
ವಿಜಯಪುರ(ಮಾ.29): ನಾನು ಬಂಜಾರ ಸಮುದಾಯಕ್ಕೆ ಬೈದಿಲ್ಲ. ಮತ ಹಾಕಬೇಡಿ ಎಂದಿದ್ದೇನೆ ಎನ್ನುವುದು ಸುಳ್ಳು ಸುದ್ದಿ. ಬಂಜಾರ ಸಮುದಾಯದ ಅನೇಕರು ಕರೆ ಮಾಡಿ ನನಗೆ ಬೆಂಬಲ ನೀಡಿದ್ದಾರೆ. ನನ್ನ ವಿರುದ್ಧ ಟಿಕೆಟ್ ಕೇಳಿದ ಬಾಬುರಾಜೇಂದ್ರ ನಾಯ್ಕ ನಮ್ಮ ಜಿಲ್ಲೆಯವನಲ್ಲ. ನಾಯ್ಕ ಬಾಗಲಕೋಟೆ ಜಿಲ್ಲೆಯವ, ನಮ್ಮ ಜಿಲ್ಲೆಗೂ ಅವನಿಗೆ ಏನೂ ಸಂಬಂಧ ಇಲ್ಲ ಎಂದ ಹಾಲಿ ಬಿಜೆಪಿ ಸಂಸದ ಹಾಗೂ ವಿಜಯಪುರ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಸ್ಪಷ್ಟಪಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಅವರು, ಹೊರಗಿನಿಂದ ಬಂದು ಟಿಕೆಟ್ ಕೇಳಿದ್ದಾನೆ, ಅವನನ್ನ ಹೊರಗೆ ಹಾಕಿ ಎಂದಿದ್ದೇನೆ. ಇದರ ಹಿಂದೆ ಕಾಂಗ್ರೆಸ್ ಷಡ್ಯಂತ್ರ ಅಡಗಿದೆ ಎಂದ ಜಿಗಜಿಣಗಿ ಆರೋಪಿಸಿದ್ದಾರೆ .
ಪಕ್ಷ ಕರೆದು ಟಿಕೆಟ್ ಕೊಟ್ಟರೆ ನಾನೇಕೆ ಬೇಡ ಅನ್ನಲಿ: ವಿಜಯಪುರ ಸಂಸದ ಜಿಗಜಿಣಗಿ
ನನ್ನ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ನಿರಾಸೆ ಆಗಿದೆ. ನಿನ್ನೆ ಸಭೆ ಮಾಡಿದ್ದು ಕಾಂಗ್ರೆಸ್ಸಿಗರು, ಕಾಂಗ್ರೆಸ್ ಪಕ್ಷದ ಬಂಜಾರ ಮುಖಂಡರು. ನೂರಕ್ಕೆ ನೂರು ಬಂಜಾರ ಸಮುದಾಯದವರು ನನಗೆ ಬೆಂಬಲ ಕೊಡ್ತಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.