ಬಿಜೆಪಿ ವಿರುದ್ಧ ತೊಡೆತಟ್ಟಿ ಸ್ವಂತ ಪಕ್ಷ ಸ್ಥಾಪಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪತ್ನಿಯನ್ನು ಚುನಾವಣೆ ಕಣಕ್ಕಿಳಿಸಿದರು. ಇತ್ತೀಚೆಗಷ್ಟೇ ಶ್ರೀರಾಮುಲು ಲೋಕಸಭಾ ಚುನಾವಣೆಯಲ್ಲಿ ಸೋಲುತ್ತಾರೆ ಎಂದಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ನೀಡಿದ್ದರು. ಇದೀಗ ಬಿಜೆಪಿ ಸೇರಿಕೊಂಡಿದ್ದಾರೆ ಎಂದು ಟೀಕಿಸಿದ ಸಚಿವ ಬಿ.ನಾಗೇಂದ್ರ
ಬಳ್ಳಾರಿ(ಮಾ.29): ಜನಾರ್ದನ ರೆಡ್ಡಿ ಅವರಂಥವರು ನೂರು ಜನ ಬಿಜೆಪಿ ಸೇರಿದರೂ ಕಾಂಗ್ರೆಸ್‌ಗೆ ಏನೂ ಮಾಡೋಕ್ಕಾಗಲ್ಲ ಎಂದು ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ. ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಕಾಡ ಮಲಗಿಸುವುದಾಗಿ ಹೇಳಿದ ರೆಡ್ಡಿ ಇದೀಗ ಅದೇ ಪಕ್ಷವನ್ನು ಸೇರಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ತೊಡೆತಟ್ಟಿ ಸ್ವಂತ ಪಕ್ಷ ಸ್ಥಾಪಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪತ್ನಿಯನ್ನು ಚುನಾವಣೆ ಕಣಕ್ಕಿಳಿಸಿದರು. ಇತ್ತೀಚೆಗಷ್ಟೇ ಶ್ರೀರಾಮುಲು ಲೋಕಸಭಾ ಚುನಾವಣೆಯಲ್ಲಿ ಸೋಲುತ್ತಾರೆ ಎಂದಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ನೀಡಿದ್ದರು. ಇದೀಗ ಬಿಜೆಪಿ ಸೇರಿಕೊಂಡಿದ್ದಾರೆ ಎಂದು ಟೀಕಿಸಿದರು.
undefined
ಕಾಂಗ್ರೆಸ್‌ಗೆ ಕೈ ಕೊಟ್ಟು, ಬಿಜೆಪಿಯಲ್ಲಿ ಕೆಆರ್‌ಪಿಪಿ ವಿಲೀನ ಮಾಡಿದ ಶಾಸಕ ಜನಾರ್ಧನರೆಡ್ಡಿ!
ಜನಾರ್ದನ ರೆಡ್ಡಿ ವಿರುದ್ಧ ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳಿವೆ. ಪ್ರಕರಣದ ಖುಲಾಸೆಯ ಆಸೆ ಅಥವಾ ಬಿಜೆಪಿಯ ಭಯದಿಂದ ಸೇರಿಕೊಂಡಿರಬಹುದು. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ.ಮಿತ್ರರಲ್ಲ ಎಂಬುದನ್ನು ರೆಡ್ಡಿ ಸಾಬೀತು ಮಾಡಿದ್ದಾರೆ. ಅವರಿಗೆ ಬಿಜೆಪಿಯಲ್ಲಿ ಒಳ್ಳೆಯದಾಗಲಿ ಎಂದರು.
ಜಾತ್ಯತೀತ ಮನೋಭಾವದ ರೆಡ್ಡಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದವರು ಮತ ನೀಡಿದ್ದಾರೆ. ಈಗ ಅವರಿಗೇನು ಉತ್ತರ ನೀಡುತ್ತಾರೆ ಎಂದು ಪ್ರಶ್ನಿಸಿದರು. ಜನಾರ್ದನ ರೆಡ್ಡಿ ಬಿಜೆಪಿ ಸೇರಿದ್ದು ನಮಗೆ ಇಷ್ಟವಿಲ್ಲ. ಹಾಗಂತ ನಮಗೆ ಯಾವ ನಷ್ಟವೂ ಇಲ್ಲ. ಇಂತಹವರು ಎಷ್ಟೇ ಜನರು ಬಿಜೆಪಿ ಹೋದರೂ ನಮ್ಮ ಪಕ್ಷಕ್ಕೆ ಯಾವ ಸಮಸ್ಯೆಯೂ ಇಲ್ಲ ಎಂದು ಸಚಿವರು ತಿಳಿಸಿದರು.