ಸಚಿವ ಆನಂದ್ ಸಿಂಗ್ ಸುದ್ದಿಗೋಷ್ಠಿ
ಖಾತೆ ಕ್ಯಾತೆ ಬಗ್ಗೆ ಸ್ಪಷ್ಟನೆ ಕೊಟ್ಟ ಆನಂದ್ ಸಿಂಗ್
ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ನಿರಾಕರಿಸಿದ್ದ ಆನಂದ್ ಸಿಂಗ್
ಬೆಂಗಳೂರು, (ಆ.27): ಸಚಿವ ಆನಂದ್ ಸಿಂಗ್ ಕೊನೆಗೂ ಕೊಟ್ಟ ಖಾತೆಯಲ್ಲೇ ಮುಂದುವರಿದಿದ್ದು, ಖಾತೆ-ಕ್ಯಾತೆ ಹಾಗೂ ರಾಜೀನಾಮೆ ಪ್ರಹಸನ ಕೊನೆಗೂ ಸುಖಾಂತ್ಯ ಕಂಡಿದೆ. ಕೊಟ್ಟ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇನ್ನು ಈ ಬಗ್ಗೆ ಇಂದು (ಆ.27) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಮುಗಿದ ಮೇಲೆ ಖಾತೆಯ ಬಗ್ಗೆ ಪೋಸ್ಟ್ ಮಾರ್ಟಮ್ ಮಾಡಬೇಡಿ. ಇದು ಬೆಸ್ಟ್ ಖಾತೆ ಬಿಡ್ರಿ. ಕೆಲವೊಂದು ಬಹಿರಂಗ ಮಾತಾನಾಡಲ್ಲ ಎಂದರು.
ಕೇರ್ ಮಾಡದ ಬಿಜೆಪಿ ಲೀಡರ್ಸ್ ಖಡಕ್ ಎಚ್ಚರಿಕೆ : ಥಂಡಾ ಹೊಡೆದ ಆನಂದ್ ಸಿಂಗ್
ಸಿಎಂ ದೆಹಲಿಯಿಂದ ವಾಪಾಸ್ಸಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಆನಂದ್ ಸಿಂಗ್, ನಾನು ಸಿಎಂ ಅವನ್ನು ಭೇಟಿ ಆಗಿಲ್ಲ. ನಾನು ಸಂದೇಶ ಕೊಡೋಕೆ ಹೋಗ್ತೀನಿ ತಗೋಳೋಕ್ಕೆ ಹೋಗೋದಿಲ್ಲ ಎಂದು ಹೇಳಿದರು.
ನನಗೆ ಕೊಟ್ಡಿರುವ ಖಾತೆಗಳು ಅತ್ಯುತ್ತಮ ಖಾತೆ. ಕೆಲವು ವಿಚಾರಗಳನ್ನ ಬಹಿರಂಗವಾಗಿ ಹೇಳೊಕೆ ಆಗಲ್ಲ. ನನಗೆ ಅಸಮಾಧಾನ ಅನ್ನೋದನ್ನ ಎಲ್ಲಿಯಾದರೂ ಹೇಳಿದಿನಾ..? ಕೆಲವೊಂದಿಷ್ಟು ಮನವಿ ಮಾಡಿದ್ದೀನಿ. ಅದನ್ನ ಬಹಿರಂಗವಾಗಿ ಹೇಳೋಕೆ ಆಗಲ್ಲ. ಮನವಿಯನ್ನ ಬಗೆಹರಿಸೋದು ಅವರಿಗೆ ಬಿಟ್ಟಿದ್ದು. ಖಾತೆ ಗುಡ್ ಎಂದರು, ಆದರೆ ತೃಪ್ತಿ ಬಗ್ಗೆ ಮಾತನಾಡಲಿಲ್ಲ.
ಖಾತೆ ವಿಚಾರಕ್ಕೆ ಮುನಿಸಿಕೊಂಡಿದ್ದ ಸಚಿವ ಆನಂದ್ ಸಿಂಗ್ ಇತ್ತೀಚೆಗೆ ದೆಹಲಿಗೆ ತೆರಳಿ ಪ್ರಬಲ ಖಾತೆಯನ್ನು ಪಡೆಯಲು ಲಾಭಿ ನಡೆಸಿದ್ದರು. ಆದರೆ, ಇದು ಸಾಧ್ಯವಾಗದಿದ್ದಾಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳು ರಾಜ್ಯ ರಾಜಕಾರಣದಲ್ಲಿ ಕೇಳಿ ಬರುತ್ತಿದ್ದವು. ಆದರೆ ಈ ಮುನಿಸು ಸದ್ಯಕ್ಕೆ ಶಮನವಾಗಿದೆ ಎನ್ನಲಾಗಿದ್ದು, ಆನಂದ್ ಸಿಂಗ್ ಕೊನೆಗೂ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.