ಸಚಿವ ನಾಗೇಂದ್ರ ರಾಜೀನಾಮೆ ನೀಡಲಿ: ಮಾಜಿ ಸಿಎಂ ಬೊಮ್ಮಾಯಿ

By Kannadaprabha News  |  First Published Jun 1, 2024, 7:07 PM IST

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಈ ರೀತಿ ಘಟನೆಗಳು ಆದಾಗ ಹಿಂದಿನ ಸರ್ಕಾರಗಳು ಹೇಗೆ ನಡೆದುಕೊಂಡಿದ್ದಾವೆಯೋ ಹಾಗೆ ನಡೆಯಬೇಕು. ಸಚಿವ ನಾಗೇಂದ್ರ ರಾಜೀನಾಮೆ ಪಡೆಯಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. 


ಹೊಸಪೇಟೆ (ಜೂ.01): ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಈ ರೀತಿ ಘಟನೆಗಳು ಆದಾಗ ಹಿಂದಿನ ಸರ್ಕಾರಗಳು ಹೇಗೆ ನಡೆದುಕೊಂಡಿದ್ದಾವೆಯೋ ಹಾಗೆ ನಡೆಯಬೇಕು. ಸಚಿವ ನಾಗೇಂದ್ರ ರಾಜೀನಾಮೆ ಪಡೆಯಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಾವಿನ ವಿಚಾರದಲ್ಲಿ ಈಶ್ವರಪ್ಪ ಅವರದ್ದು ತಪ್ಪಿರಲಿಲ್ಲ. ಆದರೂ ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. 

ಈಶ್ವರಪ್ಪ ವಿಚಾರದಲ್ಲಿ ವಿಪಕ್ಷ ನಾಯಕರಿದ್ದ ಸಿದ್ದರಾಮಯ್ಯ ಮಾಡಿದ ರೋಷಾವೇಷ ಈಗ ಏಕೆ ಇಲ್ಲ? ಈಗ ಅವರೇ ಸಿಎಂ, ಅವರ ಸಚಿವ ಸಂಪುಟದಲ್ಲಿ ಪರಿಶಿಷ್ಟ ಪಂಗಡ ನಿಗಮದ ಹಣ ಲೂಟಿ ಆಗಿದೆ. 14 ಅಕೌಂಟ್ ಗಳ ಮೂಲಕ ಹಗಲು ದರೋಡೆಯಾಗಿದೆ. ಡೆತ್ ನೋಟ್ ನಲ್ಲಿ ಎರಡು ಬಾರಿ ಸಚಿವ ನಾಗೇಂದ್ರ ಮೌಖಿಕ ಆದೇಶ ಅಂತ ಉಲ್ಲೇಖ ಮಾಡಿದ್ದಾರೆ. ಆದರೆ ಇವರು ರಾಜೀನಾಮೆ ತಗೆದುಕೊಳ್ಳುವ ನೈತಿಕತೆ ಇಲ್ಲ. ಇದೊಂದು ಭ್ರಷ್ಟಾಚಾರ ಕೂಟದ ಸರ್ಕಾರ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

ನಮಾಜ್‌ ವಿವಾದದ ಹಿಂದೆ ಸಾಮರಸ್ಯ ಹದಗೆಡಿಸುವ ಉದ್ದೇಶ: ರಮಾನಾಥ ರೈ

ಈ ಪ್ರಕರಣಕ್ಕೂ, ಈಶ್ವರಪ್ಪನವರ ಪ್ರಕರಣಕ್ಕೂ ಹೊಂದಾಣಿಕೆ ಮಾಡ್ತಾರೆ, ಇವರಿಗೆ ನಾಚಿಕೆಯಾಗಬೇಕು. ಬಹುಕೋಟಿ ಹಗರಣ ಇದಾಗಿದೆ. ಒಂದೇ ದಿನದಲ್ಲಿ 14 ಅಕೌಂಟ್ ಗೆ ಮಾಯ ಆಗುತ್ತದೆ. ಸಂಶಯಾಸ್ಪದ ಅಕೌಂಟ್ ಗಳಿಗೆ ಹೋಗಿದೆ. ಈ ಪ್ರಕರಣ ಸಿಬಿಐಗೆ ಹೋಗುವಂತಹ ಮುಖ್ಯ ಪ್ರಕರಣ ಆಗಿದೆ. ಒಂದು ಬ್ಯಾಂಕ್ ಮುಖಾಂತರ ಬೇರೆ ರಾಜ್ಯಕ್ಕೆ ಹೋಗಿದೆ. ₹10 ಕೋಟಿಗೂ ಹೆಚ್ಚು ಹಗರಣ ಆಗಿದ್ದರೆ ಅದು ಸಿಬಿಐಗೆ ಹೋಗಬೇಕು. ಆದರೆ, ಸಿಬಿಐಗೆ ಏಕೆ ಕೊಡ್ತಿಲ್ಲ ಎಂದರು.

