋಗ, ಆತಂಕ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯನ್ನು ನಷ್ಟದಿಂದ ಮುಕ್ತಿಗೊಳಿಸಿ ಲಾಭದಾಯಕಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಅನುಪಯೋಗಿ ಬಸ್‌ಗಳನ್ನು ಬದಲಿಸಿ ನೂತನವಾಗಿ ಹೆಚ್ಚುವರಿ ಬಸ್‌ಗಳನ್ನು ಜನರ ಸೇವೆಗೆ ಒದಗಿಸಲಾಗುವುದು. ಸಾರಿಗೆ ಸೇವೆಯನ್ನು ಉತ್ತಮ ತಂತ್ರಜ್ಞಾನದೊಂದಿಗೆ ಆಧುನೀಕರಣಗೊಳಿಸಲಾಗುವುದು ಎಂದರು.