ಸಿಬಿಐಗೆ ಹೋಗುವಂತಹ ಯೋಗ್ಯ ಪ್ರಕರಣ ಇದಾಗಿದೆ. ಚುನಾವಣೆ ಸಮಯದಲ್ಲಿ ಹೈದ್ರಾಬಾದ್ ನ ಒಂದು ಸಹಕಾರಿ ಬ್ಯಾಂಕ್ ಗೆ ವರ್ಗಾವಣೆ ಆಗಿದೆ. ರಾಜಕೀಯದಿಂದ ಚುನಾವಣೆಗಾಗಿ ನಡೆದಿರುವ ದರೋಡೆ ಪ್ರಕರಣ ಇದಾಗಿದೆ. ಏನೇ ಸಮಜಾಯಿಸಿ ಕೊಟ್ಟರೂ ಡಿಜಿಟಲ್ ಟ್ರ್ಯಾಕ್, ಡಿಜಿಟಲ್ ಎವಿಡೆನ್ಸ್ ಕಾರಣ ಸಿಒಡಿಯಿಂದ ತನಿಖೆಯಾಗುವ ಪ್ರಕರಣ ಇದಲ್ಲ ಎಂದರು.

ಸಚಿವ ಬಿ.ನಾಗೇಂದ್ರ ರಾಜೀನಾಮೆ ಕೊಡಬೇಕು, ಸಿಬಿಐ ತನಿಖೆಗೆ ಒಳಪಡಿಸಿ ಎಲ್ಲ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಹಣ ವಾಪಾಸ್ ಬರಬೇಕು. ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿದರೆ ಹಣ ವಾಪಸ್ ತರಬಹುದು, ಚುನಾವಣೆಗೆ ಬಳಕೆಯಾಗಿದ್ರೆ ಏನು ಮಾಡೋಕಾಗೋಲ್ಲ ಮನಿ ಟ್ರೈಲ್‌ ಫಾಲೋ ಮಾಡಬೇಕು. ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್ಟಿ ಸಮಾಜಕ್ಕೆ ವೋಟ್ ಬ್ಯಾಂಕ್ ಆಗಿ ಪರಿವರ್ತನೆ ಮಾಡುವುದನ್ನು ಬಿಟ್ಟರೆ ಬೇರೇನೂ ಪ್ರಯೋಜನವಿಲ್ಲ ಎಂದರು. ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಎಸ್‌ಐಟಿ ತನಿಖೆ ಆಗುತ್ತಿದೆ. ಪ್ರಕರಣ ತನಿಖೆ ಹಂತದಲ್ಲಿದೆ. ಅಪರಾಧ ಮಾಡಿದವರು, ಶೋಷಣೆ ಮಾಡಿದವರು, ಅದನ್ನು ಪ್ರಚಾರ ಮಾಡಿದವರು ಎಲ್ಲ ವಿಚಾರದಲ್ಲಿ ಕಾನೂನು ಇದೆ ತನಿಖೆ ನಡೆಯುತ್ತಿದೆ. ಕಾನೂನು ಎಲ್ಲರಿಗೂ ಒಂದೇ ಎಂದರು.

ಲೋಕಸಭಾ ಚುನಾವಣೆಯಲ್ಲಿ ನಮ್ಮದು ಜನಬಲ, ಕಾಂಗ್ರೆಸ್‌ನದ್ದು ಹಣಬಲ: ಸಿ.ಪಿ.ಯೋಗೇಶ್ವರ್

ರಾಜ್ಯದಲ್ಲಿ ಸಾಮೂಹಿಕ ಹತ್ಯೆ ಆಗುತ್ತಿದೆ. ಸಮಾಜ ಘಾತುಕರಿಗೆ ಹೆದರಿಕೆ ಇಲ್ಲ. ಪೊಲೀಸ್ ಠಾಣೆಗಳಲ್ಲಿ ಅವರಿಗೆ ರಾಜ ಮರ್ಯಾದೆ ಸಿಗುತ್ತಿದೆ. ಸಮಾಜಘಾತುಕ ಶಕ್ತಿಗಳಿಗೆ ಎಲ್ಲಿಯವರೆಗೆ ಕಠಿಣ ಕ್ರಮ ಕೈಗೊಳ್ಳಲ್ಲವೋ ಅಲ್ಲಿಯವರೆಗೆ ಈ ರೀತಿಯ ಕೃತ್ಯ ತಪ್ಪಲ್ಲ. ಭಯ ಹುಟ್ಟಿಸಬೇಕಿದೆ, ಇಲಾಖೆಯ ಸಡಿಲತನ ಕಂಟ್ರೋಲ್ ಆಗಬೇಕು. ರಾಜ್ಯ ಸರ್ಕಾರವೇ ಇದಕ್ಕೆ ಹೊಣೆ, ಅವರನ್ನು ನಿಯಂತ್ರಿಸುವ ಅವಶ್ಯಕತೆ ಇದೆ ಎಂದರು. ರಾಹುಲ್ ಗಾಂಧಿಯ ಬೇಜವಾಬ್ದಾರಿ ಹೇಳಿಕೆಯಿಂದ ಮಹಿಳೆಯರು ಸಾಲುಗಟ್ಟಿ ನಿಲ್ಲುವಂತಾಗಿದೆ. ಏನು ಹೇಳಬೇಕೋ, ಬೇಡವೋ ಅನ್ನುವುದನ್ನು ಯೋಚಿಸಿ ಮಾತನಾಡಬೇಕು ಎಂದರು.

click me!